Daily Horoscope: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ, ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ
Team Udayavani, Oct 3, 2023, 8:55 AM IST
ಮೇಷ: ಮಧ್ಯಮ ಫಲಗಳ ದಿನ.ಆಪ್ತರಿಂದ ನಿರೀಕ್ಷಿತ ಸಹಾಯ ಕೈಸೇರುವಾಗ ಕೊಂಚ ವಿಳಂಬ. ಉದ್ಯೋಗ ಕ್ಷೇತ್ರದಲ್ಲಿ ತೃಪ್ತಿಕರ ವಾತಾವರಣ. ಸಹೋದ್ಯೋಗಿಗಳಿಂದ ಸಹಾಯ ಲಭ್ಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ ಮಧ್ಯಮ.
ವೃಷಭ: ಕಾರ್ಯಕ್ಷೇತ್ರದಲ್ಲಿ ಉತ್ಸಾಹದ ವಾತಾವರಣ. ಉದ್ಯೋಗಸ್ಥರಿಗೆ ಕೆಲಸ ಮಾಡಲು ಮೇಲಿನವರ ಉತ್ತೇಜನ. ಸ್ವಂತ ವ್ಯವಹಾರ ನಡೆಸುವವರಿಗೆ ಸರಕಾರಿ ಇಲಾಖೆಗಳಲ್ಲಿ ಕಾರ್ಯ ಸುಗಮ. ವೈಯಕ್ತಿಕ ಕಾರ್ಯಕ್ಕಾಗಿ ಸಣ್ಣ ಪ್ರಯಾಣದ ಸಾಧ್ಯತೆ.
ಮಿಥುನ: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ. ಸಾಧನ, ಸಲಕರಣೆಗಳು ಸಕಾಲದಲ್ಲಿ ಲಭ್ಯ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ. ಸಹೋದ್ಯೋಗಿಗಳ ಸಹಕಾರ ತೃಪ್ತಿಕರ. ಹೊರಗಿನ ಕೆಲಸಗಳಿಗೆ ಪ್ರತಿಫಲ ವಿಳಂಬ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ.
ಕರ್ಕಾಟಕ: ಹೆಚ್ಚಿನ ಭಾಗ ಶುಭಫಲಗಳಿಗೆ ಮೀಸಲು. ನಿರೀಕ್ಷಿತ ಸಹಾಯಗಳು ಸಮಯಕ್ಕೆ ಸರಿಯಾಗಿ ಕೈಸೇರಿ ನೆಮ್ಮದಿ. ಉದ್ಯೋಗ ಕ್ಷೇತ್ರದಲ್ಲಿ ಹಿತಕರ ವಾತಾವರಣ. ಪಾಲಿಗೆ ಬಂದ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುವಿರಿ.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಪಾರ ದರ್ಶಕತೆಯನ್ನು ಕಾಯ್ದುಕೊಳ್ಳಿರಿ. ಕಿರಿಯರು ಆರಂಭಿಸಿರುವ ಸ್ವಂತ ಉದ್ಯಮಕ್ಕೆ ಮಾರ್ಗದರ್ಶನ. ಎಲೆಕ್ಟ್ರಾನಿಕ್ಸ್ ಉಪಕರಣ ವ್ಯಾಪಾರಿಗಳಿಗೆ ಸ್ಪರ್ಧೆಯ ಅನುಭವ. ವಿದ್ಯುತ್ ಸಾಧನಗಳ ದುರಸ್ತಿಗಾರರಿಗೆ ಕೈತುಂಬಾ ಕೆಲಸ.
ಕನ್ಯಾ: ನಿರೀಕ್ಷಿತ ವೇಗದಲ್ಲಿ ಪ್ರಗತಿ ಇಲ್ಲವಾದರೂ ತೃಪ್ತಿಕರ ಸಾಧನೆ. ಹಿತಕರ ವಾತಾವರಣದಲ್ಲಿ ಉದ್ಯೋಗ ಸಾಧನೆ. ಸರಕಾರಿ ನೌಕರರಿಗೆ ದೂರದ ಪ್ರದೇಶಕ್ಕೆ ವರ್ಗಾವಣೆಯ ಭೀತಿ. ಲೇವಾದೇವಿ ವ್ಯವಹಾರದಾರರಿಗೆ ದೊಡ್ಡ ಪ್ರಮಾಣದ ನಷ್ಟ ಸಂಭವ.
ತುಲಾ: ಆತಂಕಗೊಂಡ ಹಿರಿಯರಿಗೆ ಸಾಂತ್ವನ ಹೇಳಿದ ಸಮಾಧಾನ. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶನದಿಂದ ಸಹೋದ್ಯೋಗಿಗಳಿಗೆ ಹರ್ಷ. ಮೇಲಿನವರಿಂದ ಉತ್ತೇಜನ. ಆಭರಣ ತಯಾರಿ, ಕುಂಭಕಲೆ ಮೊದಲಾದ ಕುಶಲಕರ್ಮಿಗಳಿಗೆ ಕೈತುಂಬಾ ಕೆಲಸ.
ವೃಶ್ಚಿಕ: ದುಡುಕಿನ ನಿರ್ಧಾರಗಳನ್ನು ತೆಗೆದು ಕೊಳ್ಳಬೇಡಿ. ತಾತ್ಕಾಲಿಕ ಹಿನ್ನಡೆಯಂತೆ ಕಂಡರೂ ಕೊನೆಯಲ್ಲಿ ಯಶಸ್ಸು ನಿಶ್ಚಿತ. ಗೃಹೋಪಯೋಗಿ ಸಾಮಗ್ರಿ ವಿತರಕರಿಗೆ ಲಾಭ. ಕಟ್ಟಡ ನಿರ್ಮಾಣ ನೌಕರರಿಗೆ ಆದಾಯ ಹೆಚ್ಚಳ. ಕುಶಲಕರ್ಮಿಗಳ ಉತ್ಪನ್ನಗಳಿಗೆ ಬೇಡಿಕೆ ಏರಿಕೆ.
ಧನು: ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಮೇಲಧಿಕಾರಿಗಳಿಂದ ಪ್ರಶಂಸೆ. ಸರಕಾರಿ ನೌಕರರಿಗೆ ಹೆಚ್ಚುವರಿ ಕೆಲಸದ ಒತ್ತಡ. ಕೆಲಸದ ಉದ್ದೇಶಕ್ಕಾಗಿ ಸಣ್ಣ ಪ್ರವಾಸ ಸಂಭವ. ಆಪ್ತ ಸಲಹೆಯ ಮೂಲಕ ಹಳೆಯ ಸಮಸ್ಯೆ ನಿವಾರಣೆ.
ಮಕರ: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ.ಮಕ್ಕಳ ಭವಿಷ್ಯದ ಕುರಿತು ಆತಂಕ. ಸ್ವಂತದ ಆರೋಗ್ಯದ ಕಡೆಗೆ ಗಮನವಿರಲಿ. ವ್ಯವಹಾರ ಕ್ಷೇತ್ರದ ಹಳೆಯ ಸಮಸ್ಯೆಗೆ ಪರಿಹಾರ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಉಳಿದಂತೆ ಆದಾಯ ತೃಪ್ತಿಕರ. ಉದ್ಯೋಗಸ್ಥರಿಗೆ ಹೆಚ್ಚುವರಿ ಹೊಣೆಗಾರಿಕೆ. ಪ್ರೀತಿಪಾತ್ರರಿಗೆ ಸಹಾಯ ಮಾಡುವ ಅವಕಾಶ. ಕುಟುಂಬದ ಹಿರಿಯರ ದರ್ಶನ. ಸಮಾಜ ಸೇವೆಗೆ ಹೆಚ್ಚಿನ ಅವಕಾಶ ಲಭ್ಯ.
ಮೀನ: ತಾಳ್ಮೆ, ವಿನಯಗಳಿಂದ ಕಾರ್ಯಸಾಧನೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ಪರಿಸ್ಥಿತಿ. ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ಸಲೀಸು. ಆದಾಯ ತೃಪ್ತಿಕರ. ಸಹಚರರಿಗೋಸ್ಕರ ಕಾರ್ಯವ್ಯಾಪ್ತಿ ವಿಸ್ತರಣೆ. ಸಮಾಜದ ಕಡೆಯಿಂದ ಹೆಚ್ಚು ಅಪೇಕ್ಷೆ. ಗುರುಸೇವೆ, ದೇವತಾರಾಧನೆಯಲ್ಲಿ ಆಸಕ್ತಿ. ಹಿರಿಯರು, ಗೃಹಿಣಿಯರು, ಮಕ್ಕಳ ಆರೋಗ್ಯ ತೃಪ್ತಿಕರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.