![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jun 19, 2024, 7:22 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ. ಉದ್ಯಮದ ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಮಾಧ್ಯಮ ಗಳಲ್ಲಿರುವವರು ಎಚ್ಚರದಲ್ಲಿ ನಡೆಯಿರಿ.
ವೃಷಭ: ಉದ್ಯೋಗ ಸ್ಥಾನದಲ್ಲಿ ಕೊಂಚ ಹಿನ್ನಡೆ. ನ್ಯಾಯಕ್ಕಾಗಿ ಹೋರಾಟದಲ್ಲಿ ಜಯ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.
ಮಿಥುನ: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ ನೆರವು ಪ್ರಾಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ.
ಕರ್ಕಾಟಕ: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಆಪ್ತಮಿತ್ರನಿಂದ ಶುಭವಾರ್ತೆ. ಆಹಾರಧಾನ್ಯ ಮಾರಾಟದಿಂದ ಉತ್ತಮ ಲಾಭ. ವ್ಯವಹಾರ ಸಂಬಂಧ ಪಶ್ಚಿಮದ ಕಡೆಗೆ ಪ್ರಯಾಣ.
ಸಿಂಹ: ಸಾಮರ್ಥ್ಯದ ಸಂಪೂರ್ಣ ಉಪ ಯೋಗಕ್ಕೆ ಅವಕಾಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ದಿನ.
ಕನ್ಯಾ: ಕುಟುಂಬದ ಹಿರಿಯರ ಭೇಟಿ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಯಂತ್ರೋಪಕರಣಗಳ ಮಾರಾಟಗಾರರಿಗೆ ಮಧ್ಯಮ ಲಾಭ. ಅವಿವಾಹಿತರಿಗೆ ವಿವಾಹ ನಿಶ್ಚಯ.
ತುಲಾ: ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿ ಯಾದ ಗೌರವ ಪ್ರಾಪ್ತಿ. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಹರ್ಷ. ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಕೊಂಚ ಸುಧಾರಣೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಹಾದಿಯಲ್ಲಿ.
ಧನು: ತೀವ್ರ ಪರಿಶ್ರಮದಿಂದ ಸಂಪಾದನೆ ವೃದ್ಧಿ. ನೌಕರವೃಂದದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರ ಆದಾಯ ವೃದ್ಧಿ. ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥ ಉದ್ಯಮಕ್ಕೆ ಲಾಭ.
ಮಕರ: ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ. ಹಿರಿಯರ ಆರೋಗ್ಯದ ಕುರಿತು ಎಚ್ಚರ.
ಕುಂಭ: ಕುಗ್ಗದ ಹುರುಪಿನೊಂದಿಗೆ ಹೊಸ ದಿನ ಆರಂಭ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸವಾಲು. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ.
ಮೀನ: ದಿನದ ಆರಂಭದÇÉೇ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕಾರ್ಯಕ್ಷೇತ್ರ ವಿಸ್ತರಿಸಲು ಪಾಲುದಾರರ ಆಗ್ರಹ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅನುಕೂಲ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.