Daily Horoscope: ಅವಿವಾಹಿತ ಹುಡುಗರಿಗೆ ಯೋಗ್ಯ ಕನ್ಯೆಯರು ಸಿಗುವ ಸಾಧ್ಯತೆ
Team Udayavani, Jan 5, 2024, 7:14 AM IST
ಮೇಷ: ಉದ್ಯೋಗದಲ್ಲಿ ನಿಮ್ಮ ಪ್ರಾವೀಣ್ಯಕ್ಕೆ ಮನ್ನಣೆ. ವ್ಯವಹಾರದಲ್ಲಿ ವಿವೇಕಯುತ ನಡೆಯಿಂದ ಯಶಸ್ಸು. ಕಾರ್ಯಕ್ಷೇತ್ರ ವಿಸ್ತರಣೆಗೆ ಅವಸರ ಪಡದೆ ಸೂಕ್ತ ಸಮಯಕ್ಕೆಕಾದರೆ ಅನುಕೂಲ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಹೇರಳ ಲಾಭ.
ವೃಷಭ: ವ್ಯವಹಾರ ಕ್ಷೇತ್ರದಲ್ಲಿ ಅಪರಿಚಿತ ರಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಅನಿರೀಕ್ಷಿತ ಧನಾಗಮದ ಸಾಧ್ಯತೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕ ಮಕ್ಕಳ ವಿವಾಹಕ್ಕೆ ಎದುರಾದ ಅಡಚಣೆ ನಿವಾರಣೆ.
ಮಿಥುನ: ಬರಬೇಕಾಗಿದ್ದ ಧನಸಹಾಯ ವಿಳಂಬ. ಉದ್ಯೋಗದಲ್ಲಿ ತೋರಿದ ಕಾರ್ಯ ದಕ್ಷತೆಯಿಂದ ಮೇಲಧಿಕಾರಿಗಳಿಗೆ ತೃಪ್ತಿ. ಸತ್ಕಾರ್ಯಕ್ಕೆ ದಾನಮಾಡಿದ ಉದ್ಯಮಿಗಳಿಗೆ ಪುರಸ್ಕಾರ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ.
ಕರ್ಕಾಟಕ: ಮಾನಸಿಕ ತುಮುಲದಿಂದ ಬಿಡುಗಡೆ ಹೊಂದಲು ಪ್ರಯತ್ನ. ಉದ್ಯೋಗ ಬದಲಾವಣೆಗೆ ಚಿಂತನೆ. ಪ್ರತಿಕೂಲ ಹವೆಯಿಂದ ಹಿರಿಯರ ಆರೋಗ್ಯದ ಮೇಲೆ ಪರಿಣಾಮ.ವಿದ್ಯಾರ್ಥಿ ಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು.
ಸಿಂಹ: ಗುರು ದೇವತಾನುಗ್ರಹಕ್ಕಾಗಿ ಪ್ರಾರ್ಥ ನೆಯಿಂದ ಶುಭಫಲ. ವಿದ್ಯಾರ್ಥಿಗಳಿಗೆ ಲೋಕಜ್ಞಾನ ವೃದ್ಧಿಗೆ ಅನುಕೂಲ ವಾತಾವರಣ. ದಿಢೀರನೆ ಕ್ರಿಯೆಗಿಳಿಯದೆ ಪೂರ್ವಾಪರ ವಿಮರ್ಶಿಸಿ ಮುಂದಡಿಯಿಡುವುದರಿಂದ ಕಾರ್ಯ ಯಶಸ್ವಿ.
ಕನ್ಯಾ: ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ದೀರ್ಘಕಾಲದಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಲಭ್ಯ.ಉದ್ಯೋಗದಲ್ಲಿ ಕೆಲವರಿಗೆ ಪದೋನ್ನತಿ ಸಂಭವ. ಅವಿವಾಹಿತ ಹುಡುಗರಿಗೆ ಯೋಗ್ಯ ಕನ್ಯೆಯರು ಸಿಗುವ ಸಾಧ್ಯತೆ. ಸೊÌàದ್ಯೋಗಸ್ಥ ಗೃಹಿಣಿಯರಿಗೆ ನೆಮ್ಮದಿ.
ತುಲಾ: ಮಕ್ಕಳ ಭವಿಷ್ಯ ಯೋಜನೆ ನಿರೂಪಣೆ ಯಲ್ಲಿ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಹೊಸಬರ ಸೇರ್ಪಡೆ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಯಿಂದ ಶಿಕ್ಷಕರಿಗೆ ಹರ್ಷ. ಕೃಷಿ ಭೂಮಿಯಲ್ಲಿ ಉತ್ತಮ ಫಸಲಿನ ನಿರೀಕ್ಷೆ.
ವೃಶ್ಚಿಕ: ಅನ್ಯಾಯಕ್ಕೆ ಪ್ರತೀಕಾರ ಬೇಡ. ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಗಳಿಸಲು ಪ್ರಯತ್ನಿಸಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಪಷ್ಟ ಸುಧಾರಣೆ. ಹವಾಮಾನದಿಂದ ವ್ಯತ್ಯಾಸಗೊಂಡಿದ್ದ ಹಿರಿಯರ ಆರೋಗ್ಯ ಸುಧಾರಣೆ.
ಧನು: ಅನಿರೀಕ್ಷಿತ ಧನಾಗಮ. ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ ಶ್ರೇಯಸ್ಸು. ಸಣ್ಣ ಗೃಹೋದ್ಯಮ ಆರಂಭಿಸಲು ಕೆಲವರ ಒಲವು.ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ.
ಮಕರ: ನೂತನ ವಸ್ತ್ರ ಖರೀದಿ. ಹೊಸ ಅವಕಾಶಗಳಿಗಾಗಿ ಹುಡುಕಾಟ. ಸಹೋ ದ್ಯೋಗಿಗಳಿಂದ ಸಹಕಾರ. ಕೊಂಚ ಕಾಲದಿಂದ ಬಾಧಿಸು ತ್ತಿದ್ದ ಸಾಂಸಾರಿಕ ಬಿಕ್ಕಟ್ಟು ದೂರ. ಮಹಿಳೆಯರ ಸ್ವಾವಲಂಬನೆ ಯೋಜನೆಗೆ ಉÇÉೇಖಾರ್ಹ ಯಶಸ್ಸು.
ಕುಂಭ: ಸಂಚಿತ ಧನ ಸದ್ವಿನಿಯೋಗಕ್ಕೆ ಆತುರ ಬೇಡ. ಹೊಸಬರಾದ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಸೇವಾಪರತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ಸಣ್ಣ ತೊಂದರೆಗಾಗಿ ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರವಾಗಿ ಮನೆಮಂದಿಗೆ ಹರ್ಷ.
ಮೀನ: ಉದ್ಯೋಗದಲ್ಲಿ ಯಶಸ್ಸು. ವ್ಯವಹಾರದಲ್ಲಿ ಅಪರಿಮಿತ ಸಾಧನೆಯ ದಿನ. ಹಣಕಾಸು ವ್ಯವಹಾರ ಸ್ಥಿರ. ಸರಕಾರಿ ಇಲಾಖೆಗಳಲ್ಲಿ ಸುಲಭವಾಗಿ ಕಾರ್ಯಸಿದ್ಧಿ. ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.