![Delay in compensation, seizure of items in the Minor Irrigation Department](https://www.udayavani.com/wp-content/uploads/2025/02/dharwad-1-415x224.jpg)
![Delay in compensation, seizure of items in the Minor Irrigation Department](https://www.udayavani.com/wp-content/uploads/2025/02/dharwad-1-415x224.jpg)
Team Udayavani, Jan 30, 2025, 7:26 AM IST
ಮೇಷ: ಸಂದಿಗ್ಧ ಪರಿಸ್ಥಿತಿ ಬಂದಾಗ ಸಮಯ ಪ್ರಜ್ಞೆ ಮೇಲುಗೈ ಸಾಧಿಸಲಿ. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ಒಂದು ಬಗೆಯ ಕಳವಳ ಸಣ್ಣ ಉದ್ಯಮಿಗಳ ಸಮಸ್ಯೆಗಳುಪರಿಹಾರ.
ವೃಷಭ: ದಿನದಿಂದ ದಿನಕ್ಕೆ ವ್ಯತ್ಯಾಸವಾಗುವ ಪರಿಸ್ಥಿತಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಶೋಧನೆ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.
ಮಿಥುನ: ಮನೋಬಲ ವೃದ್ಧಿಯಿಂದ ಅನುಕೂಲ ಪರಿಸ್ಥಿತಿ. ಹೊಸದಾಗಿ ಸೇರ್ಪಡೆ ಗೊಂಡವರ ತರಬೇತಿ ಹೊಣೆ. ಸ. ನೌಕರರಿಗೆ ಕೊಂಚ ಆತಂಕ. ಮಿತ್ರರೊಂದಿಗೆ ಅನವಶ್ಯ ವೈಮನಸ್ಯದ ಸಾಧ್ಯತೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.
ಕರ್ಕಾಟಕ: ಪ್ರಾಮಾಣಿಕತೆ, ದಕ್ಷತೆಗಳೇ ಕೀರ್ತಿ ತರುವ ಸಾಧನಗಳು. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ. ನಿಸ್ವಾರ್ಥಿ ಜನಸೇವಕರ ಹೆಸರು ಕೆಡಿಸುವ ಹುನ್ನಾರ ವಿಫಲ.
ಸಿಂಹ: ಧೈರ್ಯ, ಸಾಹಸಗಳೇ ನಿಮ್ಮ ಸಾಧನಗಳು. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ಹೊಸರೂಪದೊಂದಿಗೆ ಕಾಯಕಲ್ಪ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ವಾಹನ ಚಾಲನೆಯಲ್ಲಿ ಎಚ್ಚರ.
ಕನ್ಯಾ: ವ್ಯವಹಾರ, ಉದ್ಯೋಗ ಎರಡಲ್ಲೂ ಸ್ಥೆçರ್ಯ ವರ್ಧನೆ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ ವಿಸ್ತರಣೆ. ಹಳೆಯ ವಿದ್ಯಾಲಯ ಅಭಿವೃದ್ಧಿಯ ನೇತೃತ್ವ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ.
ತುಲಾ: ಉದ್ಯೋಗಸ್ಥರಿಗೆ ಮುಂದುವರಿದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ.ವಧೂ ವರಾನ್ವೇಷಣೆಯಲ್ಲಿ ಪ್ರಗತಿ. ಲೇವಾದೇವಿ ವ್ಯವಹಾರ ದಲ್ಲಿ ನಷ್ಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ದೈವಬಲ, ಧನಬಲದ ಜತೆಗೆ ಮನೋಬಲವೂ ವೃದ್ಧಿ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದ ಕ್ಷೇಮಕ್ಕಾಗಿ ದೇವತಾರಾಧನೆ.
ಧನು: ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ಸವಲತ್ತುಗಳು ಲಭ್ಯ. ಸಹಾಯ.ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ.
ಮಕರ: ಕಾಲಚಕ್ರ ಉರುಳಿದಂತೆ ಕಷ್ಟ, ಸುಖಗಳ ಅನುಭವ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ಹಿತಶತ್ರುಗಳ ಮಸಲತ್ತಿಗೆ ಸೋಲು. ನಷ್ಟದಿಂದ ಚೇತರಿಸಲು ಉದ್ಯಮಿಗಳ ಪ್ರಯತ್ನ. ಕರಕುಶಲ ಸಾಮಗ್ರಿ ಉದ್ಯಮಿಗಳಿಗೆ ಅನುಕೂಲದ ವಾತಾವರಣ.
ಕುಂಭ: ನಿರಂತರ ಶ್ರಮ, ದೈವಾನುಗ್ರಹದಿಂದ ಅನುಕೂಲ. ಕೆಲಸ, ಕಾರ್ಯಗಳಲ್ಲಿ ಮುನ್ನಡೆ.. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಕಲೋಪಾಸನೆಯಲ್ಲಿ ಆಸಕ್ತರಿಗೆ ಹರ್ಷ.
ಮೀನ: ವಾತಾವರಣ ಮಧ್ಯಮವಾಗಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಗೃಹೋಪಯೋಗಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ
Dharwad: ಪರಿಹಾರ ವಿಳಂಬ, ಸಣ್ಣ ನೀರಾವರಿ ಇಲಾಖೆಯಲ್ಲಿನ ವಸ್ತುಗಳು ಜಪ್ತಿ
BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್
Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು
Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ
Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.