Daily Horoscope: ದಿನಕ್ಕೊಂದು ಬಗೆಯ ಪರೀಕ್ಷೆ ಎದುರಿಸುವುದು ಅನಿವಾರ್ಯ
Team Udayavani, Oct 13, 2023, 7:29 AM IST
ಮೇಷ: ಹವಾಮಾನದ ವ್ಯತ್ಯಾಸದ ಪರಿಣಾಮವಾಗಿ ಕೊಂಚ ಅಸ್ವಾಸ್ಥ್ಯದ ಅನುಭವ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಹೊಸ ಹೂಡಿಕೆಗೆ ವಿಘ್ನ. ಗೃಹಾಲಂಕಾರ ಸಾಮಗ್ರಿ ವಿತರಕರಿಗೆ ಮಧ್ಯಮ ಲಾಭ. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಪಿತೃಕಾರ್ಯದಲ್ಲಿ ಪಾಲುಗೊಳ್ಳುವ ಸಾಧ್ಯತೆ.
ವೃಷಭ: ಸಹನೆ, ಜಾಣತನಗಳೇ ನಿಮ್ಮ ಯಶಸ್ಸಿನ ಸಾಧನಗಳು. ಉದ್ಯೋಗದಲ್ಲಿ ಎಸಗಿದ ಸಾಧನೆಗೆ ಮೇಲಿನವರ ಮೆಚ್ಚುಗೆ. ಸಹೋದ್ಯೋಗಿಗಳಿಂದ ಪ್ರಶಂಸೆ. ಮಹತ್ಕಾರ್ಯವನ್ನು ಸಾಧಿಸುವ ತವಕ. ಆಸ್ತಿ ಖರೀದಿ ಮಾತುಕತೆಗೆ ವಿಘ್ನ. ಕಟ್ಟಡ ನಿರ್ಮಾಣ ಕಾರ್ಯ ವಿಳಂಬ.
ಮಿಥುನ: ದಿನಕ್ಕೊಂದು ಬಗೆಯ ಪರೀಕ್ಷೆಯನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಪ್ರಾಚೀನ ವಿದ್ಯೆಯ ಸಾಧನೆಯಿಂದ ವಿಜಯ ಪ್ರಾಪ್ತಿ. ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಹಳೆಯ ಪರಿಚಯ ನವೀಕರಣದಿಂದ ಲಾಭ.
ಕರ್ಕಾಟಕ: ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಅನ್ವೇಷಣಾತ್ಮಕ ಕಾರ್ಯಗಳಿಗೆ ನಿರುತ್ಸಾಹ. ಹೊಸ ಉತ್ಪನ್ನಗಳಿಗೆ ಗ್ರಾಹಕರ ಲಭ್ಯತೆ ವಿರಳ. ಪಶ್ಚಿಮ ದಿಕ್ಕಿನಿಂದ ವಿಶೇಷ ಸಮಾಚಾರ. ಪಿತೃಕಾರ್ಯದಲ್ಲಿ ಭಾಗಿಯಾಗುವ ಅವಕಾಶ.
ಸಿಂಹ: ಸಾಮಾಜಿಕ ಚಟುವಟಿಕೆಗಳ ಮುಂಚೂಣಿ ಯಲ್ಲಿರುವಿರಿ. ಉದ್ಯೋಗ ಕ್ಷೇತ್ರದಲ್ಲಿ ಉಲ್ಲೇಖಾರ್ಹ ಸಾಧನೆ. ಸ್ವಂತ ಉದ್ಯಮ ಉನ್ನತಿಯ ಪಥದಲ್ಲಿ. ಉತ್ಪನ್ನಗಳ ಗುಣಮಟ್ಟಕ್ಕೆ ಗ್ರಾಹಕ ವರ್ಗದ ಮೆಚ್ಚುಗೆ. ಕಲೋಪಾಸನೆ, ಕಲಾಪೋಷಣೆ ಎರಡರಲ್ಲೂ ಆಸಕ್ತಿ.
ಕನ್ಯಾ: ಸಹನೆಯಿಂದ ಕಾರ್ಯಪ್ರವೃತ್ತರಾಗಿರಿ. ಉದ್ಯೋಗ ಸ್ಥಾನದಲ್ಲಿ ಗೌರವ ಪ್ರಾಪ್ತಿ. ಮೇಲಿನ ವರಿಂದ ಪುರಸ್ಕಾರ. ಸಾಹಿತ್ಯಾಸಕ್ತರಿಗೆ ಸಮಯಾವಕಾಶ. ವಿದ್ಯುತ್, ಎಲೆಕ್ಟ್ರಾನಿಕ್ಸ್ ಸಾಮಗ್ರಿ ದುರಸ್ತಿ ವೃತ್ತಿಯವರಿಗೆ ಲಾಭ. ಅಪರಿಚಿತರಿಂದ ಅಮೂಲ್ಯ ಸಹಾಯ.
ತುಲಾ: ಆಧ್ಯಾತ್ಮಿಕ ಸಾಧನೆಯಿಂದ ಮನಸ್ಥೈರ್ಯ ಪ್ರಾಪ್ತಿ. ಸಂಸಾರದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಪ್ರಯತ್ನ. ಕಲೋಪಾಸನೆಗೆ ಪ್ರೋತ್ಸಾಹ. ಮಕ್ಕಳ ವ್ಯಾಸಂಗಾಸಕ್ತಿ ಪೋಷಣೆಗೆ ವಿಶೇಷ ಶ್ರಮ. ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ವಾತಾವರಣ.
ವೃಶ್ಚಿಕ: ಸಾಧಿಸಿರುವ ಯಶಸ್ಸಿಗೆ ತೃಪ್ತಿಪಡಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ಪರಿಸ್ಥಿತಿ. ನೆರೆಯವರ ಪ್ರೀತ್ಯಭಿಮಾನಗಳಿಗೆ ಪಾತ್ರರಾಗುವ ಸಂದರ್ಭ ಪ್ರಾಪ್ತಿ. ಕುಟುಂಬದ ಹಿರಿಯರ ಭೇಟಿ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಸ್ವಂತ ಉದ್ಯಮದ ಸಮಸ್ಯೆಗೆ ಸಂಘಟಿತ ಶ್ರಮದಿಂದ ಯಶಸ್ಸು.
ಧನು: ಹಲವು ಬಗೆಯ ಸವಾಲುಗಳನ್ನು ಎದುರಿಸಿ ಯಶಸ್ಸಿನ ದಾರಿಯಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಶ್ಲಾಘನೆ. ಆರ್ಥಿಕ ಪರಿಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ಒಟ್ಟಿನಲ್ಲಿ ಸುಧಾರಣೆ. ಬಂಧುವರ್ಗದವರಲ್ಲದ ಪರಿಚಿತರೊಬ್ಬರಿಂದ ಸಕಾಲದಲ್ಲಿ ಸಹಾಯ.
ಮಕರ: ತಳಮಳಗಳ ನಡುವೆ ತಾಳ್ಮೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು. ಹಳೆಯ ಗೆಳೆಯರ ಸಂಪರ್ಕ ಪ್ರಾಪ್ತಿ. ಉದ್ಯೋಗ ಅನ್ವೇಷಣೆಗೆ ಮಾರ್ಗದರ್ಶನ. ಕಾರ್ಯರಂಗದಲ್ಲಿ ಒತ್ತಡ. ಮಕ್ಕಳ ಭವಿಷ್ಯ ಚಿಂತನೆ. ಸಂಸಾರ ನಿರ್ವಹಣೆಗೆ ಹಿರಿಯರ ಸಹಾಯ.
ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೆ ಮನ್ನಣೆ. ಸವಾಲುಗಳನ್ನು ಸುಲಭ ವಾಗಿ ಎದುರಿಸುವಿರಿ. ಸಾಂಸಾರಿಕ, ಸಾಮಾಜಿಕ ಎರಡೂ ಕ್ಷೇತ್ರಗಳ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ಸು ಪ್ರಾಪ್ತಿ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚು ಹೊಣೆಗಾರಿಕ
ಮೀನ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿದ ಮುನ್ನಡೆ. ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರಿಂದ ಸಕಾರಾತ್ಮಕ ಸ್ಪಂದನೆ. ಸೇವಾರೂಪದ ವೃತ್ತಿಗಳವರ ಸಜ್ಜನಿಕೆಗೆ ಯೋಗ್ಯ ಪ್ರತಿಫಲ ಲಭ್ಯ. ಗುರುಸ್ಥಾನದಲ್ಲಿ ಗೌರವ ಹುದ್ದೆ ಅಯಾಚಿತವಾಗಿ ಪ್ರಾಪ್ತಿ. ಬಂಧುವರ್ಗದವರಿಗೆ ಸಹಾಯ ಮಾಡುವ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belman: ಹಿಂದೂಗಳ ಮನೆಯಲ್ಲಿ ಗೋದಲಿ ಸಂಭ್ರಮ!
Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.