Horoscope:ಸಾಧನೆಯ ಹಾದಿಯಲ್ಲಿ ಪರೀಕ್ಷೆಗಳು ಒಳ್ಳೆ ಪಾಠ,ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ
Team Udayavani, Nov 24, 2023, 7:19 AM IST
ಮೇಷ: ಮಾನವನ ಬಯಕೆ, ಭಗವಂತನ ಸಂಕಲ್ಪ ಒಂದೇ ಆಗಿರುವುದು ವಿರಳ.ಉದ್ಯೋಗ ಸ್ಥಾನ ದಲ್ಲಿ ತಾತ್ಕಾಲಿಕ ಆತಂಕ ನಿವಾರಣೆ. ಉದ್ಯಮ, ವ್ಯವ ಹಾರ ದಲ್ಲಿ ಮಧ್ಯಮ ಲಾಭ. ಲೇವಾದೇವಿ ವ್ಯವಹಾರಕ್ಕೆ ಕೈಹಾಕ ದಿದ್ದರೆ ಒಳ್ಳೆಯದು. ಅಪರೂಪದ ನೆಂಟರ ಆಗಮನ.
ವೃಷಭ: ಒಮ್ಮೊಮ್ಮೆ ಬಯಸಿದ್ದೆಲ್ಲ ಕೈಗೂಡುವುದೂ ಇರುತ್ತದೆ. ಉದ್ಯೋಗದಲ್ಲಿ ಪದೋನ್ನತಿಯ ಯೋಗ. ಸರಕಾರಿ ಅಧಿಕಾರಿಗಳಿಗೆ ಬಯಸಿದ ಊರಿಗೆ ವರ್ಗಾವಣೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಪ್ರಾಪ್ತಿ.
ಮಿಥುನ: ಸಾಧನೆಯ ಹಾದಿಯಲ್ಲಿ ಪರೀಕ್ಷೆಗಳು ಒಳ್ಳೆಯ ಪಾಠ. ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ. ಹೊಸ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ.
ಕರ್ಕಾಟಕ: ಅಪವಾದದ ಮಾತುಗಳಿಂದ ನೊಂದು ಕೊಳ್ಳ ಬೇಡಿ. ಉದ್ಯೋಗ ಸ್ಥಾನದಲ್ಲಿ ಸತತ ಪ್ರಯತ್ನ ದಿಂದ ಸದ್ಭಾವನೆ. ಸ್ವಂತ ಉದ್ಯಮವನ್ನು ದೀರ್ಘ ಕಾಲ ದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆ. ಸರಕಾರಿ ಅಧಿಕಾರಿ ಗಳಿಂದ ಸ್ಥಳಕ್ಕೆ ಸಂದರ್ಶನ.
ಸಿಂಹ: ಸಿಂಹದಂತೆ ಅಲ್ಲಲ್ಲಿ ನಿಂತು ತಿರುಗಿ ನೋಡಿ ಮುಂದೆ ಸಾಗುವ ನಡೆ ನಿಮ್ಮದು. ಉದ್ಯೋಗ ಸ್ಥಾನದಲ್ಲಿ ಹೊಸರೀತಿಯ ಪ್ರಯೋಗಗಳು. ಸ್ವಂತ ಉದ್ಯಮದ ಓಟದ ವೇಗವರ್ಧನೆಯ ಸೂಚನೆ. ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ, ವಿದೇಶಗಳಿಂದಲೂ ಬೇಡಿಕೆ.
ಕನ್ಯಾ: ದಿನಕ್ಕೊಂದು ಹೊಸಬಗೆಯ ಅನುಭವ. ಸರ ಕಾರಿ ಉದ್ಯೋಗಿಗಳಿಗೆ ನಿರಾಳ ವಾತಾವರಣ. ಎಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಬೇಡಿಕೆ. ವಯಸ್ಸು ಮೀರುವ ಭೀತಿ ಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ. ಸ್ವಂತ ಉದ್ಯಮ ಗಳನ್ನು ಬೆಳೆಸಲು ಸರಕಾರದ ಪ್ರೋತ್ಸಾಹ.
ತುಲಾ: ಅದೃಷ್ಟದ ಆಟದಲ್ಲಿ ಗೆಲ್ಲುವ ಕನಸು ನಿಜವಾದ ಅನುಭವ. ಮನಸ್ಸನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಯಶಸ್ಸು. ಬಾಲ್ಯದ ಒಡನಾಡಿಗಳ ಅಕಸ್ಮಾತ್ ಮಿಲನ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ.
ವೃಶ್ಚಿಕ: ಕಾಲನ ನಡೆಯೊಂದಿಗೆ ಏರಿಳಿತಗಳು ಸ್ವಾಭಾವಿಕ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡೆಯ ಭಾವನೆ. ಸ್ವಂತ ಉದ್ಯಮ ನಿಧಾನಗತಿಯಲ್ಲಿ ಪ್ರಗತಿ. ಉತ್ಪನ್ನಗಳಿಗೆ ಬೇಡಿಕೆ ಸುಧಾರಣೆ. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ.
ಧನು: ಸಂತೋಷ, ದುಃಖ ಎರಡೂ ತಾತ್ಕಾಲಿಕ ಅನು ಭವ ಗಳು ಎನ್ನುವ ಮಾತು ಸದಾ ಸ್ಮರಣೆ ಯಲ್ಲಿರಲಿ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯ ದಕ್ಷತೆ, ಅನುಭವಗಳಿಗೆ ಯಥೋಚಿತ ಮನ್ನಣೆ. ಸಣ್ಣ ಪ್ರಮಾಣದ ಗೃಹೋದ್ಯಮ ಕೈಗೊಳ್ಳಲು ಸಿದ್ಧತೆ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಸೂಚನೆ.
ಮಕರ: ನವೋತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಖಾತೆಗಳ ಹಂಚಿಕೆ. ಸ್ವಂತ ಉದ್ಯಮಕ್ಕೆ ಹೊಸ ನೌಕರರ ಸೇರ್ಪಡೆ. ಸಹೋದ್ಯಮದ ಸಂಸ್ಥೆಯ ಉನ್ನತ ಅಧಿಕಾರಿಯ ಆಗಮನ. ದೇವತಾರಾಧನೆಗೆ ಸಮಯ ಹೊಂದಿಸಿಕೊಳ್ಳುವ ಪ್ರಯತ್ನ.
ಕುಂಭ: ಗಳಿಸಿದ ಪುಣ್ಯವೆಂಬ ಸಂಪತ್ತಿನ ವೃದ್ಧಿಗಾಗಿ ಸತ್ಕರ್ಮಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ ನಿರ್ವಹಣೆಯಲ್ಲಿ ಯಶಸ್ಸು. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬೇಡಿಕೆ.
ಮೀನ: ಸಪ್ತಾಹದ ಕೊನೆಯ ಹಂತದಲ್ಲಿ ಕೆಲಸದ ಹೊರೆಯನ್ನು ಕಂಡು ವಿಚಲಿತರಾಗದಿರಿ. ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಇಲಾಖೆಗಳವರಿಂದ ಅನುಕೂಲಕರ ಸ್ಪಂದನ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ಸೋದರ ಸಂಬಂಧಿಗೆ ಹೊಸ ವ್ಯವಹಾರ ಮುಂದುವರಿಸಲು ಮಾರ್ಗದರ್ಶನ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.