Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ
Team Udayavani, Jun 17, 2024, 7:30 AM IST
ಮೇಷ: ಹೊಸ ಸಪ್ತಾಹದಲ್ಲಿ ಹಿಂದಿನದೇ ಪರಿಸ್ಥಿತಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯಮದಲ್ಲಿ ಮಾಮೂಲು ಸ್ಥಿತ್ಯಂತರಗಳು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ: ಉದ್ಯೋಗದಲ್ಲಿ ಸ್ಥಿತಿ ಸುಧಾರಣೆ.ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ವೃದ್ಧಿ. ದೂರದಲ್ಲಿರುವ ನೆಂಟರ ಆಗಮನ. ಧಾರ್ಮಿಕ ಸಾಹಿತ್ಯ ಅಧ್ಯಯನ. ದೇವತಾರಾಧನೆಯಿಂದ ಶ್ರೇಯ.
ಮಿಥುನ: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಕುಟುಂಬದ ಹಳೆಯ ಹಿತೈಷಿಯ ಭೇಟಿ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹೊಸಬರ ನೇಮಕ. ಉದ್ಯಮದ ಉತ್ಪಾದನೆಗಳ ಬೇಡಿಕೆ ಗೆ ಹಿನ್ನಡೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ.
ಸಿಂಹ: ಸಾಹಸ ಪ್ರವೃತ್ತಿಗೆ ಗೆಲುವು. ಹೊಸ ಪಾಲುದಾರರಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ ಖರೀದಿ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ. ಕುಟುಂಬದಲ್ಲಿ ಸಂತಾನ ವೃದ್ಧಿ.
ಕನ್ಯಾ: ಶಾಂತಿ, ಸಮಾಧಾನದ ಕ್ಷಣಗಳು. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.
ತುಲಾ: ಎಲ್ಲ ಸಮಸ್ಯೆಗಳೂ ಪರಿಹಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.
ವೃಶ್ಚಿಕ: ಸಂಪೂರ್ಣ ಸಹಜ ಸ್ಥಿತಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದಲ್ಲಿ ಹೊಸ ವಸ್ತುಗಳ ಉತ್ಪಾದನೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ನೆಂಟರ ಆಗಮನದಿಂದ ಹಬ್ಬದ ವಾತಾವರಣ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.
ಧನು: ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮ ಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ.
ಮಕರ: ಉದ್ಯೋಗಸ್ಥರಿಗೆ ಗೌರವ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಮಾಮೂಲಿನಂತೆ ಲಾಭ. ಭೂಮಿ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.
ಕುಂಭ: ಲಾಭದಾಯಕ ಯೋಜನೆಗಳಲ್ಲಿ ಹಣ ಹೂಡಿಕೆ. ಉದ್ಯಮದಲ್ಲಿ ಕ್ರಮಾಗತ ಪ್ರಗತಿ. ದೂರದಲ್ಲಿರುವ ಬಂಧುಗಳ ಆಗಮನ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.
ಮೀನ: ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಯಕಡೆಯ ಹಿರಿಯರ ಆಗಮನ. ಅನ್ಯಸಮಾಜದ ವ್ಯಕ್ತಿಗಳಿಂದ ಸಕಾಲಿಕ ಸಹಾಯ. ವ್ಯವಹಾರ ಸಂಬಂಧ ಗಣ್ಯ ವ್ಯಕ್ತಿಯ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.