Daily Horoscope: ಉದ್ಯೋಗ ಕ್ಷೇತ್ರದಲ್ಲಿ ಚಂಚಲ ವಾತಾವರಣ, ವಾಹನ ಚಾಲನೆಯಲ್ಲಿ ಎಚ್ಚರ
Team Udayavani, Oct 10, 2023, 7:30 AM IST
ಮೇಷ: ಆನಂದವಾಗಿ ದಿನದ ಆರಂಭ. ಉದ್ಯೋಗ ಸ್ಥಾನದಲ್ಲಿ ಸಂತೋಷದ ವಿದ್ಯಮಾನ. ಗಣ್ಯರ ಭೇಟಿ. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವ ಸಂದರ್ಭ. ಸ್ವಂತ ವ್ಯವಹಾರದ ಕ್ಷೇತ್ರಕ್ಕೆ ಹೊಸಬರ ಪ್ರವೇಶ ಸಂಭವ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ವೃಷಭ: ಕಾರ್ಯಯೋಜನೆಗಳು ಗೋಪ್ಯವಾಗಿರಲಿ. ಹಿತಶತ್ರುಗಳ ಪ್ರವೇಶ ಆಗದಂತೆ ಎಚ್ಚರ ವಹಿಸಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ವಿತ್ತ ಸಂಸ್ಥೆಗಳಿಂದ ಆರ್ಥಿಕ ನರವು ಲಭ್ಯ. ಹಿರಿಯರಿಗೆ ವಯೋಸಹಜ ದೌರ್ಬಲ್ಯ. ದೇವತಾ ಸ್ಥಳಕ್ಕೆ ಭೇಟಿ.
ಮಿಥುನ: ನಿತ್ಯವೂ ಆಗುವ ಹೊಸಬಗೆಯ ಬೆಳವಣಿಗೆಗಳಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಲು ಕಲಿಯಿರಿ. ಉದ್ಯೋಗ ಕ್ಷೇತ್ರದಲ್ಲಿ ಚಂಚಲ ವಾತಾವರಣ. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕ್ಕೆ ತಕ್ಕ ಪ್ರತಿಫಲದ ಸಾಧ್ಯತೆ ಕಡಿಮೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ.
ಕರ್ಕಾಟಕ: ಮನೆಯಲ್ಲಿ ಎಲ್ಲರ ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳ ಸಹಕಾರ. ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ವಿಘ್ನಗಳು. ಸರಕಾರಿ ಇಲಾಖೆಗಳಿಂದ ಆಗಬೇಕಾದ ಕೆಲಸಗಳು ವಿಳಂಬ. ವಾಹನ ಚಾಲನೆಯಲ್ಲಿ ಎಚ್ಚರ.
ಸಿಂಹ: ಒಟ್ಟು ಪರಿಸ್ಥಿತಿ ಕ್ಷಿಪ್ರ ಸುಧಾರಣೆ. ಹಿರಿಯರ ಆರೋಗ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಒಳ್ಳೆಯ ವಾತಾವರಣ. ಮಾಲಿಕ- ನೌಕರರ ನಡುವೆ ಸಾಮರಸ್ಯ. ಸರಕಾರಿ ನೌಕರರು ಸಮಾಧಾನದ ಸ್ಥಿತಿಯಲ್ಲಿ. ಉಭಯ ರಂಗಗಳ ಉತ್ಪಾದನೆಗಳಿಗೆ ಉತ್ತಮ ಬೇಡಿಕೆ.
ಕನ್ಯಾ: ಸ್ಥಿರ ಮನಸ್ಸಿನಿಂದ ಯತ್ಸಿಸಿದರೆ ವಿಜಯ ಖಂಡಿತ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇ ಜನ. ಸಾಧನೆಗೆ ಮೇಲಿನವರ ಮೆಚ್ಚುಗೆ. ವಿದ್ಯುತ್, ಇಲೆಕ್ಟ್ರಾನಿಕ್ಸ್ ಸಾಧನಗಳ ದುರಸ್ತಿಗಾರರಿಗೆ ಆದಾಯ ಹೆಚ್ಚಳ. ಸೌಂದರ್ಯವರ್ಧಕ ಸಾಮಗ್ರಿಗಳ ವ್ಯಾಪಾರಿಗಳಿಗೆ ಅಧಿಕ ಲಾಭ.
ತುಲಾ: ಮನಸ್ಸಮಾಧಾನದ ದಿನ. ಬಂಧುಗಳಿಂದ ಪ್ರೋತ್ಸಾಹದ ಮಾತುಗಳು. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಜವಾಬ್ದಾರಿ ವಿಸ್ತರಣೆ ಸಂಭವ. ದೂರದಲ್ಲಿರುವ ಹಳೆಯ ಒಡನಾಡಿಯ ಭೇಟಿಯಿಂದ ಭಾವನಾತ್ಮಕ ಚಿಂತನೆಗೆ ಪ್ರೇರಣೆ.
ವೃಶ್ಚಿಕ: ಆರೋಗ್ಯ ಉತ್ತಮ. ಉದ್ಯೋಗದಲ್ಲಿ ಮುನ್ನಡೆ. ಸಾಧನೆಗೆ ಸುತ್ತಮುತ್ತಲಿನವರ ಉತ್ತೇಜನ. ಪರಿಸರ ರಕ್ಷಣೆಯಲ್ಲಿ ಕಾಳಜಿ. ಸಾಕುಪ್ರಾಣಿಗಳಿಂದ ದೂರವಿರಿ. ಹೈನೋದ್ಯಮದಲ್ಲಿ ಲಾಭ. ವಸ್ತ್ರ, ಆಭರಣ ವ್ಯಾಪಾರಿ ಗಳಿಗೆ ಮಧ್ಯಮ ಆದಾಯ. ಮನೆಯಲ್ಲಿ ಸಹಕಾರದ ವಾತಾವರಣ.
ಧನು: ಛಲ ಬಿಡದ ತ್ರಿವಿಕ್ರಮನಂತೆ ಅವಿಶ್ರಾಂತವಾಗಿ ಯತ್ನಿಸುವ ನಿಮಗೆ ತಡವಾಗಿಯಾದರೂ ಯಶಸ್ಸು ಲಭ್ಯ. ಮಂದಗತಿಯ ಹೆಜ್ಜೆಗಳೇ ಸುರಕ್ಷಿತವೆಂದು ಕಂಡುಬಂದಿರುವ ಕಾರಣ ನಡೆಯ ವೇಗ ಬದಲಾವಣೆ ಬೇಡ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.
ಮಕರ: ಸಂಸಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಂದ ಕಿರಿಕಿರಿ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಮೇಲಧಿಕಾರಿಗಳಿಂದ ಪ್ರೋತ್ಸಾಹದ ನುಡಿಗಳು. ಮನೆಯಲ್ಲಿ ಹಿರಿಯರಿಂದ ಸಕಾಲಿಕ ಸಹಕಾರ. ಸ್ವಂತ ಒಡೆತನದ ಉದ್ಯಮಗಳಲ್ಲಿ ಬೇಡಿಕೆ ಪೂರೈಸುವ ಒತ್ತಡ.
ಕುಂಭ: ದೇವತಾರ್ಚನೆಯಿಂದ ಸಮಾಧಾನಗೊಂಡ ಮನಸ್ಸು. ಉದ್ಯೋಗ ಸ್ಥಾನದಲ್ಲಿ ಹರ್ಷ, ಉತ್ಸಾಹಗಳ ವಾತಾವರಣ. ಸಂಘಟಿತ ಪ್ರಯತ್ನ. ಪರಿಸರ ರಕ್ಷಣಾ ಕಾರ್ಯಗಳಲ್ಲಿ ಸೇವೆಯ ಸಂದರ್ಭ. ಸಟ್ಟಾ ವ್ಯವಹಾರಕ್ಕಿಳಿದರೆ ನಷ್ಟ. ರಾಜಕೀಯ ಕ್ಷೇತ್ರದಿಂದ ಕರೆ. ಸ್ವಂತ ಉದ್ಯಮ ಉತ್ಪನ್ನ ಗುಣಮಟ್ಟದ ಸುಧಾರಣೆ.
ಮೀನ: ಗುರು, ದೇವತಾನುಗ್ರಹದಿಂದ ನೆಮ್ಮದಿ. ಉದ್ಯೋಗದಲ್ಲಿ ಮುನ್ನಡೆ. ಸರಕಾರಿ ಕಾರ್ಯಾಲಯಗಳಲ್ಲಿ ಉತ್ತಮ ಸ್ಪಂದನೆ. ಸೇವಾ ಮಾದರಿಯ ಕಾರ್ಯಗಳಿಂದ ಆದಾಯ, ಗೌರವ ವೃದ್ಧಿ. ಹಿರಿಯರಿಂದ ಸಕಾಲಿಕ ಮಾರ್ಗದರ್ಶನ. ಹೊಸ ಕ್ಷೇತ್ರಗಳ ಅರಸುವಿಕೆಯಲ್ಲಿ ಯಶಸ್ಸು. ಉದ್ಯೋಗಾರ್ಥಿಗಳ ಪ್ರಯತ್ನ ಮುನ್ನಡೆ. ಎಲ್ಲರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.