![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 30, 2023, 7:10 AM IST
ಮೇಷ: ತರಾತುರಿಯ ದಿನಚರಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಉದ್ಯೋಗಸ್ಥರಿಗೆ ಮತ್ತಷ್ಟು ಕೆಲಸಗಳು ಬರಲಿವೆ. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಯಶಸ್ಸು. ವೃತ್ತಿಪರರಿಗೆ ಒತ್ತಡವೇ ಬದುಕು. ದೀರ್ಘಕಾಲದ ವೈದ್ಯಕೀಯ ಸಮಸ್ಯೆಗೆ ಸುಲಭ ಪರಿಹಾರ.
ವೃಷಭ: ಸಾವಧಾನದಿಂದ ಮುನ್ನಡೆದರೆ ಯಶಸ್ಸು. ಉದ್ಯೋಗಸ್ಥರಿಗೆ ವೇತನ ಏರಿಕೆ ಸಂಭವ. ಉದ್ಯೋಗಪತಿಗಳು ಹಿತಶತ್ರುಗಳ ಕುರಿತು ಎಚ್ಚರವಾಗಿರಿ. ದೀರ್ಘಾವಧಿ ಹೂಡಿಕೆಗಳ ಬಗ್ಗೆ ಯೋಚನೆ.ಸಟ್ಟಾ ವ್ಯವಹಾರದಲ್ಲಿ ನಷ್ಟ ಸಂಭವ.
ಮಿಥುನ: ಪಶುಸಂಗೋಪನೆ, ಹೈನುಗಾರಿಕೆಯ ವರಿಗೆ ಆದಾಯ ಮಧ್ಯಮ. ತರಕಾರಿ, ಹಣ್ಣಿನ ವ್ಯಾಪಾರಿಗಳಿಗೆ ಉತ್ತಮ ಆದಾಯ. ಸಜ್ಜನರಂತೆ ನಟಿಸುವ ಗೋಮುಖ ವ್ಯಾಘ್ರರ ಬಗ್ಗೆ ಎಚ್ಚರ. ಉದ್ಯೋಗಸ್ಥರಿಗೆ ಮಾಡಿ ಮುಗಿಯದಷ್ಟು ಕೆಲಸ. ಮನೆಯಲ್ಲಿ ಸಹಕಾರದ ವಾತಾವರಣ.
ಕರ್ಕಾಟಕ: ಸಂಸಾರದಲ್ಲಿ ಎಲ್ಲರಿಗೂ ಉತ್ತಮ. ಆರೋಗ್ಯ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರದ ಉದ್ಯಮಿಗಳ ಕ್ರಮಕ್ಕೆ ಹೊಸ ಪಾಲುದಾರರ ಸೇರ್ಪಡೆ ಬೇಡ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ ಹಾಗೂ ಆದಾಯ ವೃದ್ಧಿ.
ಸಿಂಹ: ಅಭಿವೃದ್ಧಿಯ ಪಥದಲ್ಲಿ ಮಿಂಚಿನ ಓಟಕ್ಕೆ ಪ್ರಯತ್ನ. ಉದ್ಯೋಗ ಕ್ಷೇತ್ರದಲ್ಲಿ ಮೇಲಿನವರಿಂದ ಶ್ಲಾಘನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ.ಉತ್ಪಾದನಾ ರಂಗದವರಿಗೆ ಅಧಿಕ ಬೇಡಿಕೆಯ ಸವಾಲು. ದಾಂಪತ್ಯ ಸುಖ ಉತ್ತಮ. ಒಟ್ಟಿನಲ್ಲಿ ಶುಭದಿನ.
ಕನ್ಯಾ: ಎಲ್ಲರಿಗೂ ಉತ್ತಮ ಆರೋಗ್ಯದ ಅನುಭವ. ವ್ಯವಹಾರಕ್ಕೆ ಅನುಕೂಲವಾಗಲು ಹಿರಿಯರಿಂದ ಸೂಕ್ತ ಸಲಹೆ. ದೂರಪ್ರಯಾಣ ಸಂಭವ. ಸ್ವಂತ ವ್ಯವಹಾರದಲ್ಲಿ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ವೃದ್ಧಿ. ಹಿತಚಿಂತಕರ ಭೇಟಿ. ದೇವಸ್ಥಾನಕ್ಕೆ ಭೇಟಿಯಿಂದ ಶುಭ.
ತುಲಾ: ದಿಟ್ಟವಾಗಿ ಎದುರಿಸಿದರೆ ಓಡಿ ಹೋಗುವ ಸಮಸ್ಯೆಗಳು. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸವಾಲುಗಳ ಯಶಸ್ವೀ ನಿರ್ವಹಣೆ. ಗುರು, ದೇವತಾನುಗ್ರಹದಿಂದ ನಿತ್ಯದ ವ್ಯವಹಾರಗಳಲ್ಲಿ ಜಯ. ನ್ಯಾಯಾಲಯ ವ್ಯವಹಾರದಲ್ಲಿ ವಿಳಂಬ.
ವೃಶ್ಚಿಕ: ಭೂತಕಾಲದ ಘಟನೆಗಳನ್ನು ಮೆಲುಕು ಹಾಕದೆ ವರ್ತಮಾನದಲ್ಲಿ ಬದುಕುವುದೇ ಯಶಸ್ಸಿಗೆ ದಾರಿ. ನಿರೀಕ್ಷಿತ ಧನಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ಸ್ಥಿತಿ. ಸ್ವಂತ ಉದ್ಯಮದ ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ.
ಧನು: ಕಾರ್ಯಕ್ಕೆ ಸಂಬಂಧಪಟ್ಟಂತೆ ಎಲ್ಲರಂಗಗಳಲ್ಲೂ ತೃಪ್ತಿಕರ ಮುನ್ನಡೆ ಸಾಧನೆ. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮಗಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ.
ಮಕರ: ದೈವಾನುಗ್ರಹದದಿಂದ ಎಲ್ಲ ಸಮಸ್ಯೆ ಗಳಿಗೆ ಸಮಾಧಾನ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ತಿಂಗಳುಗಳ ಆತಂಕ ಸೃಷ್ಟಿಸುತ್ತಿದ್ದ ಪ್ರಶ್ನೆಗೆ ಪರಿಹಾರ ವೃತ್ತಿಪರರಿಗೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡ. ಹಿತಶತ್ರುಗಳ ಪೀಡೆಯಿಂದ ಎಣಿಸಿಕೊಂಡ ಕಾರ್ಯಗಳು ವಿಳಂಬ.
ಕುಂಭ: ಉದ್ಯೋಗ, ವ್ಯವಹಾರಗಳ ಒತ್ತಡದ ನಡುವೆ ಸಮಾಜಸೇವೆಯ ಸೆಳೆತ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹುರುಪಿನ ವಾತಾವರಣ. ಸ್ವಂತ ಉದ್ಯಮ ನಡೆಸುತ್ತಿರುವವರ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಸಂಭವ.
ಮೀನ: ಹಲವಾರು ಶುಭಫಲಗಳ ದಿನ. ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ಸುಗಮ. ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಸಮಾಜದಲ್ಲಿ ಗೌರವ ವೃದ್ಧಿ. ನಿರ್ಮಾಣ ಕಾರ್ಯಗಳಿಗೆ ಒದಗಿದ್ದ ವಿಘ್ನಗಳು ದೂರ. ಭವಿಷ್ಯದ ಯೋಜನೆಗಳ ಕುರಿತು ಸ್ಪಷ್ಟ ಕಲ್ಪನೆ. ಸಂಸಾರದಲ್ಲಿ ಎಲ್ಲರಿಗೂ ಕ್ಷೇಮ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಲವಲವಿಕೆ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.