Daily Horoscope: ದೇವತಾರಾಧನೆಯ ನಡುವೆ ಉದ್ಯೋಗದತ್ತ ಗಮನ ಹರಿಸುವ ಅನಿವಾರ್ಯತೆ
Team Udayavani, Oct 17, 2023, 7:27 AM IST
ಮೇಷ: ಮನೆಯಲ್ಲಿ ಹಾಗೂ ಪರಿಸರದಲ್ಲಿ ಹಬ್ಬದ ವಾತಾವರಣ. ಉದ್ಯೋಗ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸುವ ಹುರುಪು. ಸ್ವಂತ ಉದ್ಯಮದ ಕಾರ್ಯಕ್ಷೇತ್ರ ವಿಸ್ತರಣೆಗೆ ಅನುಕೂಲದ ವಾತಾವರಣ. ನೌಕರ ವರ್ಗದ ಸಹಕಾರ.
ವೃಷಭ: ಹೊಸ ಅವಕಾಶ ಅನ್ವೇಷಣೆಯಲ್ಲಿ ಯಶಸ್ಸು. ಉದ್ಯೋಗದಲ್ಲಿ ಮುನ್ನಡೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ವ್ಯವಹಾರದಲ್ಲಿ ಪಾಲುದಾರರಿಂದ ಹೊಸ ಕ್ಷೇತ್ರಕ್ಕೆ ವ್ಯವಹಾರ ವಿಸ್ತರಣೆಯ ಪ್ರಸ್ತಾವ.
ಮಿಥುನ: ಉಪಾಸನೆಯಿಂದ ಸ್ಥಿರಚಿತ್ತ ಪ್ರಾಪ್ತಿ. ಹಿತಶತ್ರುಗಳಿಂದ ಕಿರಿಕಿರಿಯಾದರೂ ನಿಶ್ಚಲತೆಯನ್ನು ಕಾಯ್ದುಕೊಳ್ಳುವಿರಿ. ದೇವತಾರಾಧನೆಯ ನಡುವೆ ಉದ್ಯೋಗದತ್ತ ಗಮನ ಹರಿಸುವ ಅನಿವಾರ್ಯತೆ. ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಪೂರ್ತಿ.
ಕರ್ಕಾಟಕ: ಹತ್ತಿರದ ದೇವಾಲಯಕ್ಕೆ ಭೇಟಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಬಂಧುಗಳಿಂದ ಸಹಾಯ. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯ ನಿರೀಕ್ಷೆ. ವ್ಯವಹಾರ ಕ್ಷೇತ್ರ ವಿಸ್ತರಣೆಯ ಬಗ್ಗೆ ಚಿಂತನೆ. ಹೊಸ ಪಾಲುದಾರರ ಸೇರ್ಪಡೆ ಸಂಭವ.
ಸಿಂಹ: ವಸ್ತ್ರ, ಆಭರಣ, ಯಂತ್ರಸಾಮಗ್ರಿ ಮಾರಾಟಗಾರರಿಗೆ ನಿರೀಕ್ಷೆ ಮೀರಿ ಲಾಭದ ಭರವಸೆ. ಉದ್ಯೋಗಸ್ಥರಿಗೆ ಯಶಸ್ಸಿನ ಭರವಸೆ. ಅಲ್ಪ ಕಾಲದಲ್ಲಿ ಲಾಭ ಗಳಿಸುವ ಉದ್ದೇಶದ ವ್ಯವಹಾರಗಳಲ್ಲಿ ದೊಡ್ಡ ಪ್ರಮಾಣದ ಸೋಲು.
ಕನ್ಯಾ: ಲಾಭ – ನಷ್ಟ ಎರಡೂ ಸರಿತೂಕದಲ್ಲಿರುವ ದಿನ. ಅಲ್ಪ ಆದಾಯದ ವರ್ಗದವರಿಗೆ ಸಣ್ಣ ಹೂಡಿಕೆಗೆ ಉತ್ತೇಜನ. ಉದ್ಯೋಗದಲ್ಲಿ ಪ್ರಗತಿ. ಹಿರಿಯರಿಗೆ ಹರ್ಷ. ಮಧ್ಯಮ ಗಾತ್ರದ ಉದ್ಯಮಗಳು ಯಶಸ್ವಿ. ವಾಹನ ಚಾಲನೆಯಲ್ಲಿ ಎಚ್ಚರ.
ತುಲಾ: ದೂರಕ್ಕೆ ಹೋಗಿದ್ದ ಹಿರಿಯರ ಆಗಮನ. ಮನೆಯಲ್ಲಿ ಹಬ್ಬ ಆಚರಣೆಗೆ ಸಿದ್ಧತೆ. ಮಕ್ಕಳಲ್ಲಿ ವ್ಯಾಸಂಗಾಸಕ್ತಿ ಬೆಳೆಸಲು ವಿಶೇಷ ಶ್ರಮ. ಸರಕಾರಿ ನೌಕರರಿಗೆ ನಿರಾಳ. ಉದ್ಯಮಿಗಳಿಗೆ ಇಲಾಖೆಗಳ ಕಡೆಯ ಕೆಲಸಗಳು ಸುಗಮ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ.
ವೃಶ್ಚಿಕ: ಅಪೇಕ್ಷೆಗಳಿಗೆ ತಕ್ಕಂತೆ ಲಾಭ ಆಗಲಿಲ್ಲವೆಂಬ ಕೊರಗು ಬೇಡ. ಹೊಸ ವಸ್ತ್ರ, ಆಭರಣ, ಗೃಹಾಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ವೃದ್ಧಿ.
ಧನು: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿ. ಹಬ್ಬದ ಆಚರಣೆಯಲ್ಲಿ ನೆರೆ ಯವರ ಪಾಲುಗೊಳ್ಳುವಿಕೆ. ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಆಸಕ್ತಿ. ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ. ಸರಕಾರಿ ಕಚೇರಿಗಳಲ್ಲಿ ಅಸಹಕಾರ.
ಮಕರ: ಮಂದಗತಿಯಲ್ಲಿ ಪ್ರಗತಿ. ಜೀವನ ನಿರ್ವಹಣೆ ನಿರಾತಂಕ. ಉದ್ಯೋಗ ಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಒತ್ತಡ. ಉದ್ಯೋಗ ಬದಲಾವಣೆಗೆ ಪ್ರಯತ್ನ. ಕುಟುಂಬದ ಸದಸ್ಯರ ಸಹಕಾರ ಲಭ್ಯ. ಸ್ವಂತ ಆರೋಗ್ಯ ನಿರ್ಲಕ್ಷ é ಸಲ್ಲದು.
ಕುಂಭ: ಪ್ರಯತ್ನಗಳ ಅಂತಿಮ ಹಂತದಲ್ಲಿ ಜಯ. ಪರೋಪಕಾರದ ಫಲವಾಗಿ ಬದುಕಿನಲ್ಲಿ ಯಶಸ್ಸು ಪ್ರಾಪ್ತಿ. ಸೇವಾ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಮಗ್ನರಾಗುವಿರಿ. ಉದ್ಯೋಗದಲ್ಲಿ ಸಾಧಿಸಿದ ಪ್ರಗತಿಗಾಗಿ ಜನಮನ್ನಣೆ. ಸೇವಾ ಕಾರ್ಯಗಳ ವಿಸ್ತರಣೆಗೆ ಚಿಂತನೆ. ಮನೆಯಲ್ಲಿ ಹಬ್ಬ ಆಚರಣೆ.
ಮೀನ: ಸಾಧನೆಯಿಂದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಆಹ್ಲಾದದ ವಾತಾವರಣ. ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರ ವರ್ಗದವರಿಂದ ಉತ್ತಮ ಸ್ಪಂದನೆ. ಮನೆಯಲ್ಲಿ ಹಬ್ಬ ಆಚರಣೆ. ದೇವಾಲಯದ ಉತ್ಸವದ ಸಡಗರದಲ್ಲಿ ಭಾಗಿಯಾಗುವಿರಿ. ಧಾರ್ಮಿಕ ಕ್ಷೇತ್ರದ ಹಿರಿಯ ನಾಯಕರ ಭೇಟಿ. ಸಮಾಜ ಕಾರ್ಯದಲ್ಲಿ ಗೌರವದ ಸ್ಥಾನ ನಿರ್ವಹಣೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.