Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Team Udayavani, Nov 24, 2024, 7:17 AM IST
ಮೇಷ: ಸಂಸಾರದ ಬೇಕು ಬೇಡಗಳ ಕಡೆಗೆ ಗಮನ. ಬಂಧುಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ.ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ.
ವೃಷಭ: ರವಿವಾರದ ರಜೆಯ ಆನಂದ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ.ವಿವಾಹಾದಿ ಸಂಭ್ರಮಗಳಲ್ಲಿ ಭಾಗಿ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ವ್ಯವಹಾರದಲ್ಲಿ ನಷ್ಟ. ಭಜನೆ, ಸತ್ಸಂಗಗಳಲ್ಲಿ ಕಾಲಯಾಪನೆ.
ಮಿಥುನ: ಹೊಸ ಪರಿಚಯದ ಗೆಳೆಯ ರೊಡನೆ ಸಂವಾದ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವಿದ್ಯಾರ್ಥಿಗಳಿಗೆ ಆಲಸ್ಯ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ಬಂಧುಗಳ ಮನೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಿಕೆ.
ಕರ್ಕಾಟಕ: ಸರ್ವಜನ ಹಿತದೊಂದಿಗೆ ಸ್ವಹಿತ ರಕ್ಷಣೆಯ ಕುರಿತೂ ಯೋಚನೆ ಇರಲಿ.ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ಛಲದಿಂದ ಉನ್ನತಿ ಸಾಧಿಸಿದ ವ್ಯಕ್ತಿಯ ಭೇಟಿ. ದಿನವಿಡೀ ಮಿಶ್ರ ಫಲಗಳ ಅನುಭವ.
ಸಿಂಹ: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ. ವೃತ್ತಿಪರರಿಗೆ ಕೆಲಸದ ಒತ್ತಡ ಆರಂಭ. ಸಂಗಾತಿಯ ಸ್ವಾಸ್ಥ್ಯದ ಕಡೆಗೆ ಗಮನ ಇರಲಿ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ. ವೈದ್ಯರ ಭೇಟಿಯಿಂದ ಸಂಶಯ ಪರಿಹಾರ.
ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ. ವಿವಾಹಾಸಕ್ತರಿಗೆ ಶುಭಸಮಾಚಾರ.
ತುಲಾ: ರವಿವಾರವಾದರೂ ಬಿಡುವಿಲ್ಲದಷ್ಟು ಕೆಲಸಗಳು. ವ್ಯವಹಾರ ಸುಧಾರಣೆಯತ್ತ ಗಮನ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ. ಟೈಲರಿಂಗ್ ಬಲ್ಲವರಿಗೆ ಶುಭದಿನ.
ವೃಶ್ಚಿಕ: ಬಂಧುಗಳ ಮನೆಯಲ್ಲಿ ಶುಭಕಾರ್ಯ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ದೂರದಲ್ಲಿರುವ ಮಕ್ಕಳ ಆಗಮನ. ಧಾರ್ಮಿಕ ಉಪನ್ಯಾಸ, ಹರಿಕಥೆ ಶ್ರವಣ.
ಧನು: ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣ ಗಳು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗೆಳೆಯನ ವ್ಯಾಪಾರ ವೃದ್ಧಿಗೆ ಸಹಾಯ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ನೊಂದವರ ಬದುಕಿನಲ್ಲಿ ಆಶಾಕಿರಣ.
ಮಕರ: ಬಂಧುಗಳ ಸಂತೋಷದಲ್ಲಿ ಭಾಗಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಗೃಹೋತ್ಪನ್ನ ಗಳಿಗೆ ಅಧಿಕ ಬೇಡಿಕೆ. ಇಷ್ಟದೇವತಾ ಮಂದಿರ ಸಂದರ್ಶನ. ಮಕ್ಕಳ ಬಗ್ಗೆ ಅತಿಯಾದ ಚಿಂತೆ ಬೇಡ.
ಕುಂಭ: ಸತ್ಕಾರ್ಯಗಳಿಗೆ ಪ್ರತ್ಯಕ್ಷ ನೆರವು.ವೈದ್ಯಕೀಯ ವೃತ್ತಿಯವರಿಗೆ ಕೀರ್ತಿ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಅಪರೂಪದ ಬಂಧುಗಳ ಆಗಮನ. ಸಣ್ಣ ಪ್ರವಾಸ ಸಂಭವ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ವೃತ್ತಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ.
ಮೀನ: ಮುಖ್ಯ ಕೆಲಸಗಳಿಗೆ ಪೂರ್ವಸಿದ್ಧತೆ. ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗಿ. ಹಳೆಯ ಸಹಚರರ ಭೇಟಿ. ಬಂಧುಗಳ ಮನೆಯಲ್ಲಿ ಶುಭಕಾರ್ಯ. ಸಂಸಾರದಲ್ಲಿ ವಿಶ್ವಾಸ ವೃದ್ಧಿ. ಹಿತಶತ್ರುಗಳ ಮಾತಿಗೆ ಸ್ಪಂದಿಸದಿರಿ. ಮನೆಗೆ ಅತಿಥಿಗಳ ಆಗಮನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.