Daily Horoscope: ಎಲ್ಲವೂ ಸರಿಯಾಯಿತೆಂದು ಅನಿಸುವಾಗ ಹೊಸ ಸಮಸ್ಯೆ ಉದ್ಭವ
Team Udayavani, Oct 8, 2023, 7:33 AM IST
ಮೇಷ: ಯೋಜನೆಗಳ ಅನುಷ್ಠಾನದ್ದೇ ಚಿಂತೆ. ಆಪ್ತ ವಲಯಗಳಿಂದ ಅಪೇಕ್ಷಿತ ನೆರವು ಕೈಸೇರುವುದು. ಕಾರ್ಯಕ್ಷೇತ್ರ ವಿಸ್ತರಣೆ ಸಂಭವ. ಉದ್ಯೋಗದಲ್ಲಿ ಮತ್ತಷ್ಟು ಜವಾಬ್ದಾರಿಗಳ ಹೇರಿಕೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮಂದಗತಿಯ ಪ್ರಗತಿಯ ಅನುಭವ.
ವೃಷಭ: ದುಡುಕದೆ ತಾಳ್ಮೆಯಿಂದ ಮುಂದುವರಿ ಯಿರಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಸಹೋದ್ಯೋಗಿಗಳಿಂದ ಸಹಕಾರ. ಮೇಲಿನವರಿಂದ ಪ್ರೋತ್ಸಾ ಹದ ಮಾತುಗಳು. ಸ್ವಂತ ಉದ್ಯಮ ಉತ್ಪನ್ನಗಳ ಬೇಡಿಕೆ ವೃದ್ಧಿ. ದೇವ, ಪಿತೃ ಕಾರ್ಯಗಳಲ್ಲಿ ಪಾಲುಗೊಳ್ಳುವಿರಿ.
ಮಿಥುನ: ಎಲ್ಲವೂ ಸರಿಯಾಯಿತೆಂದು ಅನಿಸುವಾಗ ಹೊಸ ಸಮಸ್ಯೆ ಉದ್ಭವ. ಧ್ಯಾನ, ದೇವತಾ ರಾಧನೆ, ಸತ್ಸಂಗಗಳಲ್ಲಿ ಮನಸ್ಸು ತಲ್ಲೀನ. ದೂರದ ನೆಂಟರಿಂದ ಒಳ್ಳೆಯ ಸುದ್ದಿ. ಹತ್ತಿರದ ದೇವತಾ ಸ್ಥಾನಕ್ಕೆ ಭೇಟಿ ಸಂಭವ. ಹಣದ ಬೆಳೆಗಳಿಗೆ ಧಾರಣೆ ಏರಿಕೆ.
ಕರ್ಕಾಟಕ: ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಗೃಹೋದ್ಯಮಗಳಲ್ಲಿ ಹೊಸ ವಸ್ತುಗಳ ಆವಿಷ್ಕಾರ. ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಮನೆಯಲ್ಲಿ ನೆಮ್ಮದಿ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಕಾರ್ಯ ನಿರಾತಂಕ. ಹೊಸ ಜವಾಬ್ದಾರಿಗಳ ನಿರೀಕ್ಷೆ. ಸ್ವಂತ ಉದ್ಯಮ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ ಪ್ರಯತ್ನ ಅವಶ್ಯ. ಕೆಲವು ದಿನಗಳಿಂದ ಕಾಯುತ್ತಿದ್ದ ಮಹತ್ವದ ಪತ್ರ ಕೈಸೇರಿ ನೆಮ್ಮದಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸುದ್ದಿ.
ಕನ್ಯಾ:ಹವಾಮಾನ ವ್ಯತ್ಯಾಸದಿಂದ ಮನಸ್ಸಿನ ಮೇಲೆ ಕೊಂಚ ಪರಿಣಾಮ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಕೆಲವು ಕ್ಷೇತ್ರಗಳಲ್ಲಿ ಖಾತೆಗಳ ಮರು ಹಂಚಿಕೆ. ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ. ಮನೆಯಲ್ಲಿ ಕುಟುಂಬದಲ್ಲಿ ಪಿತೃ ಕಾರ್ಯದಿಂದ ಕ್ಷೇಮ.
ತುಲಾ: ಡೋಲಾಯಮಾನ ಮನಸ್ಸನ್ನು ನಿಯಂತ್ರಿಸಿಕೊಳ್ಳಿ. ಸ್ವಂತದ ಆರೋಗ್ಯ ಸ್ವಲ್ಪ ಗಮನಿಸಿ. ಮನೆಯಲ್ಲಿ ಉಳಿದ ಎಲ್ಲರೂ ಕ್ಷೇಮ. ಉದ್ಯೋಗ ಕ್ಷೇತ್ರದಲ್ಲಿ ಉಲ್ಲೇಖಾರ್ಹ ಸಾಧನೆ. ಮೇಲಿನವರ ಮೆಚ್ಚುಗೆ. ಸಾಹಿತ್ಯಾಧ್ಯಯನದಲ್ಲಿ ಆಸಕ್ತಿ. ತೋಟಗಾರಿಕೆಯತ್ತ ಗಮನ ಕೊಡಲು ಅವಕಾಶ. ಮಕ್ಕಳಿಗೆ ನೆಮ್ಮದಿ.
ವೃಶ್ಚಿಕ:ಮನಸ್ಸನ್ನು ಅಂತರ್ಮುಖಗೊಳಿಸಲು ಯತ್ನಿಸಿ. ಭಗವತ್ ಚಿಂತನೆಯತ್ತ ಒಲವು. ವ್ಯವಹಾರಸ್ಥರಿಗೆ ವಿರಾಮದ ದಿನವೂ ಕರ್ತವ್ಯದ ಕರೆ. ಸೇವೆಗಳ ಹಾಗೂ ಉತ್ಪನ್ನಗಳ ಗುಣಮಟ್ಟ ವರ್ಧನೆಗೆ ಚಿಂತನೆ. ಸಂಗೀತ ಶ್ರವಣದಿಂದ ಆನಂದ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.
ಧನು: ಮನೆಯಲ್ಲಿ ಎಲ್ಲರ ದೇಹಾರೋಗ್ಯ ಉತ್ತಮ. ನೂತನ ವಾಹನ ಖರೀದಿಗೆ ಚಿಂತನೆ. ಮನೆಯಲ್ಲಿ ಆನಂದದ ವಾತಾವರಣ ನಿರ್ಮಿಸಲು ಗೃಹಿಣಿ ಯರಿಂದ ಹೊಸ ಪ್ರಯೋಗ. ಅಪರೂಪದ ಅತಿಥಿಯೊಬ್ಬರ ಆಗಮನ. ದಕ್ಷಿಣ ದಿಕ್ಕಿನಿಂದ ಶುಭ ಸಮಾಚಾರ.
ಮಕರ: ವೃತ್ತಿಪರರಿಗೆ ಅವಧಿ ಮುಗಿಯುವ ಮುನ್ನ ಕೆಲಸ ಮುಗಿಸುವ ಆತುರ. ಸಿಹಿ- ಕಹಿಗಳ ನೆನಪುಗಳನ್ನು ಮೆಲುಕು ಹಾಕಲು ಬಿಡುವಿಲ್ಲದಷ್ಟು ಒತ್ತಡ.ಉದ್ಯೋಗ ಬದಲಾವಣೆಗೆ ಚಿಂತನೆ. ಸ್ವಂತ ಉದ್ಯಮ ನಡೆಸುವವರಿಂದ ಹೊಸ ಕ್ಷೇತ್ರಗಳ ಅರಸುವಿಕೆ.
ಕುಂಭ: ದೂರದ ಬಂಧುಗಳ ಆಗಮನ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಸೇವಾ ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರ. ವ್ಯವಹಾರ ಯೋಜನೆಯೊಂದರ ನೀಲನಕ್ಷೆ ತಯಾರಿ. ಸಾಮಾಜಿಕ. ಕಾರ್ಯಕರ್ತರ ಭೇಟಿಯಿಂದ ಹೊಸ ಪ್ರೇರಣೆ.
ಮೀನ: ಮನೆಯಲ್ಲಿ ದೇವ- ಪಿತೃ ಕಾರ್ಯಗಳಿಂದ ಧನ್ಯತೆಯ ಭಾವ. ಗುರು ದರ್ಶನ ಸಂಭವ. ಹಿರಿಯರ ಸಹವಾಸದಿಂದ ಮನಶುದ್ಧಿ. ಸಾಮಾಜಿಕ ರಂಗದಿಂದ ಹೆಚ್ಚಿನ ಸೇವೆಗೆ ಆಹ್ವಾನ. ವಿರಾಮದ ದಿನವೂ ಮುಂದುವರಿದ ವ್ಯವಹಾರ ಚಿಂತನೆ. ಸಣ್ಣ ಪ್ರವಾಸದ ಸಾಧ್ಯತೆ. ಧಾರ್ಮಿಕ, ಆಧ್ಯಾತ್ಮಿಕ ಗ್ರಂಥ ಪಠಣ ಅಥವಾ ಶ್ರವಣದಿಂದ ಆನಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.