ಇಂದಿನ ರಾಶಿಫಲ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ
Team Udayavani, Dec 28, 2021, 8:32 AM IST
28-12-2021
ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಇತರರಲ್ಲಿ ಅನಗತ್ಯ ಸ್ಪರ್ಧೆ ಮಾಡದಿರಿ. ಅನಿರೀಕ್ಷಿತ ಧನಾಗಮ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಯಿಂದ ಮುನ್ನಡೆ ಸಂಭವಿಸೀತು. ಧಾರ್ಮಿಕ ಕಾರ್ಯಗಳ ನೇತೃತ್ವ.
ವೃಷಭ: ಉತ್ತಮ ಆರೋಗ್ಯ ಸದಾ ಸಂಚಾರಶೀಲತೆ ಬಹುಜನ ಸಂಪರ್ಕ. ಹಲವು ವಿಧದಲ್ಲಿ ಧನ ಲಾಭ. ದೂರದ ವ್ಯವಹಾರಗಳಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ಸಾಂಸಾರಿಕ ಸುಖದಲ್ಲಿ ಹೆಚ್ಚಿದ ತೃಪ್ತಿ. ಗುರುಹಿರಿಯರ ಮಾರ್ಗದರ್ಶನ.
ಮಿಥುನ: ಮಾತಾಪಿತೃಗಳಿಂದಲೂ ಹಿರಿಯರಿಂದಲೂ ಸುಖ ಸಿದ್ಧಿ. ಎಲ್ಲರಿಗೂ ಪ್ರೀತಿ ಪಾತ್ರ. ಆರೋಗ್ಯ ಉತ್ತಮ. ವಿದೇಶ ಮೂಲದಿಂದ ಧನಾಗಮ. ಸ್ಫುಟವಾದ ವಿದ್ಯೆ ಸ್ಪಷ್ಟತೆಯಿಂದ ಕೂಡಿದ ಜ್ಞಾನ ಸಂಪಾದನೆ. ಧಾರ್ಮಿಕ ಸ್ಥಳಗಳಿಗೆ ಭೇಟಿ.
ಕರ್ಕ: ದೈಹಿಕವಾಗಿಯೂ ಮಾನಸಿಕವಾಗಿಯೂ ಸುದೃಢ ಆರೋಗ್ಯ. ಉತ್ಸಾಹಶೀಲತೆ. ಭೂಮಿ ಆಸ್ತಿ ವಿಚಾರದಿಂದ ಧನ ಲಾಭ. ಧಾರ್ಮಿಕ ವಿಚಾರಗಳಿಂದಲೂ ಸರಕಾರೀ ವ್ಯವಹಾರಗಳಿಂದ ತೃಪ್ತಿ. ಹಿರಿಯರ ಆರೋಗ್ಯ ಗಮನಿಸಿ.
ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ವಾಕ್‌ಚತುರತೆ ಸರ್ವಜನರ ಮಾನ್ಯತೆ. ಆರೋಗ್ಯ ಗಮನಿಸಿ. ಜವಾಬ್ದಾರಿಯುತ ಕೆಲಸ ಕಾರ್ಯದಿಂದ ಧನಾಗಮ. ಕೆಲವೊಮ್ಮೆ ಕುಕೃತ್ಯ ಮಾಡುವ ಸಂಭವ ಎದುರಾದೀತು. ಗುರುಹಿರಿಯರ ಸಹಾಯ.
ಕನ್ಯಾ: ಸುದೃಢ ಆರೋಗ್ಯ. ಬುದ್ಧಿವಂತಿಕೆ ವೃದ್ಧಿ. ಸುಪುಷ್ಟ ಕಾಂತಿಯುತ ಶರೀರ. ಪರರಿಗೆ ಆರ್ಥಿಕ ಸಹಾಯ ಮಾಡುವಾಗ ಎಚ್ಚರ ವಹಿಸುವುದರಿಂದ ಅನಾಹುತ ತಪ್ಪೀತು. ವ್ಯವಹಾರಗಳಲ್ಲಿ ಮಾನ್ಯತೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ.
ತುಲಾ: ಪರರ ಸಹಾಯದಿಂದ ಬಹು ಲಾಭ ಸಂಭವ. ದೂರದ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ. ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ವೃಶ್ಚಿಕ: ಆರೋಗ್ಯ ಉತ್ತಮ. ನಿರೀಕ್ಷಿತ ಸ್ಥಾನ ಸುಖ. ಎಲ್ಲಾ ವಿಚಾರಗಳಲ್ಲಿ ಲಾಭದ ನಿರೀಕ್ಷೆ. ಪ್ರಸಿದ್ಧಿಗೆ ಪರಿಶ್ರಮ. ಆಸ್ತಿ ವಿಚಾರಗಳಿಂದ ಅನಿರೀಕ್ಷಿತ ಧನಾಗಮ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಂದ ಸಂತೋಷ. ಗುರುಹಿರಿಯರಿಂದ ಸಹಕಾರ.
ಧನು: ಅಭಿವೃದ್ಧಿ ಆರೋಗ್ಯ. ಬುದ್ಧಿವಂತಿಕೆ ತಿಳುವಳಿಕೆಯಿಂದ ಕೂಡಿದ ಸ್ಥಿರ ಬುದ್ಧಿ ಪ್ರದರ್ಶನ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಚರ್ಚೆಯಿಂದ ಧನ ಲಾಭ. ಉದ್ಯೋಗ ವ್ಯವಹಾರಗಳಿಂದ ಸಂಪತ್ತು ಸಂಗ್ರಹ. ಸಣ್ಣ ಪ್ರಯಾಣ.
ಮಕರ: ಶಾರೀರಿಕ ಸುಖ ವೃದ್ಧಿ. ಸುಂದರತೆಗೆ ಪ್ರಾದಾನ್ಯತೆ. ಚಂಚಲ ಮನಸ್ಥಿತಿ. ಗಣ್ಯ ವ್ಯಕ್ತಿಗಳ ಸಂಪರ್ಕ. ಧನ ವೃದ್ಧಿ. ಏಕಾಗ್ರತೆಯಿಂದ ಕೂಡಿದ ಉದ್ಯೋಗ ವ್ಯವಹಾರ. ಧಾರ್ಮಿಕ ಕಾರ್ಯಗಳಿಗೆ ಅಡಚಣೆ.
ಕುಂಭ: ಪರಿಶ್ರಮದಿಂದ ಆರೋಗ್ಯ ಸುದೃಢ. ದೀರ್ಘ ಪ್ರಯಾಣ. ತಾಳ್ಮೆ ಸಹನೆ ಅಗತ್ಯ. ಉದ್ಯೋಗದಲ್ಲಿ ಅಕಸ್ಮಾತ್ ಧನ ವೃದ್ಧಿ. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ಪ್ರಯಾಣ ಸಂಭವ. ದೇವತಾ ಮಂತ್ರ ಅನುಷ್ಠಾನದಿಂದ ನೆಮ್ಮದಿ.
ಮೀನ: ಸರಿಯಾದ ಆಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೂರ ಪ್ರವಾಸದಿಂದ ವ್ಯರ್ಥ ಧನವ್ಯಯ ಸಂಭವ. ಸತ್ಕರ್ಮದಿಂದ ಜನಮನ್ನಣೆಯಿಂದ ಗೌರವದಿಂದ ಕೂಡಿದ ಧನಾಗಮ ಪ್ರಾಪ್ತಿ. ಅವಿವಾಹಿತರಿಗೆ ಕಂಕಣ ಭಾಗ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.