![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
Team Udayavani, Jan 29, 2025, 7:10 AM IST
ಮೇಷ: ಮನಸ್ಸಿನ ಬಯಕೆಗಳು ಮುಕ್ಕಾಲುಪಾಲು ಈಡೇರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಅನುಕೂಲ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.
ವೃಷಭ: ಪಾಲುದಾರಿಕೆ ವ್ಯಾಪಾರದಲ್ಲಿ ಮಧ್ಯಮ ಲಾಭ. ಉದ್ಯೋಗಸ್ಥರಿಗೆ ಶುಭವಾರ್ತೆ. ಹಣ್ಣು, ತರಕಾರಿ ಸಹಿತ ಕೃಷ್ಯುತ್ಪನ್ನಗಳಿಂದ ಲಾಭ. ಸರಕಾರಿ ನೌಕರರಿಗೆ ವರ್ಗಾವಣೆಯ ಶಂಕೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ.
ಮಿಥುನ: ಅನುಕೂಲವಾಗಿ ಬದಲಾದ ಪ್ರತಿಕೂಲ ಪರಿಸ್ಥಿತಿ. ಉದ್ಯೋಗದಲ್ಲಿ ಹಿತಶತ್ರುಗಳ ಕಾಟಶಮನ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಉದ್ಯಮ ಅಭಿವೃದ್ಧಿಯ ಹೊಸ ಪರ್ವ ಆರಂಭ. ಸಂಗಾತಿಯಿಂದ ಉತ್ತಮ ಸಹಕಾರ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಸಹಕಾರ. ಉದ್ಯಮ ವಿಸ್ತರಣೆಯ ಪ್ರಕ್ರಿಯೆ ಆರಂಭ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ. ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಅವಕಾಶ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.
ಸಿಂಹ: ಅಜಾತಶತ್ರುವಾಗಿ ವಿಜೃಂಭಿಸಿದ್ದೀರಿ. ಹಿತಶತ್ರುಗಳ ಪಿತೂರಿಗೆ ಸೋಲು. ಉದ್ಯಮದಲ್ಲಿ ಲಾಭದಾಯಕ ಪ್ರಗತಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.ವ್ಯವಹಾರಕ್ಕಾಗಿ ಅವಸರದ ಪ್ರಯಾಣ.
ಕನ್ಯಾ: ಹಿತಾನುಭವದ ದಿನ. ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಯೋಜನೆಗೆ ಚಾಲನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.
ತುಲಾ: ಭವಿಷ್ಯದಲ್ಲಿ ಏನಾದೀತೆಂಬ ಅಂಜಿಕೆ ಬೇಡ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಹಳೆಯ ಸಮಸ್ಯೆ ಪರಿಹಾರ.ನ್ಯಾಯಾಲಯದಲ್ಲಿ ಅನುಕೂಲಕರ ತೀರ್ಪು. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.
ವೃಶ್ಚಿಕ: ಸುಖ- ದುಃಖ, ಲಾಭ- ನಷ್ಟದ ಚಿಂತೆ ಬೇಡ. ಉದ್ಯೋಗದಲ್ಲಿ ಉನ್ನತಿಯಾಗದಿದ್ದರೂ ಕೊರತೆ ಇರಲಾರದು. ವಸ್ತ್ರಾಭರಣ ಖರೀದಿ. ದೂರದಲ್ಲಿರುವ ಬಂಧುಗಳ ಆಗಮನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮ.
ಧನು: ಉದ್ಯೋಗದಲ್ಲಿ ಮುನ್ನಡೆಯಲು ಅನುಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ.
ಮಕರ: ಆಶಾವಾದವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜಯ. ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ.ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿಗಳಿಂದ ಅಧಿಕ ಲಾಭ.
ಕುಂಭ: ಶೀಘ್ರ ಕಾರ್ಯಸಾಧಿಸಿದ ತೃಪ್ತಿ. ಉದ್ಯೋಗ, ವ್ಯವಹಾರಗಳ ಆತಂಕ ದೂರ. ಹಿರಿಯರ ಮನೆಯಲ್ಲಿ ಶುಭಕಾರ್ಯ. ಇನ್ನಷ್ಟು ಸೇವಾ ಚಟುವಟಿಕೆಗಳಲ್ಲಿ ಭಾಗಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.
ಮೀನ: ನಿರೀಕ್ಷೆಗಿಂತ ಹೆಚ್ಚು ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ಸೋದರ ವರ್ಗದಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಮರುದಿನದ ಮುಖ್ಯ ವ್ಯವಹಾರದ ಚಿಂತನೆ.
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Daily Horoscope: ಮೋಸದ ಬಲೆ ಹೆಣೆಯುವವರಿಂದ ದೂರವಿರಿ…ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ
You seem to have an Ad Blocker on.
To continue reading, please turn it off or whitelist Udayavani.