Daily Horoscope: ಕೆಲ ದಿನಗಳಿಂದ ಅನುಭವಿಸುತ್ತಿದ್ದ ಸಂಕಟದಿಂದ ಮುಕ್ತಿ
Team Udayavani, Jan 7, 2024, 7:15 AM IST
ಮೇಷ: ವಿರಾಮದ ಆನಂದವನ್ನು ಅನುಭವಿಸು ವುದರೊಂದಿಗೆ ಸಮಯದ ಸದುಪಯೋಗಕ್ಕೆ ಯೋಜನೆಗಳು! ನೌಕರ ವರ್ಗದವರಿಂದ ಸಂತೋಷಾ ಚರಣೆ. ಬಂಧು-ಮಿತ್ರರಲ್ಲಿಗೆ ಕುಟುಂಬ ಸಹಿತ ಸಂದರ್ಶನ. ಬಂಧುಗಳ ಮನೆಯಲ್ಲಿ ಶುಭಕಾರ್ಯ.
ವೃಷಭ: ದೇವಾಲಯಕ್ಕೆ ಕುಟುಂಬ ಸಹಿತ ಭೇಟಿ. ಮುಂದಿನ ಸಪ್ತಾಹದ ಪ್ರಮುಖ ಕಾರ್ಯಗಳಿಗೆ ಪೂರ್ವಸಿದ್ಧತೆ. ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಅನೌಪಚಾರಿಕ ಭೇಟಿ. ಕೃಷಿ ಕ್ಷೇತ್ರದಲ್ಲಿ ಹೊಸ ವಿಧಾನಗಳ ಅಳವಡಿಕೆ.
ಮಿಥುನ: ಸಾಮಾನ್ಯವಾಗಿ ಎಲ್ಲ ವರ್ಗ, ಅಂತಸ್ತುಗಳವರಿಗೂ ಸಮಾಧಾನದ ದಿನ. ಉದ್ಯಮಿಗಳನ್ನು ಕಾಡುತಿದ್ದ ಸಣ್ಣ ಆತಂಕ ನಿವಾರಣೆ. ದೂರದ ಬಂಧುಗಳು ಮತ್ತು ಹಳೆಯ ಮಿತ್ರರೊಂದಿಗೆ ಮಿಲನ. ತಾಯಿಯ ಕಡೆಯ ಬಂಧುಗಳ ಆಗಮನ.
ಕರ್ಕಾಟಕ: ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿಮರ್ಶೆ. ಸಮಾಜದ ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯ. ಉದ್ಯಮದ ಹೊಸ ಉತ್ಪನ್ನಗಳ ಬಗ್ಗೆ ಪ್ರಚಾರ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.
ಸಿಂಹ: ಎಲ್ಲ ಕ್ಷೇತ್ರಗಳ ಹೊಣೆಗಾರಿಕೆಗಳಿಗೆ ತಾತ್ಕಾಲಿಕ ಬಿಡುವು. ಸಂಸಾರ ಸಹಿತ ಪ್ರಾಕೃತಿಕ ತಾಣದಲ್ಲಿ ಕಾಲ ಯಾಪನೆ. ನಿರ್ಮಾಣ ವೃತ್ತಿಯವರಿಗೆ ಒತ್ತಡದಿಂದ ಸ್ವಲ್ಪ ಬಿಡುಗಡೆ. ವಸ್ತ್ರ, ಸಿದ್ಧ ಉಡುಪು, ಮೊದಲಾದ ಕೆಲವು ಬಗೆಯ ವ್ಯಾಪಾರಿಗಳಿಗೆ ಲಾಭ.
ಕನ್ಯಾ: ಕೆಲವು ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಆರಂಭ. ಕೌಟುಂಬಿಕ ವ್ಯವಹಾರದ ಸಂಬಂಧ ದಕ್ಷಿಣದ ಊರಿಗೆ ಭೇಟಿ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಸಂಗೀತ ಶ್ರವಣ, ಸತ್ಸಂಗಕ್ಕೆ ಸಮಯ ಹೊಂದಾಣಿಕೆ.
ತುಲಾ: ನಿಷ್ಪ್ರಯೋಜಕವೆಂದು ಬಗೆದಿದ್ದ ಯೋಜ ನೆಗಳನ್ನು ಉಪಯುಕ್ತಗೊಳಿಸುವ ಪ್ರಯತ್ನದಲ್ಲಿ ಯಶಸ್ಸು. ಸ್ವಂತ ಆರೋಗ್ಯದ ಬಗೆಗೆ ನಿರ್ಲಕ್ಷÂ ಸಲ್ಲದು. ಹಳೆಯ ಬಂಧುಗಳ ಮನೆಗೆ ಭೇಟಿ. ದೇವಮಂದಿರ ಸಂದರ್ಶನ. ಸಂಸಾರದಲ್ಲಿ ಆರೋಗ್ಯ ವೃದ್ಧಿ.
ವೃಶ್ಚಿಕ: ಸಾಮಾಜಿಕ ಕಾರ್ಯಗಳಲ್ಲಿ ಸೇರಿಕೊಳ್ಳುವ ಆಸಕ್ತಿ. ಮನೆಯಲ್ಲಿ ಪ್ರೀತಿಯ ವಾತಾವರಣ. ದಿನವಿಡೀ ಒಳ್ಳೆಯ ಅನುಭವಗಳ ಆನಂದ. ಅಧ್ಯಯನ ಹಾಗೂ ಪಾಠೇತರ ಚಟುವಟಿಕೆ ಇವೆರಡರಲ್ಲೂ ಮಕ್ಕಳ ಶ್ಲಾಘನಾರ್ಹ ಸಾಧನೆ.
ಧನು: ದೇವತಾನುಗ್ರಹ ಉತ್ತಮ. ಕೆಲವು ದಿನ ಗಳಿಂದ ಅನುಭವಿಸುತ್ತಿದ್ದ ಸಂಕಟದಿಂದ ಮುಕ್ತಿ. ಮನೆಮಂದಿಯೊಂದಿಗೆ ವ್ಯವಸಾಯ ಕ್ಷೇತ್ರಕ್ಕೆ ಭೇಟಿ. ಹೈನುಗಾರಿಕೆಯಲ್ಲಿ ಪ್ರಗತಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ಅನುಭವ.
ಮಕರ: ಉದ್ಯೋಗಕ್ಕೆ ವಿರಾಮವಿದ್ದರೂ ಮನಸ್ಸಿಗೆ ಮಾತ್ರ ಒತ್ತಡ. ಮಕ್ಕಳಿಗೆ ರಜಾ ದಿನದ ಸದುಪಯೋಗಕ್ಕೆ ಮಾರ್ಗದರ್ಶನ. ಧಾರ್ಮಿಕ ಚಟುವಟಿಗಕೆಗಳಲ್ಲಿ ಪಾಲುಗೊಳ್ಳುವಿಕೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ಸಂದರ್ಶನ.
ಕುಂಭ: ದಿನವಿಡೀ ಬಿಡುವಿಲ್ಲದ ಕಾರ್ಯಗಳ ನಡುವೆ ಮಕ್ಕಳಿಗೆ ರಂಜನೆ ನೀಡಿಕೆ. ಸಾಮಾ ಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳು. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ. ಗೃಹಿಣಿಯರ ಸೊÌàದ್ಯೋಗ ಯೋಜನೆಗಳ ಮುನ್ನಡೆ.
ಮೀನ: ಅರ್ಧದಲ್ಲಿ ನಿಂತಿದ್ದ ಕಾರ್ಯಗಳು ಶೀಘ್ರ ಪುನರಾರಂಭ. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಶನಿ ಪ್ರಭಾವದಿಂದ ಕಾರ್ಯ ವಿಳಂಬ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಪಾಲುಗೊಳ್ಳುವಿಕೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ದಾಂಪತ್ಯ ಜೀವನ ಸುಖಮಯ, ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.