Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ
Team Udayavani, Oct 3, 2024, 7:36 AM IST
ಮೇಷ: ನವರಾತ್ರಿಯ ಆರಂಭದಲ್ಲಿ ಶುಭ ಸೂಚನೆಗಳು. ಉದ್ಯೋಗಸ್ಥರಿಗೆ ಆಹ್ಲಾದಕರ ಅನುಭವ. ಸಂದರ್ಭಕ್ಕೆ ಸರಿಯಾಗಿ ಸ್ಪಂದನ. ಸಣ್ಣ ಉದ್ಯಮಿಗಳಿಗೆ ಗಣನಾರ್ಹ ಯಶಸ್ಸು. ಮಹಿಳಾ ಉದ್ಯಮಿಗಳಿಗೆ ಕೀರ್ತಿಲಾಭ.
ವೃಷಭ: ಉದ್ಯೋಗಸ್ಥರಿಗೆ ಖಾತೆ ಬದಲಾವಣೆ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ.
ಮಿಥುನ: ಪರ್ವಕಾಲದಲ್ಲಿ ಹೊಸ ಯೋಜನೆಗಳು. ತಾತ್ಕಾಲಿಕ ನೌಕರರ ಕೆಲಸ ಖಾಯಂ. ಅನವಶ್ಯ ವೈಮನಸ್ಯಕ್ಕೆ ಎಡೆಗೊಡಬೇಡಿ. ಯುವಜನರಿಗೆ ವೃತ್ತಿಪರ ಶಿಕ್ಷಣದ ವ್ಯವಸ್ಥೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.
ಕರ್ಕಾಟಕ: ಎಣಿಸಿದ್ದಕ್ಕಿಂತ ಸುಲಭವಾಗಿ ಕಾರ್ಯಸಾಧನೆ. ಉದ್ಯೋಗಸ್ಥರ ಸ್ಥಿತಿಯಲ್ಲಿ ವ್ಯತ್ಯಾಸ ಇಲ್ಲ. ಉದ್ಯಮಗಳ ಬೆಳವಣಿಗೆಗೆ. ಕಾನೂನು ಅಡ್ಡಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ಮನೆಯಲ್ಲಿ ದೇವತಾರಾಧನೆಯ ಸಂಭ್ರಮ.
ಸಿಂಹ: ನಿರ್ವಹಿಸಲು ಕಷ್ಟವಾಗುವಷ್ಟು ವ್ಯವಹಾರಗಳು. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ವಸ್ತ್ರ,ಆಭರಣ ವ್ಯಾಪಾರಿಗಳಿಗೆ ಸಂಭ್ರಮ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ಕನ್ಯಾ: ಉದ್ಯೋಗಸ್ಥರಿಗೆ ಪರಿಶ್ರಮದಿಂದ ಹೆಸರು. ಸಂಸ್ಥೆಯ ಪ್ರಮುಖರಿಂದ ಪುರಸ್ಕಾರ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ದೇವರ ದರ್ಶನಕ್ಕಾಗಿ ಉತ್ತರಕ್ಕೆ ಪ್ರಯಾಣ.
ತುಲಾ: ಶಾರೀರಿಕ ಬಾಧೆಯಿಂದ ಮುಕ್ತರಾಗಿದ್ದೀರಿ ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟದಿಂದ ಬಿಡುಗಡೆ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ವಿವಾಹಾಸಕ್ತರಿಗೆ ಅನುರೂಪದ ಜೋಡಿ ಲಭ್ಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ವೃಶ್ಚಿಕ: ಉದ್ಯೋಗಸ್ಥರ ಹಿತಕ್ಕೆ ಹಾನಿಯಾಗದು. ಸರಕಾರಿ ಅಧಿಕಾರಿಗಳಿಗೆ ಅಪವಾದದ ಭೀತಿ. ರಾಜಕಾರಣಿಗಳ ನಡುವೆ ನಿಲ್ಲದ ಕೆಸರೆರಚಾಟ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದಲ್ಲಿ ಸಾಮರಸ್ಯ, ಒಗ್ಗಟ್ಟಿಗೆ ಹಾನಿಯಿಲ್ಲ.
ಧನು: ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯ ಸುಧಾರಣೆ. ಉದ್ಯಮದ ವೈವಿಧಿÂàಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.ಮಕ್ಕಳ ಪ್ರತಿಭೆ ವಿಕಸನಕ್ಕೆ ಉತ್ತೇಜನ. ಸಂಸಾರದಲ್ಲಿ ಸಾಮರಸ್ಯ, ಆರೋಗ್ಯ, ಆನಂದ.
ಮಕರ: ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು.ಹಿತಶತ್ರುಗಳ ಕುತಂತ್ರ ಗಳಿಗೆ ಸೋಲು. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ.ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ.
ಕುಂಭ: ಪರ್ವಕಾಲ ಆರಂಭವಾಗುತ್ತಿದ್ದಂತೆ ಮುಂದೆ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ.
ಮೀನ: ನವರಾತ್ರಿಯ ಪರ್ವಕಾಲ ಆರಂಭದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಸಮಾಜ ಸುಧಾರಣಾ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.