![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 9, 2023, 7:24 AM IST
ಮೇಷ: ಪ್ರಾಮಾಣಿಕತೆಗೆ ಪ್ರತಿಫಲ ಲಭಿಸುವ ಸಮಯ ಸನ್ನಿಹಿತ. ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯ. ಆಪ್ತರಿಂದ ಅಪೇಕ್ಷಿತ ನೆರವು ಸಕಾಲದಲ್ಲಿ ಲಭ್ಯ.
ವೃಷಭ: ಅದ್ಭುತವಾದ ಪ್ರಗತಿಯಲ್ಲವಾದರೂ ಆದಾಯಕ್ಕೆ ಕೊರತೆಯಿಲ್ಲ. ಸರಕಾರಿ ಅಧಿಕಾರಿ ಗಳಿಗೆ ಆಯಕಟ್ಟಿನ ಜಾಗದಿಂದ ಸ್ಥಳಾಂತರದ ಯೋಗ. ಪಾಲುದಾರಿಕೆ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಕೃಷಿಕರಿಗೆ ಹಲವು ಬಗೆಯ ಸವಾಲುಗಳಿದ್ದರೂ ಹಿನ್ನಡೆಯಾಗದು.
ಮಿಥುನ: ದೈವ ಬಲ- ಆತ್ಮಬಲಗಳು ಸಮ್ಮಿಳಿತವಾದಾಗ ಯಾವುದಕ್ಕೂ ಜಗ್ಗಬೇಕಾದ ಪ್ರಮೇಯವಿಲ್ಲ. ಪ್ರಾರಂಭದ ಹಂತದಲ್ಲಿ ಕಾಡಿದ ಸಹೋದ್ಯೋಗಿಗಳೇ ಹಿತೈಷಿಗಳಾಗಿ ಪರಿವರ್ತನೆಗೊಳ್ಳುವ ಸಂದರ್ಭ. ನಿಷ್ಠೆಯನ್ನು ಗಮನಿಸಿದ ಮೇಲಧಿಕಾರಿಗಳಿಂದ ಪ್ರಶಂಸೆ.
ಕರ್ಕಾಟಕ: ಶುಭಫಲಗಳ ದಿನ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಪಿತೃಕಾರ್ಯ ಮಾಡಿದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪಶುಪಾಲನೆ ಹಾಗೂ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸುದಿನ.
ಸಿಂಹ: ಮಂದಗತಿಯದಾದರೂ ಸ್ಥಿರವಾದ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆದ ಸಾಧನೆ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆಗಳತ್ತ ಗಮನ ಹರಿಸಿದಲ್ಲಿ ಉತ್ತಮ.ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಚಿಂತನೆ. ಆಪ್ತರ ಸಲಹೆಯಿಂದ ಹಿತ.
ಕನ್ಯಾ: ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆ ಯೊಂದಕ್ಕೆ ಪರಿಹಾರ. ಸರಕಾರಿ ಉದ್ಯೋಗಸ್ಥರ ಉತ್ತರದಾಯಿತ್ವ ಹೆಚ್ಚಳ. ಹಿರಿಯ ಅಧಿಕಾರಿಗಳ ಸ್ಥಳ ಬದಲಾವಣೆ ನಿರೀಕ್ಷೆ. ಸ್ವಯಂ ಉದ್ಯಮಿಗಳ ಪಾಲಿಗೆ ಹಿತಕರವಾದ ದಿನ.
ತುಲಾ: ಮಿಶ್ರಫಲಗಳ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಸ್ವಂತ ಒಡೆತನದ ಉದ್ಯಮಗಳಿಗೆ ಲಾಭ ಮಧ್ಯಮ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ. ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರು.
ವೃಶ್ಚಿಕ: ನೂತನ ಯೋಜನೆಗಳತ್ತ ಲಕ್ಷ್ಯ ಸರಕಾರಿ ಕಚೇರಿಯಲ್ಲಿ ಆಗಬೇಕಾದ ಕಾರ್ಯ ವಿಳಂಬ. ಉದ್ಯೋಗ ಸ್ಥಾನದಲ್ಲಿ ಅಸ್ಥಿರ ವಾತಾವರಣ. ಹಿತಶತ್ರುಗಳ ಹಾವಳಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಸ್ವೊದ್ಯೋಗ ಯೋಜನೆಗೆ ನೆರವು ಲಭ್ಯ.
ಧನು: ಅಲ್ಪಕಾಲದ ಹೂಡಿಕೆ ಯೋಜನೆಗಳ ಲಾಭ ಕೈಸೇರಿಕೆ. ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ಸ್ಥಿತಿ. ಹೊಸ ಅವಕಾಶಗಳ ಸಾಧ್ಯತೆ ವಿರಳ. ಆಪ್ತರಿಂದ ಅಪೇಕ್ಷಿತ ನೆರವು ವಿಳಂಬ. ದೂರದ ಮಿತ್ರರೊಡನೆ ಮಾತುಕತೆ. ದೀರ್ಘಕಾಲದ ಅಸ್ವಾಸ್ಥ್ಯಕ್ಕೆ ವೈದ್ಯಕೀಯ ಪರಿಹಾರ.
ಮಕರ: ವಿಶ್ರಾಂತಿಯಿಲ್ಲದ ದುಡಿಮೆಯಿಂದ ಶರೀರ, ಮನಸ್ಸಿಗೆ ಆಯಾಸ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ವೃತ್ತಿಪರರಿಗೆ ಸಮಯದೊಂದಿಗೆ ಹೋರಾಟದ ಪರಿಸ್ಥಿತಿ. ದೇವರಿಗೆ ಶರಣಾಗುವುದರಿಂದ ಸಮಸ್ಯೆ ಪರಿಹಾರ. ಮನೆಯಲ್ಲಿ ಸಹಕಾರದ ವಾತಾವರಣ.
ಕುಂಭ:ಶಾಂತಿ, ಸಮಾಧಾನದ ನಡೆಯಿಂದ ಎಲ್ಲರಿಗೂ ನೆಮ್ಮದಿ. ಉದ್ಯೋಗದಲ್ಲಿ ಇನ್ನಷ್ಟು ಜವಾಬ್ದಾರಿಗಳನ್ನು ಹೊರುವ ಅನಿವಾರ್ಯತೆ. ಸೇವೆಗಳಿಗಾಗಿ ಕೈಬೀಸಿ ಕರೆಯುತ್ತಿರುವ ಸಾಮಾಜಿಕ ಕ್ಷೇತ್ರ. ಸಾಹಿತ್ಯಾಸಕ್ತರಿಗೆ ಆನಂದ. ಮಹತ್ವದ ವ್ಯಕ್ತಿಯೊಬ್ಬರ ಭೇಟಿ ಸಂಭವ. ಎಲ್ಲರಿಗೂ ಸಂತೃಪ್ತಿ.
ಮೀನ: ಶನಿ ಮಹಾತ್ಮನ ಅನುಗ್ರಹದಿಂದ ದುಃಖವಿಮೋಚನೆ. ಉದ್ಯೋಗದಲ್ಲಿ ಎದುರಾದ ಎಲ್ಲ ಸವಾಲುಗಳಿಂದ ಮುಕ್ತಿ. ಸರಕಾರಿ ಕಾರ್ಯಾಲಯಗಳಲ್ಲಿ ಸುಲಭವಾಗಿ ಸ್ಪಂದನೆ. ಸೇವಾರೂಪದ ಉದ್ಯೋಗ ನಡೆಸುವವರಿಗೆ ಆದಾಯ ವೃದ್ಧಿ. ವ್ಯವಹಾರ ನಿರ್ವಹಣೆಗೆ ಸಂಗಾತಿಯುಂದ ಮತ್ತು ಮಕ್ಕಳಿಂದ ಸಂಪೂರ್ಣ ಸಹಕಾರ. ಹಿರಿಯರ ಆರೋಗ್ಯ ಉತ್ತಮ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.