Daily Horoscope: ವ್ಯರ್ಥ ವಾದವಿವಾದಕ್ಕೆ ಅವಕಾಶ ಕೊಡಬೇಡಿ; ಹೊಸ ಸವಾಲುಗಳು, ಜವಾಬ್ದಾರಿಗಳು
Team Udayavani, Nov 7, 2024, 7:21 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ನಿರಾಳ ಪರಿಸ್ಥಿತಿ. ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ಯಥಾಪ್ರಕಾರದ ಕಿರಿಕಿರಿಗಳು. ಭವಿಷ್ಯದ ಹೂಡಿಕೆಗಳ ಕುರಿತು ಚಿಂತನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು.
ವೃಷಭ: ಕ್ಷಿಪ್ರ ಫಲನೀಡುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಒಳ್ಳೆಯದು. ಖಾದಿಯ ಸಿದ್ಧ ಉಡುಪು ಉದ್ಯಮಕ್ಕೆ ಲಾಭ. ಅನ್ವೇಷಕರೆದುರು ವಿಶಿಷ್ಟ ಅವಕಾಶಗಳು. ಪ್ರಮುಖರೊಂದಿಗೆ ಪಾಲುದಾರಿಕೆಯ ಅವಕಾಶ.
ಮಿಥುನ: ಮಿತ್ರನ ಯೋಜನೆ ಅನುಷ್ಠಾನಕ್ಕೆ ಸಹಾಯ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ವ್ಯರ್ಥ ವಾದವಿವಾದಕ್ಕೆ ಅವಕಾಶ ಕೊಡಬೇಡಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ.
ಕರ್ಕಾಟಕ: ಕಡಿಮೆಯಾಗದ ಕೆಲಸದ ಹೊರೆಗಳು. ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಹಿರಿಯರಿಗೆ ಸರಕಾರಿ ಸೌಲಭ್ಯಗಳನ್ನು ದೊರಕಿಸುವ ಪ್ರಯತ್ನ. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳಿಗೆ ಒಳ್ಳೆಯ ಹೆಸರು.
ಸಿಂಹ: ನವಚೈತನ್ಯ ಹೊಂದಿರುವ ಉದ್ಯಮ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಶಿಕ್ಷಿತ ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿಯ ಅನುಭವ.
ಕನ್ಯಾ: ಉದ್ಯಮದ ಹೊಸ ವಿಭಾಗದಲ್ಲಿ ಸಮಸ್ಯೆ. ಹಿರಿಯರ ಆಸ್ತಿ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಪತ್ರಕರ್ತರು, ಸಾಹಿತ್ಯ ವ್ಯವಸಾಯಿಗಳಿಗೆ ಅನುಕೂಲ.ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ತುಲಾ: ಹಿತಶತ್ರುಗಳಿಂದ ಹೊಸಬಗೆಯ ಸಂಚು. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಆಶಾದಾಯಕ ವಾತಾವರಣ. ವಿದೇಶವಾಸಿ ಮಿತ್ರನಿಂದ ಮುಖ್ಯ ಸಂದೇಶ.
ವೃಶ್ಚಿಕ: ನಿಕಟ ಭವಿಷ್ಯದಲ್ಲಿ ಅಪಾಯದ ಸೂಚನೆ ಇಲ್ಲ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಹಿರಿಯ ಅಧಿಕಾರಿಗಳಿಗೆ ನೆಮ್ಮದಿ ಕಡಿಮೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಮುಖಭಂಗ.
ಧನು: ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆ ಮುಂದುವರಿಕೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ಸ್ವಲ್ಪಮಟ್ಟಿಗೆ ಲಭ್ಯ.ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ.
ಮಕರ: ಕಾಲಮಿತಿಯ ಕೆಲಸಗಳ ಸರಮಾಲೆ. ಉದ್ಯಮಿಗಳಿಗೆ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.ಮನೆಮಂದಿಯೊಂದಿಗೆ ದೇವಾಲಯ ಸಂದರ್ಶನ.
ಕುಂಭ: ಸರಾಗವಾಗಿ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರ ವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ ಲಲಿತ ಕಲೆಗಳ ಅಭ್ಯಾಸಿಗಳಿಗೆ ಮುನ್ನಡೆ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು. ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ.
ಮೀನ: ಆಲಸ್ಯದಿಂದ ಬಿಡುಗಡೆಯಾಗಿ ಹೊಸ ಹುಮ್ಮಸ್ಸು. ಹೊಸ ಸವಾಲುಗಳು, ಜವಾಬ್ದಾರಿಗಳು. ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಇಲಾಖೆಗಳಿಂದ ಅನುಕೂಲಕರ ಸ್ಪಂದನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.