ಈ ರಾಶಿಯವರಿಂದು ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ ಮಾಡಬೇಕಾದೀತು
Team Udayavani, Aug 12, 2021, 8:17 AM IST
12-08-2021
ಮೇಷ: ಉತ್ತಮ ಸಂತಸದಿಂದ ಕೂಡಿದ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಗುರು ಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿ ಗಳಿಂದ ಪ್ರೋತ್ಸಾಹ ಗಣ್ಯರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ .
ವೃಷಭ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ದೇವತಾ ಸ್ಥಳಗಳ ಸಂದರ್ಶನ.
ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಮನೆಯ ಕಡೆ ವಿಶೇಷ ಗಮನಹರಿಸುವಿಕೆ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ ವೃದ್ಧಿ . ಪಾಲುದಾರಿಕಾ ವಿಚಾರದಲ್ಲಿ ಆತುರತೆ ಮಾಡದೇ ತಾಳ್ಮೆ ಸಹನೆಯಿಂದ ವರ್ತಿಸಿ.
ಕರ್ಕ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣದಲ್ಲಿ ವಿಳಂಬ ಅಡಚಣೆ ತೋರೀತು. ಧನಾಗಮನಕ್ಕೆ ಕೊರತೆಯಾಗದು. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ತೋರಿದರೂ ಸ್ಥಾನ ಸುಖ ಲಭಿಸುವುದು.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ . ಗುರುಹಿರಿಯರ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಸಂತಸದ ವಾತಾವರಣ. ಅಭಿವೃದ್ಧಿಯ ಧನಾರ್ಜನೆ.
ಕನ್ಯಾ: ಆರೋಗ್ಯದಲ್ಲಿ ಸುಧರಾಣೆ. ಉದ್ಯೋಗ ವ್ಯವಹಾರದಲ್ಲಿ ಸ್ಥಿರತೆ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ಭೂಮಿ ಆಸ್ತಿ ಪತ್ರ ವ್ಯವಹಾರಾದಿಗಳಲ್ಲಿ ಜಾಗ್ರತೆಯ ನಡೆ. ಮಕ್ಕಳಿಂದ ವಿಶೇಷ ಸುಖ. ಸಾಂಸಾರಿಕ ಸುಖ ತೃಪ್ತಿದಾಯಕ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಆರೋಗ್ಯ ವೃದ್ಧಿ . ಧಾರ್ಮಿಕ ಕೆಲಸಕಾರ್ಯಗಳಿಗೆ ಪ್ರಯಾಣ. ಗೌರವದ ಧನ ಸಂಪಾದನೆ. ಗುರುಹಿರಿಯರ ಉತ್ತಮ ಮಾರ್ಗದರ್ಶನ.
ವೃಶ್ಚಿಕ: ಉತ್ತಮ ವಾಕ್ಚತುರತೆಯಿಂದ ಕೂಡಿದ ಕಾರ್ಯವೈಖರಿ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ ದಾಯಕ ಬದಲಾವಣೆ. ಅಧಿಕ ಧನಾರ್ಜನೆ. ಗಣ್ಯರ ಭೇಟಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಆಸ್ತಿ ವಿಚಾರದಲ್ಲಿ ಪ್ರಗತಿ.
ಧನು: ಆರೋಗ್ಯದಲ್ಲಿ ಸಮಾಧಾನ. ಚಿಕ್ಕ ಪ್ರಯಾಣ ಸಂಭವ. ಮಾನಸಿಕವಾಗಿ ಸಂಭ್ರಮಿಸುವ ಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ಉದ್ಯೋಗ ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ ಹಾಗೂ ಉತ್ತಮ ಬದಲಾವಣೆಯ ಅವಕಾಶ.
ಮಕರ: ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ಮೇಲಾಧಿಕಾರಿಗಳ ಗಣ್ಯರ ಮಾರ್ಗದರ್ಶನ ಸಹಾಯ ಅನುಭವವಾದೀತು. ಆರೋಗ್ಯದಲ್ಲಿ ವೃದ್ಧಿ . ಚಿಕ್ಕ ಪ್ರಯಾಣ ಸಂಭವ.
ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಅತ್ಯುತ್ತಮ ಧನಾರ್ಜನೆ. ಉತ್ತಮ ವಾಕ್ ಚತುರತೆ. ಮನೋರಂಜನೆಯಿಂದ ಕೂಡಿದ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ.
ಮೀನ: ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃಸಂತೋಷ ಜನ ಮನ್ನಣೆ. ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಗುರುಹಿರಿಯರ ಆರೋಗ್ಯ ಸುದೃಢ.
ಜಯತೀರ್ಥ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.