Daily Horoscope: ಉದ್ಯೋಗ ಸ್ಥಾನದಲ್ಲಿ ಪ್ರತಿಭೆ ಪ್ರಕಟಿಸಲು ಅವಕಾಶ
Team Udayavani, Nov 16, 2023, 8:00 AM IST
ಮೇಷ: ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದೆ ವರ್ತಮಾನದಲ್ಲಿ ಜೀವಿಸುವುದನ್ನು ಕಲಿಯಿರಿ. ಉದ್ಯೋಗ ಕ್ಷೇತ್ರದಲ್ಲಾಗಿರುವ ಹೊಸ ಆವಿಷ್ಕಾರಕ್ಕೆ ಹೊಂದಿಕೊಳ್ಳಿರಿ. ಕಿರಿಯ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಗುರುಸ್ಥಾನಕ್ಕೆ ಸಂಸಾರ ಸಹಿತ ಭೇಟಿ.
ವೃಷಭ: ನಿರೂಪಿತ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುವ ದಿನ. ಸರಕಾರಿ ನೌಕರರಿಗೆ ಸಂತಸ. ಅತಿಥಿ ಸತ್ಕಾರಕ್ಕಾಗಿ ಖರ್ಚು. ಹಿರಿಯರ ಆರೋಗ್ಯವೃದ್ಧಿಗೆ ವಿಶೇಷ ಕ್ರಮಗಳು. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳನ್ನು ಆರಂಭಿಸಲು ಪ್ರಯತ್ನ.
ಮಿಥುನ: ಆರೋಗ್ಯದ ಕುರಿತು ಅನವಶ್ಯ ಚಿಂತೆಯನ್ನು ದೂರವಿಡಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಯನ್ನು ಪ್ರಕಟಿಸಲು ಅವಕಾಶ. ಉದ್ಯಮ ವಿಸ್ತರಣೆಗೆ ವಿತ್ತ ಸಂಸ್ಥೆಯಿಂದ ಅಪೇಕ್ಷಿತ ಸಹಾಯ. ಮನೆಗೆ ವಿಶಿಷ್ಟ ವ್ಯಕ್ತಿಯ ಆಗಮನ. ದೇವತಾ ಕಾರ್ಯದಲ್ಲಿ ಮಗ್ನತೆ.
ಕರ್ಕಾಟಕ: ಎಲ್ಲವೂ ಸುಗಮವಾಗಿ ಮುಗಿಯ ಬಹುದೆಂಬ ವಿಶ್ವಾಸವಿರಲಿ. ಉದ್ಯೋಗದಲ್ಲಿ ವಹಿಸಿಕೊಡಲಾದ ಕಾರ್ಯವನ್ನು ನೆರವೇರಿಸುವುದರಲ್ಲಿ ಉಶಸ್ವಿಯಾಗುವಿರಿ. ಉದ್ಯಮದಲ್ಲಿ ಎದುರಾಗುವ ಪೈಪೋಟಿಗಳ ನಿವಾರಣೆಗೆ ಸೂಕ್ತ ಕ್ರಮ. ಉತ್ಪನ್ನಗಳ ವಿತರಕರ ಜಾಲ ವಿಸ್ತರಣೆ.
ಸಿಂಹ: ಮುಕ್ಕಾಲು ಭಾಗ ನೀವು ಎಣಿಸಿದಂತೆಯೇ ನಡೆಯುತ್ತಿದೆ. ಉದ್ಯೋಗ ಸ್ಥಾನದಲ್ಲಿ ಮುಂಚೂಣಿ ಯಲ್ಲಿ ಕಾರ್ಯಮಾಡುವ ಅವಕಾಶ. ಉದ್ಯಮದಲ್ಲಿ ಹೊಸ ಉತ್ಪನ್ನ ಆರಂಭಿಸುವ ಕುರಿತು ಸಮಾಲೋಚನೆ. ಆಧ್ಯಾತ್ಮಿಕ ಚಿಂತಕರ ಪರಿಚಯ.
ಕನ್ಯಾ: ಗೊತ್ತಿರುವ ಹಲವು ವಿದ್ಯೆಗಳಲ್ಲಿ ಒಂದನ್ನು ಸ್ಥಿರವಾಗಿ ಬಳಸುವುದರಿಂದ ಜೀವನ ಸುಗಮ. ಅನುಭವಿ ಹಿರಿಯರೊಬ್ಬರ ಮಾರ್ಗದರ್ಶನದಲ್ಲಿ ನೂತನ ಉದ್ಯಮ ಆರಂಭ.ಕುಟುಂಬದ ಆಸ್ತಿಯಲ್ಲಿ ಕೃಷಿ ಆರಂಭ. ನೂತನ ಗೃಹ ನಿರ್ಮಾಣಕ್ಕೆ ಸಂಕಲ್ಪ.
ತುಲಾ: ಮನೋವಿಕಲರ ಸಹವಾಸದಿಂದ ಬೇಸರ. ಧ್ಯಾನದಿಂದ ನೆಮ್ಮದಿ ಪ್ರಾಪ್ತಿ. ದೀಕ್ಷಾಗುರುಗಳ ಅನಿರೀಕ್ಷಿತ ದರ್ಶನ. ಕೃಷಿ ಕ್ಷೇತ್ರ ವಿಸ್ತರಣೆ ಕಾರ್ಯ ಆರಂಭ. ಮಕ್ಕಳ ವಿದ್ಯಾರ್ಜನೆ ಆಸಕ್ತಿ ವರ್ಧನೆಗೆ ಪ್ರಯತ್ನ. ಉದ್ಯೋಗಾರ್ಥಿಗಳಿಗೆ ಅವಕಾಶ ಲಭ್ಯ.
ವೃಶ್ಚಿಕ: ಮಿಶ್ರಫಲಗಳ ದಿನವಾಗಿದ್ದರೂ ಶುಭ ಫಲಗಳ ಅನುಪಾತವೇ ಹೆಚ್ಚು. ಉದ್ಯೋಗದಲ್ಲಿ ಕಿರಿಯರಿಗೆ ಮಾರ್ಗದರ್ಶನ. ಮನೆಗೆ ಹತ್ತಿರದ ಬಂಧುಗಳ ಆಗಮನ. ಪಶುಪಾಲನೆ, ಹೈನುಗಾರಿಕೆ ವ್ಯವಸಾಯ ನಡೆಸುವವರಿಗೆ ಪ್ರೋತ್ಸಾಹ ಕ್ರಮಗಳು.
ಧನು: ಬಂಧುಗಳ ಆಗಮನ. ಸಹೋದ್ಯೋಗಿ ಬಳಗಕ್ಕೆ ಮಾರ್ಗದರ್ಶನ. ಕೃಷ್ಯುತ್ಪಾದನೆ ಮಾರಾಟ. ಖಾದಿ ಉದ್ಯಮಿಗಳಿಗೆ ಹಾಗೂ ಖಾದಿ ಉಡುಪು ಮಾರಾಟಗಾರರಿಗೆ ವಿಶೇಷ ಲಾಭ. ಹತ್ತಿರದ ದೇವತಾ ಕ್ಷೇತ್ರ ಸಂದರ್ಶನ. ಸಂಗೀತ ಶ್ರವಣದಲ್ಲಿ ಕಾಲಯಾಪನೆ.
ಮಕರ: ಮನೆಯಲ್ಲಿ ಸಕಾರಾತ್ಮಕ ಸ್ಪಂದನಗಳ ಉತ್ಪತ್ತಿಗೆ ಪ್ರಯತ್ನ. ಹಿರಿಯರ ಕ್ಷೇಮದ ಕಡೆಗೆ ಗಮನ. ಉದ್ಯೋಗ ಸ್ಥಾನದಲ್ಲಿ ತಳಮಳದ ಸನ್ನಿವೇಶ. ಸ್ವಂತ ಉದ್ಯಮ ಅಭಿವೃದ್ಧಿಗೆ ಇದ್ದ ಕಾನೂನಿನ ತೊಡಕು ನಿವಾರಣೆ.ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ.
ಕುಂಭ: ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ. ಉದ್ಯೋಗದಲ್ಲಿ ಪದೋನ್ನತಿಯೊಂದಿಗೆ ಸ್ಥಳಾಂತರದ ಸಾಧ್ಯತೆ. ಸರಕಾರಿ ನೌಕರರಿಗೆ ಸಂತೋಷದ ದಿನ. ಉದ್ಯಮ ಉತ್ಪನ್ನಗಳ ಮಾರಾಟ ಜಾಲ ವೃದ್ಧಿ. ಆಧ್ಯಾತ್ಮಿಕ ಮಾರ್ಗದರ್ಶಕರೊಂದಿಗೆ ಭೇಟಿ.
ಮೀನ: ಕಾರ್ಯಸಾಧನೆಯಿಂದ ಸಂತೃಪ್ತಿಯ ಅನುಭವ. ಉದ್ಯೋಗದಲ್ಲಿ ವೇಗದ ಮುನ್ನಡೆ. ಸರಕಾರಿ ಇಲಖೆಗಳಲ್ಲಿ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅನುಕೂಲದ ದಿನ. ನೂತನ ವಾಹನ ಖರೀದಿಗೆ ಚಿಂತನೆ. ಹಣ್ಣು, ತರಕಾರಿ, ಹೂವಿನ ಬೆಳೆಗಾರರಿಗೆ ಅನು ಕೂಲದ ದಿನ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲದ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.