Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ
Team Udayavani, Oct 5, 2024, 7:37 AM IST
ಮೇಷ: ಭಗವದನುಗ್ರಹದಿಂದ ಎಲ್ಲವೂ ಶುಭ. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯಮಿಗಳಿಗೆ ಲಕ್ಷ್ಮಿ ಕಟಾಕ್ಷದ ದಿನ. ಕೃಷಿಕರಿಗೆ, ಹೈನು ವ್ಯವಸಾಯಗಾರರಿಗೆ ಶುಭವಾರ್ತೆ. ಅವಿವಾಹಿತರಿಗೆ ವಿವಾಹ ಯೋಗ.
ವೃಷಭ: ಅಂತರ್ವಾಣಿಯ ಆದೇಶವನ್ನು ಪಾಲಿಸುವುದರಿಂದ ಕಾರ್ಯಸಾಧನೆ. ಉದ್ಯೋಗ, ಉದ್ಯಮದಲ್ಲಿ ಹೊಸ ಅವಕಾಶಗಳು. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ದಂಪತಿಗಳ ನಡುವೆ ಭಾವನಾತ್ಮಕ ಸಂಬಂಧ ವೃದ್ಧಿ.
ಮಿಥುನ: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ಸಹಾಯ. ಗೃಹೋಪಕರಣ ಸಾಧನಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ವಿಶೇಷ ಸಾಧನೆಯ ವ್ಯಕ್ತಿಯೊಬ್ಬರ ಪರಿಚಯ.
ಕರ್ಕಾಟಕ: ಉದ್ಯೋಗ, ವ್ಯವಹಾರದಲ್ಲಿ ಉತ್ಸಾಹದ ವಾತಾವರಣ. ಅನಿರೀಕ್ಷಿತ ಧನಲಾಭ. ಹೊಸ ಗ್ರಂಥಾಲಯ ಬೆಳೆಸಲು ಆಸಕ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಅಲ್ಪಕಾಲಿಕ ಹೂಡಿಕೆಗಳಿಂದ ದೂರವಿರಿ.
ಸಿಂಹ: ಕಾರ್ಯದಕ್ಷತೆಗೆ ಪ್ರಾಶಸ್ತ್ಯ ಸ್ಥಾನ ಲಭ್ಯ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ವ್ಯವಹಾರದ ನಿಮಿತ್ತ ಪೂರ್ವ ದಿಕ್ಕಿಗೆ ಪ್ರಯಾಣ. ಸ್ವೋದ್ಯೋಗಿ ಗೃಹಿಣಿಯರಿಗೆ ಶುಭ ವಾರ್ತೆ. ಹಿರಿಯರಿಗೆ, ಮಕ್ಕಳಿಗೆ ಸಂಭ್ರಮ.
ಕನ್ಯಾ: ಮನಸ್ಸಿನ ವಿಕಾಸ ಹಾಗೂ ಬಲವರ್ಧನೆಗೆ ಸರ್ವ ಪ್ರಯತ್ನ.ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ವಸ್ತ್ರೋದ್ಯಮದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ. ದೇವತಾರಾಧನೆಯಿಂದ ಸೌಭಾಗ್ಯ ಪ್ರಾಪ್ತಿ. ಕುಟುಂಬದ ಸದಸ್ಯರ ಸಮ್ಮಿಲನ.
ತುಲಾ: ಸ್ಥಿರಚಿತ್ತದ ಅಧ್ಯಯನ ಹಾಗೂ ಏಕಾಗ್ರತೆಯಿಂದ ಕಾರ್ಯಸಾಧನೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹಿಣಿ ಯರಿಗೆ ಹೆಚ್ಚು ಸಾಂಸಾರಿಕ ಜವಾಬ್ದಾರಿ. ಕೃಷ್ಯುತ್ಪಾದನೆ ಮನೆಯಲ್ಲಿ ದೇವತಾರಾಧನೆಯ ಸಂಭ್ರಮ.
ವೃಶ್ಚಿಕ: ಉದ್ಯೋಗಸ್ಥರಿಗೆ ಹಿತಾನುಭವ. ಉದ್ಯಮಿಗಳಿಗೆ ಸರಕಾರದ ಕಡೆಯಿಂದ ಪೋ›ತ್ಸಾಹ. ಪಶ್ಚಿಮ ದಿಕ್ಕಿನಿಂದ ಶುಭವಾರ್ತೆ. ದೇವತಾ ರಾಧನೆಯಲ್ಲಿ ಆಸಕ್ತಿ. ಕಿರಿಯ ಬಂಧುವಿಗೆ ವಿವಾಹ ನಿಶ್ಚಯ. ಮನೆಯಲ್ಲಿ ಸಮಾಧಾನದ ವಾತಾವರಣ.
ಧನು: ವಿಳಂಬವಾದರೂ ನಿರೀಕ್ಷಿತ ಲಾಭ ಕೈಸೇರಿ ಸಂತೃಪ್ತಿ. ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಉದ್ಯಮದ ನೌಕರರಿಗೆ ಪ್ರೋತ್ಸಾಹಕ ಧನದಿಂದ ಹರ್ಷ. ಹಿರಿಯರ, ಸಂಗಾತಿಯ ಅಪೇಕ್ಷೆ ಅರಿತು ಈಡೇರಿಸಿ.
ಮಕರ: ಜಾಣತನದಿಂದ ಕಾರ್ಯಸಿದ್ಧಿ. ವೃತ್ತಿರಂಗದಲ್ಲಿ ಕಾರ್ಯಸಾಮರ್ಥ್ಯಕ್ಕೆ ಗೌರವ ಪ್ರಾಪ್ತಿ. ವಾಹನ ಬಿಡಿಭಾಗ ವ್ಯಾಪಾರ ವೃದ್ಧಿ. ದೂರದ ಬಂಧುಗಳ ಅನಿರೀಕ್ಷಿತ ಭೇಟಿ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.
ಕುಂಭ: ಸಂಪತ್ತಿನ ಜೋಪಾನಕ್ಕೆ ಮುನ್ನೆಚ್ಚರಿಕೆ ಕ್ರಮ. ಹಿತಶತ್ರುಗಳ ಮೇಲೆ ಕಣ್ಣಿಡಿರಿ. ಉದ್ಯೋಗಾಸಕ್ತ ಯುವಜನರಿಗೆ ಮಾರ್ಗದರ್ಶನ. ಸಾಮಾಜಿಕ ರಂಗದಲ್ಲಿ ಅಯಾಚಿತವಾಗಿ ಸೇವೆಗೆ ಸದವಕಾಶಗಳು ಲಭ್ಯ. ಮನೆಯಲ್ಲಿ ಆನಂದದ ವಾತಾವರಣ.
ಮೀನ: ವಿತ್ತಾಪಹಾರಕರ ಬಗ್ಗೆ ಎಚ್ಚರವಿರಲಿ. ತಾಯಿಯ ಆರೋಗ್ಯ ಗಮನಿಸಿ. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಬಾಂಧವರ ಸಹಕಾರ. ಸಾಮಾಜಿಕ ರಿಂದ ಗೌರವದ ಸ್ಥಾನಕ್ಕೆ ಆಹ್ವಾನ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವ ಸೂಚನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.