Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫಲ
Team Udayavani, Mar 28, 2024, 7:37 AM IST
ಮೇಷ: ಕಾರ್ಯತತ್ಪರರಿಗೆ ಮೇಲಧಿಕಾರಿಗಳ ಮೆಚ್ಚುಗೆ.ಅವಶ್ಯವುಳ್ಳವರಿಗೆ ಸಹಾಯ ಮಾಡಿ ಕೊಟ್ಟ ತೃಪ್ತಿ. ಮಕ್ಕಳ ವಿವಾಹ ಸಂಬಂಧ ಮಾತುಕತೆ. ಆರೋಗ್ಯ ಉತ್ತಮ ಒಟ್ಟಿನಲ್ಲಿ ಎಲ್ಲ ಶುಭಫಲಗಳನ್ನು ಕಾಣಬಹುದು.
ವೃಷಭ: ಎಲ್ಲ ರಂಗಗಳಲ್ಲೂ ಪ್ರಭಾವ ಬೀರು ವಿರಿ. ಅಧ್ಯಾಪಕ ವೃತ್ತಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಹಿರಿಯರ ಆರೋಗ್ಯದತ್ತ ಗಮನ ವಿರಲಿ. ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ಅವಶ್ಯ.
ಮಿಥುನ: ಮನೋಬಲಕ್ಕೆ ಸರಿಯಾಗಿ ಪರಿಸರದಿಂದ ಅನುಕೂಲ. ಉದ್ಯೋಗದಲ್ಲಿ ಹೊಸ ಅವಕಾಶಗಳು ತಾವಾಗಿ ಲಭಿಸುವ ಸಾಧ್ಯತೆ. ಮಕ್ಕಳಿಗೆ ಸಂಭ್ರಮ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ.
ಕರ್ಕಾಟಕ: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ. ಅಪರೂಪದ ನೆಂಟರ ಆಗಮನ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಸಾಂತ್ವನ ಹೇಳುವ ಅವಕಾಶ. ಕೃಷಿಕ ರಿಗೆ ನೆಮ್ಮದಿ.
ಸಿಂಹ: ದ್ರೋಹ ಬಗೆದವರ ಬಗ್ಗೆ ಅನುಕಂಪ ಇರಲಿ. ಉದ್ಯೋಗ, ವ್ಯವಹಾರಗಳಲ್ಲಿ ತಾತ್ಕಾಲಿಕ ಅಡಚಣೆ ಸಂಭವ. ಪತಿ- ಪತ್ನಿಯರಿಂದ ಪರಸ್ಪರರಿಗೆ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ.ಮನೆಯಲ್ಲಿ ಸಂತಸದ ವಾತಾವರಣ.
ಕನ್ಯಾ:ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ. ಸಹೋದರಿಗೆ ಸಹಾಯ ಮಾಡುವ ಸಂದರ್ಭ. ಉತ್ತರದ ಕಡೆಯಿಂದ ಶುಭ ಸಮಾಚಾರದ ನಿರೀಕ್ಷೆ. ಮನೆಯಲ್ಲಿ ಹರ್ಷ.
ತುಲಾ: ದೈಹಿಕ ಆರೋಗ್ಯ ಉತ್ತಮ. ವೃತ್ತಿರಂಗದಲ್ಲಿ ಅಸೂಯೆಯಿಂದ ಕಿರಿಕಿರಿ. ನೂತನ ವಾಹನ ಖರೀದಿ ಸಾಧ್ಯತೆ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ. ಮಿಶ್ರ ಫಲದ ಅನುಭವ.
ವೃಶ್ಚಿಕ: ಬಂಧುಜನರ ಅನಿರೀಕ್ಷಿತ ಭೇಟಿ ಯಿಂದ ಹರ್ಷ. ಉದ್ಯೋಗ ರಂಗದ ಸಾಧನೆ ಯಿಂದ ಪಕ್ಕದವರಿಗೆ ಅಸೂಯೆ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಆಯ್ದ ಕಸುಬುಗಳಲ್ಲಿ ಆಸಕ್ತಿ.
ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಹಿರಿಯರ ಆವಶ್ಯಕತೆಗಳ ಕಡೆಗೆ ಗಮನ ಇರಲಿ.
ಮಕರ: ಮೃದು ಮಾತಿನಿಂದ ಅನಾಯಾಸ ವಾಗಿ ಕಾರ್ಯಸಾಧನೆ.ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ.ನಿರೀಕ್ಷಿತ ಫಲ ಪ್ರಾಪ್ತಿ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ.
ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ.
ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ.ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಅಡಚಣೆ. ಉದ್ಯೋಗ ಬದಲಾವಣೆಯ ಸಾಧ್ಯತೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಹಿರಿಯರ ಆರೋಗ್ಯ ಸ್ಥಿರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.