![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 31, 2020, 7:40 AM IST
31-12-2020
ಮೇಷ: ಸಾಮಾನ್ಯವಾದ ದಿನವಾಗಿರುತ್ತದೆ. ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನಿಮ್ಮ ನೆಮ್ಮದಿಗೆ ಭಂಗ ಬರುವುದಿಲ್ಲ. ವಿನಾಕಾರಣ ಓಡಾಟದಿಂದ ಪ್ರಯಾಸ ಹೆಚ್ಚಾಗಲಿದೆ. ಅನಾರೋಗ್ಯದಿಂದ ಬಳಲುವವರು ವೈದ್ಯರ ಸಲಹೆ ಪಡೆಯಿರಿ.
ವೃಷಭ: ಎಲ್ಲಾ ಕಾರ್ಯಗಳಲ್ಲಿ ಸಫಲತೆಯನ್ನು ಕಾಣುವಿರಿ. ಯಶಸ್ಸು , ಗೌರವ, ಪ್ರಶಸಿ ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಪತ್ನಿ ಮಕ್ಕಳಿಂದ ಸಹಕಾರವು ಒದಗಿ ಬರುವುದು. ಕಟ್ಟಡ ಕೆಲಸದವರಿಗೆ ಸುಗ್ಗಿಯ ಕಾಲ.
ಮಿಥುನ: ಆರ್ಥಿಕ ವಿಚಾರದಲ್ಲಿ ಲಾಭಾಂಶವು ಹೆಚ್ಚಾಗಲಿದೆ. ಆದರೂ ಖರ್ಚಿನ ಬಗ್ಗೆ ಜಾಗ್ರತೆ ಮಾಡಿರಿ. ತಿಂಗಳ ಕೊನೆಯಲ್ಲಿ ಲೆಕ್ಕಾಚಾರ ಏರುಪೇರಾದೀತು. ನೀವು ಮಾಡುತ್ತಿರುವ ಉದ್ಯೋಗ, ವ್ಯವಹಾರದಲ್ಲಿ ಸಮಾಧಾನ ದೊರಕೀತು.
ಕರ್ಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮನಸ್ಸಿಗೆ ನೋವು ತರುವ ಕೆಲವು ಘಟನೆಗಳು ಕಂಡುಬಂದೀತು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರುಕುಳವು ಕಂಡು ಬಂದೀತು. ಹಿರಿಯರ ಸಲಹೆ, ಸೂಚನೆಯನ್ನು ಪಾಲಿಸಿರಿ.
ಸಿಂಹ: ಅನುಕೂಲವಾದ ಸಮಯವಿದು. ನಿಮ್ಮ ಮನಸ್ಸಿಗೆ ಸವಾಲು ತಾಳ್ಮೆ ಹಾಗೂ ಸಹನೆ ಅಗತ್ಯವಿದೆ. ಹೆಚ್ಚಿನ ಒತ್ತಡಕ್ಕೆ ಗುರಿಯಾಗುವಿರಿ. ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ವಾಹನ ಚಾಲನೆ ಮಾಡುವಾಗ ಜಾಗ್ರತೆ.
ಕನ್ಯಾ: ಹಿತಶತ್ರುಗಳು ನಿಮ್ಮ ಬೆನ್ನಿಗೆ ಇರುತ್ತಾರೆ. ಸ್ತ್ರೀ ಮೂಲಕ ಅಭಾವವು ನೀಗಲಿದೆ. ಆರ್ಥಿಕ ಸ್ಥಿತಿಯು ಪೂರಕವಾಗಿರುವುದಿಲ್ಲ. ದೂರ ಪ್ರಯಾಣವು ಕೂಡಿಬಂದೀತು. ವಿನಾ ಕಾರಣ ನಿಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾದೀತು.
ತುಲಾ: ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರಗಲಿವೆ. ಆರೋಗ್ಯ ಉತ್ತಮವಾಗಿರುವುದು. ಮನೆಯಲ್ಲಿ ಸಂಭ್ರಮ, ಸಂತಸವಿರುವುದು. ಮಿತ್ರರ ಸಹಕಾರವು ದೊರಕಲಿದೆ.
ವೃಶ್ಚಿಕ: ಎಲ್ಲಾ ಕೆಲಸಕಾರ್ಯಗಳಲ್ಲಿ ಸಫಲತೆಯನ್ನು ಕಾಣುವಿರಿ. ಯಶಸ್ಸು ದೊರಕುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ಅಪರಿಚಿತರಿಂದ ಉಪದ್ರವ ಕಂಡುಬರಲಿದೆ. ಸೋಮಾರಿತನವನ್ನು ತಳ್ಳಿ ಹಾಕಿರಿ.
ಧನು: ವ್ಯಾಪಾರಸ್ಥರು ಒಳ್ಳೆಯ ಲಾಭ ಗಳಿಸುವಿರಿ. ಆರೋಗ್ಯವು ಉತ್ತಮವಿದ್ದು ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ಸ್ತ್ರೀಯರ ಬಹುದಿನಗಳ ಬೇಡಿಕೆ ಈಡೇರಲಿದೆ.
ಮಕರ: ಒಂದಲ್ಲಾ ಒಂದು ಒತ್ತಡವು ನಿಮ್ಮನ್ನು ಆವರಿಸುವುದರಿಂದ ಮನಸ್ಸು ಅಶಾಂತಿಯೆಡೆಗೆ ಮುಖ ಮಾಡುವುದು. ಅನಾರೋಗ್ಯದಿಂದ ಬಳಲಿಕೆ ಕಂಡುಬರಲಿದೆ. ನೀವು ಪ್ರಯತ್ನಿಸಿದ ಕೆಲಸದಲ್ಲಿ ವಿಘ್ನವಿರುತ್ತದೆ.
ಕುಂಭ: ಪ್ರಯಾಣ, ಒತ್ತಡದಿಂದ ಬಳಲಿಕೆ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿಯ ಮುನ್ಸೂಚನೆಯ ತೋರಿಕೆ ಕಂಡುಬರಲಿದೆ. ಯಾವುದೇ ವಿಚಾರದಲ್ಲಿ ಮುನ್ನಡೆಯಲು ಸೂಕ್ತ ಸಮಯವಲ್ಲ.
ಮೀನ: ಅನಗತ್ಯ ಕಾರಣಕ್ಕೆ ದುಂದುವೆಚ್ಚ ಬೇಡ. ಕುಟುಂಬದಲ್ಲಿ ಅಸಹಕಾರ ಉಂಟಾಗಲಿದೆ. ಹಲವರು ನಿಮ್ಮ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯರ ಪರಿಚಯವಾಗಲಿದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.