Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ
Team Udayavani, Oct 18, 2024, 7:25 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ಆನಂದಾನು ಭವ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅಧಿಕ ಲಾಭ. ಷೇರು ಹೂಡಿಕೆಯಲ್ಲಿ ಲಾಭ. ದೇವತಾ ಕಾರ್ಯಗಳಲ್ಲಿ ಮಗ್ನತೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯದ ಆನಂದ.
ವೃಷಭ: ಎಲ್ಲ ಕಾರ್ಯಕ್ಷೇತ್ರಗಳಲ್ಲೂ ತಡೆಯಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಶೀಘ್ರವಾಗಿ ಕಾರ್ಯ ಮುಗಿಸುವ ಆತುರ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರೋತ್ಸಾಹ.
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳು ಯಶಸ್ವಿ. ನ್ಯಾಯಕ್ಕಾಗಿ ಹೋರಾಟದಲ್ಲಿ ಜಯ. ಹಿರಿಯರೊಂದಿಗೆ ಸಣ್ಣ ತಿರುಗಾಟ. ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಿ.
ಕರ್ಕಾಟಕ: ಉದ್ಯೋಗಸ್ಥಾನದಲ್ಲಿ ವಿಶಿಷ್ಟ ಪ್ರಯೋಗಗಳು ಆರಂಭ. ಉದ್ಯಮಗಳಲ್ಲಿ ಮಾಲಕರು ಮತ್ತು ನೌಕರರ ನಡುವೆ ಆಪ್ತ ಸಂಬಂಧ. ವೈವಾಹಿಕ ಸಂಬಂಧ ಕುದುರಿಸಲು ಪ್ರಯಾಣ. ಗೃಹೋದ್ಯಮಗಳ ಸ್ಥಿತಿ ಸುಧಾರಣೆ.
ಸಿಂಹ: ಸರಕಾರಿ ನೌಕರರಿಗೆ ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆಯ ಆತಂಕ. ಉದ್ಯಮಿಗಳಿಗೆ ಅನುಕೂಲ. ಸ್ವೋದ್ಯೋಗಿ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು.
ಕನ್ಯಾ: ಅವಧಿಗೆ ಮೊದಲೇ ಕೆಲಸ ಮುಗಿಸಿದ ತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಿವಾಹಾಸಕ್ತರಿಗೆ ಸಂಬಂಧ ಕೂಡಿ ಬರುವ ಲಕ್ಷಣ. ಸಂಸಾರದಲ್ಲಿ ಸಾಮರಸ್ಯ.
ತುಲಾ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸಣ್ಣ ಉದ್ಯಮ ಘಟಕಗಳ ವಿಸ್ತರಣೆ. ಉದ್ಯೋಗ ಅನ್ವೇಷಣೆ ಫಲಪ್ರದ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.
ವೃಶ್ಚಿಕ: ಸಾಂಸಾರಿಕ ಜೀವನದಲ್ಲಿ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅವಿವಾಹಿತ ಕನ್ಯೆಯರಿಗೆ ಶೀಘ್ರ ವಿವಾಹ ಯೋಗ.
ಧನು: ಸ್ಥಿರವಾದ ವರಮಾನ ಮೂಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಮಂದಗತಿಯ ಕಾರ್ಯ. ಕೃಷ್ಯುತ್ಪನ್ನಗಳು, ಹಣ್ಣು ತರಕಾರಿ ಮಾರಾಟ ದಿಂದ ಲಾಭ. ದೂರದ ಬಂಧುಗಳಿಂದ ಶುಭ ಸಮಾಚಾರ.
ಮಕರ: ಸಮಯಕ್ಕೆ ಸರಿಯಾಗಿ ಕಾರ್ಯ ಗಳು ಮುಗಿದ ಸಮಾಧಾನ. ಕಟ್ಟಡ ನಿರ್ಮಾಪಕರಿಗೆ ಕಾರ್ಯ ಮುಗಿಸುವ ತರಾತುರಿ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಬಂಧುಗಳೊಂದಿಗೆ ವೈಮನಸ್ಯ ಪರಿಹಾರ.
ಕುಂಭ: ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ವಾಹನ ಬಿಡಿಭಾಗಗಳಿಂದ ಅಧಿಕ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ಬೆಳವಣಿಗೆ. ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಮನೆಯಲ್ಲಿ ಶುಭಕಾರ್ಯಕ್ಕೆ ಮುನ್ನುಡಿ.
ಮೀನ: ಆಯೋಜಿತ ಯೋಜನೆಗಳ ತ್ವರಿತ ಜಾರಿ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಸಮಯಕ್ಕೆ ಸರಿಯಾದ ಸೇವೆ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗಟ್ಟಿ ನಿರ್ಧಾರ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ಹರ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.