Daily Horoscope: ಹವಾಮಾನ ವೈಪರೀತ್ಯದಿಂದ ಹಿರಿಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ
Team Udayavani, Jul 15, 2024, 7:17 AM IST
ಮೇಷ: ಸಪ್ತಾಹ ಆರಂಭದ ದಿನ ಉದ್ಯೋಗಸ್ಥರಿಗೆ ಕಿರಿಕಿರಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರು, ನಿರ್ಮಾಣ ಸಾಮಗ್ರಿ ವಿತರಕರಿಗೆ ಮಾಮೂಲು ಒತ್ತಡ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಶಾಲಾ ಮಕ್ಕಳಿಗೆ ಉತ್ಸಾಹ ವೃದ್ಧಿ.
ವೃಷಭ: ಸರಕಾರಿ ನೌಕರರಿಗೆ ಶುಭ ಸಮಾಚಾರ. ಸಹಕಾರಿ ಕ್ಷೇತ್ರದವರಿಗೆ ಜವಾಬ್ದಾರಿ ಹೆಚ್ಚಳ. ಮುದ್ರಣ ಕ್ಷೇತ್ರದವರಿಗೆ ಸಮಯ ದೊಂದಿಗೆ ಮೇಲಾಟ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳ ಮುನ್ನಡೆ.
ಮಿಥುನ: ಸಹಕಾರಿ ರಂಗದವರಿಗೆ ಗುರಿ ತಲುಪುವ ಒತ್ತಡ. ಪತ್ರಕರ್ತರಿಗೆ ರಾಜಕಾರಣಿಗಳ ಕಾಟ. ಕೃಷಿ ಸಾಧನಗಳು, ಕೃಷ್ಯುತ್ನನ್ನಗಳು, ರಸಗೊಬ್ಬರಗಳು ಮೊದಲಾದ ಸಾಮಗ್ರಿಗಳ ವಿತರಕರಿಗೆ ಲಾಭ.
ಕರ್ಕಾಟಕ: ಹವಾಮಾನ ವೈಪರೀತ್ಯದಿಂದ ಹಿರಿಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಸ್ವಂತ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸೆಣಸಾಟ.
ಸಿಂಹ: ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಉದ್ಯೋಗಾಸಕ್ತರಿಗೆ ಸದವಕಾಶ.
ಕನ್ಯಾ: ಆಪ್ತರಿಂದ ನಿರೀಕ್ಷಿತ ಸಹಾಯ ಪ್ರಾಪ್ತಿ. ನಿಯೋಜಿತ ಕಾರ್ಯ ಸಕಾಲದಲ್ಲಿ ಮುಕ್ತಾಯ. ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ. ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಕೆಲಸ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ಪರಿಸರ ಅಭಿವೃದ್ಧಿಯಲ್ಲಿ ಆಸಕ್ತಿ. ಅಪರೂಪದ ಬಂಧುಗಳ ಭೇಟಿ. ಗೃಹಿಣಿಯರಿಗೆ ನೆಮ್ಮದಿ.
ವೃಶ್ಚಿಕ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಪೀಠೊಪಕರಣ ನಿರ್ಮಾಪಕರಿಗೆ ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.
ಧನು: ವ್ಯಾಪಾರ ವಿಸ್ತರಣೆಗೆ ಚಿಂತನೆ. ವಸ್ತ್ರ, ಆಭರಣ, ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೀಠೊಪಕರಣ ತಯಾರಿ, ಉಡುಪು ತಯಾರಿ ಕಸಬುದಾರರಿಗೆ ಕೈತುಂಬಾ ಕೆಲಸ.ಬೌದ್ಧಿಕ ಕಾರ್ಯಗಳಲ್ಲಿ ತೊಡಗಿರುವವರ ಮೇಲೆ ಒತ್ತಡ.
ಮಕರ: ಸಹನೆ, ಜಾಣತನಗಳಿಂದ ಸುಲಭ ವಾಗಿ ಕಾರ್ಯಸಾಧನೆ. ಸಹಕಾರಿಗಳ ಸಕಾ ಲಿಕ ನೆರವು. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.
ಕುಂಭ: ಆರೋಗ್ಯ ರಕ್ಷಣೆಯ ಕ್ರಮಗಳಲ್ಲಿ ಭಾಗಿ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರಿಗೆ ಹೊಸ ಜವಾಬ್ದಾರಿಗಳು. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ.
ಮೀನ: ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ. ವ್ಯವಹಾರಸ್ಥರಿಗೆ ಸಂಬಂಧಪಟ್ಟವರಿಂದ ಅನುಕೂಲದ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಯಲ್ಲಿ ಕುಟುಂಬದವರಿಂದ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.