Daily Horoscope: ಕುಟುಂಬದಲ್ಲಿ ವಿವಾಹ ಮಾತುಕತೆ, ಬಂಧು ಮಿತ್ರರಿಂದ ಶುಭ ಸಮಾಚಾರ
Team Udayavani, Mar 17, 2024, 7:27 AM IST
ಮೇಷ: ಕಾರ್ಯಾಲಯಕ್ಕೆ ವಿರಾಮ. ವಿವಿಧ ಬಗೆಯ ಚಟುವಟಿಕೆಗಳು. ವ್ಯವಹಾರ ಕ್ಷೇತ್ರ ದಿಂದಲೂ ಕರೆ ಬರುವ ಸಂಭವ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ದೂರದಲ್ಲಿರುವ ಬಂಧು ಮಿತ್ರರಿಂದ ಶುಭ ಸಮಾಚಾರ. ಗೃಹಿಣಿಯರಿಗೆ ಸಮಾಧಾನದ ದಿನ.
ವೃಷಭ: ಕೆಲವೇ ಮಂದಿಗೆ ಸಣ್ಣ ಪ್ರವಾಸ ಯೋಗ. ಕುಟುಂಬದಲ್ಲಿ ಉಲ್ಲಾಸದ ಮನೋಭಾವ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಕುಟುಂಬದಲ್ಲಿ ವಿವಾಹ ಮಾತುಕತೆ. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ.
ಮಿಥುನ: ಪರ್ಯಾಪ್ತ ಪೂರ್ವಸಿದ್ಧತೆಯೊಂದಿಗೆ ರಂಗಪ್ರವೇಶ.ಅರ್ಧಮುಗಿದಿರುವ ಕೆಲಸ ಗಳನ್ನು ನಾಳೆ ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ. ಹಿರಿಯರಿಗೆ, ಮಕ್ಕಳಿಗೆ ಹರ್ಷ.
ಕರ್ಕಾಟಕ: ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಮಿಲನ. ಉದ್ಯೋಗಾಕಾಂಕ್ಷಿ ಶಿಕ್ಷಿತರಿಗೆ ಅವಕಾಶಗಳು ಗೋಚರ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು. ಪ್ರಾಕೃತಿಕ ತಾಣ ಮತ್ತು ದೇವಾಲಯಕ್ಕೆ ಭೇಟಿ.
ಸಿಂಹ: ಕಟ್ಟಡ ನಿರ್ಮಾಪಕರಿಗೆ ಕೆಲಸದ ಒತ್ತಡ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರ್ ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಗೃಹೋತ್ಪನ್ನ ಖಾದ್ಯ ಪದಾರ್ಥಗಳಿಗೆ ಅಧಿಕ ಬೇಡಿಕೆ.
ಕನ್ಯಾ: ಸತ್ಕಾರ್ಯಕ್ಕೆ ನೆರವಾಗುವ ಅವಕಾಶ. ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಕುಟುಂಬದವರೊಂದಿಗೆ ಪ್ರವಾಸಿ ತಾಣಕ್ಕೆ ಭೇಟಿ.
ತುಲಾ: ಹಿರಿಯ ಬಂಧುವಿನಿಂದ ಮಾರ್ಗ ದರ್ಶನ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಬಾಲ್ಯದ ಒಡನಾಡಿಯ ಭೇಟಿಯಿಂದ ಹೆಚ್ಚಿದ ಹುಮ್ಮಸ್ಸು. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಸಹೋದ್ಯೋಗಿಗಳೊಂದಿಗೆ ಸಣ್ಣ ಪ್ರವಾಸ.
ವೃಶ್ಚಿಕ: ಪರಮ ವೈಭವ ಇಲ್ಲವಾದರೂ ಸುಖಜೀವನಕ್ಕೆ ಕೊರತೆಯಿಲ್ಲ. ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲದಿಂದ ಧನಾಗಮ. ಪರ್ಯಾಯ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ. ಗೃಹಿಣಿಯರಿಗೆ ಸಂಭ್ರಮದ ದಿನ.
ಧನು: ದೂರದ ನೆಂಟರ ಆಗಮನ. ಸಾಂಸಾರಿಕ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಗೃಹಾಲಂಕಾರದ ಕೆಲಸಗಾರ ರಿಗೆ ಕೈತುಂಬಾ ಕೆಲಸ ಹಾಗೂ ಸಂಪಾದನೆ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ಮಕರ: ತಾಳ್ಮೆ, ಜಾಣ್ಮೆಗಳಿಂದ ಕಾರ್ಯಸಿದ್ಧಿ ಕಾರ್ಯಕೌಶಲಕ್ಕೆ ಮೇಲಿನವರ ಮೆಚ್ಚುಗೆ ಸಾಧನೆಯ ಮಾರ್ಗದಲ್ಲಿ ಸ್ಥಿರವಾಗಿ ಮುನ್ನಡೆ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾದ ಸಮಾಧಾನ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.
ಕುಂಭ: ಜನಸೇವೆಯ ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಕಾರ್ಯಗಳಲ್ಲಿ ವಿಶೇಷ ಪಾತ್ರ. ಸಮಾಜದಲ್ಲಿ ಗೌರವ ವೃದ್ಧಿ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ಆಸಕ್ತಿ. ಮಕ್ಕಳಿಗೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ.
ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ. ಶಿವ ವಿಷ್ಣು ,ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ. ಹಿರಿಯರೊಂದಿಗೆ ಗೌರವದಿಂದ ವರ್ತಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
Horoscope : ಈ ರಾಶಿಯವರು ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.