Daily Horoscope: ಕಾಲೆಳೆಯುವ ಪ್ರಯತ್ನಗಳನ್ನು ಕೊಡವಿ ಮುಂದಡಿಯಿಡುವುದರಿಂದ ವಿಜಯ
Team Udayavani, Mar 16, 2024, 7:10 AM IST
ಮೇಷ: ಗಟ್ಟಿ ನಿರ್ಧಾರದೊಂದಿಗೆ ಗುರಿಯ ಮೇಲೆ ಪ್ರಯತ್ನವನ್ನು ಕೇಂದ್ರೀಕರಿಸಿ. ಹಿರಿಯರ ಆರೋಗ್ಯ ಸ್ಥಿರ. ಮನೆಯಲ್ಲಿ ಮಂಗಲ ಕಾರ್ಯದ ಯೋಜನೆ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ. ಸಾಮಾಜಿಕ ಕಾರ್ಯಕರ್ತರ ಹೆಸರು ಕೆಡಿಸುವ ಪ್ರಯತ್ನ.
ವೃಷಭ: ಕಾರ್ಯದ ವೇಗಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ನಿರ್ಲಕ್ಷಿಸಿರಿ. ಒತ್ತಡಗಳಿಗೆ ಮಣಿಯದೆ ಮುನ್ನುಗ್ಗಿದರೆ ಜಯ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ಪ್ರಯತ್ನಕ್ಕೆ ವಿಜಯ. ಹಿತೈಷಿಯ ಆಪ್ತ ಸಲಹೆ ಪಾಲನೆಯಿಂದ ಆಪತ್ತು ದೂರ.
ಮಿಥುನ: ದಾನ ಧರ್ಮಾದಿಗಳು ಹಾಗೂ ದೇವತಾರಾಧನೆಯಲ್ಲಿ ಮನಸ್ಸು. ಕಾಲೆಳೆಯುವ ಪ್ರಯತ್ನಗಳನ್ನು ಕೊಡವಿ ಮುಂದಡಿ ಯಿಡುವುದರಿಂದ ವಿಜಯ. ಗೃಹೋಪಕರಣ ವ್ಯಾಪಾರಿ ಗಳಿಗೆ ಲಾಭ. ಮಕ್ಕಳಿಂದ ಮನೆಮಂದಿಗೆ ಆನಂದ.
ಕರ್ಕಾಟಕ: ಚಿಂತೆಗಳ ಸರಪಣಿಯಿಂದ ನಿಮ್ಮ ಮನಸ್ಸನ್ನು ನೀವೇ ಕಟ್ಟಿಹಾಕಿಕೊಳ್ಳದಿರಿ. ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭವಾಗುವುದು. ಉತ್ತರದ ಗೆಳೆಯರಿಂದ ಶುಭ ವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ನೌಕರಿ ಸಿಗುವ ಯೋಗ.
ಸಿಂಹ: ಕಿರಿಯ ಸಹಾಯಕರಿಗೆ ಪೋ›ತ್ಸಾಹದಿಂದ ಲಾಭ ವೃದ್ಧಿ. ನಿರೀಕ್ಷಿತ ಮೊತ್ತದ ಧನ ಕೈಸೇರಿ ಸಮಾಧಾನ. ಸಾಹಸ ಪ್ರವೃತ್ತಿಯೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿರುವ ಕಾರಣ ಯಶಸ್ಸಿನೊಡನೆ ಜನಾದರವೂ ಪ್ರಾಪ್ತಿ. ಪರಿಸರದ ಅಭಿವೃದ್ಧಿ ಕಾರ್ಯ.
ಕನ್ಯಾ: ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪೋ›ತ್ಸಾಹದಿಂದ ಸಮಾಧಾನ. ದೀರ್ಘಕಾಲೀನ ಹೂಡಿಕೆಗಳಿಂದ ಲಾಭ ಗಳಿಕೆ.ಅವಿವಾಹಿತರಿಗೆ ಶೀಘ್ರ ವಿವಾಹ ಸಂಭವ. ಉದ್ಯೋಗಾಸಕ್ತರಿಗೆ ಶುಭ ಸೂಚನೆ. ಸ್ಯಯಂ ಉದ್ಯೋಗಾಸಕ್ತರಿಗೆ ಅವಕಾಶ ಪ್ರಾಪ್ತಿ.
ತುಲಾ: ಜಯಾಪಜಯಗಳ ಲೆಕ್ಕಾಚಾರವಿಲ್ಲದೆ ಮುನ್ನಡೆದರೆ ಯಶಸ್ಸು. ಪರಿಸರದ ಪೋತ್ಸಾಹ ಪ್ರಗತಿಗೆ ಪೂರಕ. ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಧನ ಕೈಸೇರಿ ಸಮಾಧಾನ. ಗೃಹಿಣಿಯರಿಗೆ ಸ್ವಯಂ ಆದಾಯ ವೃದ್ಧಿ. ಹಿರಿಯರಲ್ಲಿ ಹೆಚ್ಚಿದ ಜೀವನೋತ್ಸಾಹ.
ವೃಶ್ಚಿಕ: ಧನ ಸಂಚಯದಲ್ಲಿ ವಿಶೇಷ ಆಸಕ್ತಿ. ವೈದ್ಯರ ಭೇಟಿ ಸಂಭವ. ಮನೆ ನವೀಕರಣ ಹಾಗೂ ವಿಸ್ತರಣೆಗೆ ಸಿದ್ಧತೆ. ಸಣ್ಣ ಉದ್ಯಮಿಗಳ ಪ್ರಗತಿಗೆ ಅಡಚಣೆ. ವಿದ್ಯುದೋಪಕರಣಗಳ. ವಿತರಕರಿಗೆ ಲಾಭ. ಲೇವಾದೇವಿ ವ್ಯವಹಾರಸ್ಥರಿಗೆ ಗ್ರಹಾನುಕೂಲ ಇಲ್ಲ.
ಧನು: ಆಕಸ್ಮಿಕ ಧನಲಾಭ. ಉದ್ಯೋಗದಲ್ಲಿ ಪ್ರಗತಿ. ಸ್ವಂತ ಮನೆಯ ಕನಸು ನನಸಾದ ಸಂಭ್ರಮ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಹೂವಿನ ವ್ಯಾಪಾರಿಗಳಿಗೆ ಉತ್ತಮ ಲಾಭ.
ಮಕರ: ಉದ್ಯೋಗಸ್ಥರಿಗೆ ಶುಭ ಯೋಗ. ಅಲ್ಪಕಾಲದ ಹಣಕಾಸು ಯೋಜನೆಗಳಿಂದ ಲಾಭ. ಮಾತು ಕೃತಿಗಳಲ್ಲಿ ತಾಳ್ಮೆಯಿಂದ ವಿಶೇಷ ಲಾಭ. ಯಂತ್ರೋಪಕರಣ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ. ಬಂಧುಸಮಾನರಿಂದ ಅಯಾಚಿತ ಸಹಾಯ ಲಭ್ಯ.
ಕುಂಭ: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿರ. ಸಂಸಾರ ಸುಖ ಉತ್ತಮ. ದೇವತಾರಾಧನೆ, ದಾನಧರ್ಮಾದಿಗಳಲ್ಲಿ ವಿಶೇಷ ಆಸಕ್ತಿ.ದೂರದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ವ್ಯವಹಾರಸ್ಥರಿಗೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುವ ಯೋಗ.
ಮೀನ: ಗುರು ದೇವತಾರಾಧನೆ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಪರಿಚಿತರಿಂದ ಹೊಸ ವ್ಯವಹಾರ ಪ್ರಸ್ತಾವ. ಔಷಧ ವ್ಯಾಪಾರಿಗಳಿಗೆ ಶುಭ ಯೋಗ. ಕಟ್ಟಡ ನಿರ್ಮಾಪಕರಿಗೆ ಅಲ್ಪ ಲಾಭ. ದಂಪತಿಗಳ ನಡುವೆ ಅನುರಾಗ, ಹೊಂದಾಣಿಕೆ ವೃದ್ಧಿ. ಮಕ್ಕಳ ಪುರೋಭಿವೃದ್ಧಿ ಚಿಂತನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.