Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ದೀರ್ಘಕಾಲೀನ ಹೂಡಿಕೆಗಳಲ್ಲಿ ಆಸಕ್ತಿ
Team Udayavani, Sep 11, 2023, 7:20 AM IST
ಮೇಷ:ಶ್ರೀ ಮಹಾಗಣಪತಿಯ ಅನುಗ್ರಹದಿಂದ ಯಶಸ್ಸಿನ ಕಡೆಗೆ ಹೆಜ್ಜೆಯಿಡುತ್ತೀರಿ. ಉದ್ಯೋಗಸ್ಥರಿಗೆ ಹೆಚ್ಚಿನ ಹೊಣೆಗಾರಿಕೆ. ಗೃಹಾಲಂಕಾರ ಸಾಮಗ್ರಿ ಮಾರಾಟಗಾರರಿಗೆ ಲಾಭ. ಕೃಷಿಕರಿಗೆ, ಶ್ರಮಜೀವಿಗಳಿಗೆ ತಕ್ಕ ಪ್ರತಿಫಲ. ಸಂಸಾರ ಸುಖದಲ್ಲಿ ತೃಪ್ತಿ.
ವೃಷಭ: ಮನಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಆತುರವಿಲ್ಲದೆ ಮುಂದುವರಿದರೆ ಯಶಸ್ಸು ಖಚಿತ. ಹಿರಿಯರ ಆರೋಗ್ಯ, ಆವಶ್ಯಕತೆಗಳನ್ನು ಗಮನಿಸುತ್ತಿರಿ.ಹೊಸ ವಾಹನ ಖರೀದಿಗೆ ಯೋಚನೆ. ಮಕ್ಕಳ ಯೋಗಕ್ಷೇಮ ಗಮನಿಸಿ.
ಮಿಥುನ: ಧಾರ್ಮಿಕ ಚಿಂತನೆ, ದೇವತಾ ರ್ಚನೆಯಲ್ಲಿ ಆಸಕ್ತಿ. ಉದ್ಯೋಗಸ್ಥರಿಗೆ ಹಿರಿಯ ಸಹೋದ್ಯೋಗಿಗಳ ಮಾರ್ಗದರ್ಶನದಿಂದ ವೃತ್ತಿ ಪ್ರಾವೀಣ್ಯ ಪ್ರಾಪ್ತಿ. ವೈದ್ಯರ ಭೇಟಿ ಸಂಭವ. ಗೃಹಿಣಿಯರಿಂದ ಆದಾಯ ಗಳಿಕೆ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ.
ಕರ್ಕಾಟಕ: ಸಣ್ಣಪುಟ್ಟ ಆರೋಗ್ಯ ಸಮಸ್ಯೆ. ಅನಿರೀಕ್ಷಿತ ಧನಾಗಮ. ಗುರು ಹಿರಿಯರಿಂದ ಸಕಾಲಿಕ ಮಾರ್ಗದರ್ಶನ. ಸಂಗಾತಿಯಿಂದ ಉತ್ತಮ ಸಹಕಾರ. ಹೂವು,ತರಕಾರಿ ಬೆಳೆಗಾರರಿಗೆ ಲಾಭ. ಉತ್ತರದ ಕಡೆಯಿಂದ ವ್ಯವಹಾರ ವಿಸ್ತರಣೆ ಪ್ರಸ್ತಾವ.
ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು. ದೀರ್ಘಕಾಲೀನ ಹೂಡಿಕೆಗಳಲ್ಲಿ ಆಸಕ್ತಿ. ಮನೆಯಲ್ಲಿ ಆರೋಗ್ಯ ಉತ್ತಮ, ಶುಭ ಕಾರ್ಯಕ್ಕಾಗಿ ಸಡಗರದ ವಾತಾವರಣ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ.
ಕನ್ಯಾ: ಗುರುಹಿರಿಯರಿಂದ ಒಳ್ಳೆಯ ಮಾರ್ಗದರ್ಶನ. ದೈವಾನುಗ್ರಹಕ್ಕಾಗಿ ವಿಶೇಷ ಪ್ರಯತ್ನ. ಕಾರ್ಯ ನಿರ್ವಿಘ್ನ. ಆಪ್ತ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನಿರ್ಮಾಣ ಸಾಮಗ್ರಿ ವಿತರಕರಿಗೆ ಅನುಕೂಲದ ವಾತಾವರಣ. ಮನೆಯಲ್ಲಿ ನೆಮ್ಮದಿ.
ತುಲಾ: ಮನಸ್ಸಿನಸಮತೋಲನ ಕಾಯ್ದುಕೊಳ್ಳಿರಿ. ದೇವತಾ ಸನ್ನಿಧಿ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಅಭಿವೃದ್ಧಿ. ಹಿತಶತ್ರುಗಳ ಕುರಿತು ಎಚ್ಚರಿಕೆಯಲ್ಲಿರಿ. ಹಿರಿಯರನ್ನು ಅರಿತು ಮುನ್ನಡೆಯಿರಿ. ಉದ್ಯೋಗಸ್ಥರಿಗೆ ದಿನದ ಕೊನೆಯಲ್ಲಿ ಶುಭವಾರ್ತೆ.
ವೃಶ್ಚಿಕ: ಸಮಾಧಾನದಿಂದ ಮುನ್ನಡೆಯಿರಿ. ಉತ್ತರದಿಂದ ಬರುವ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರದಿಂದ ಮುನ್ನಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಕಿರಿಕಿರಿಯಾದರೂ ಪ್ರತಿಫಲ ಪ್ರಾಪ್ತಿ.
ಧನು: ಹೊಂದಾಣಿಕೆಯ ಮನೋಭಾವದಲ್ಲಿ ಮುಂದುವರಿಯುವ ನಿಮಗೆ ಸವಾಲುಗಳನ್ನು ನಿಭಾಯಿಸಲು ಸುಲಭ. ದೀರ್ಘಕಾಲದಿಂದ ನಿರೀಕ್ಷಿ ಸಲಾಗಿದ್ದ ಲಾಭ ಕೈಸೇರಿ ಮನಸ್ಸು ನಿರಾಳ. ಸಹಾಯ ಕರಿಂದ ಸಹಕಾರ.ಹಿರಿಯರ ಆರೋಗ್ಯ ಸಮಾಧಾನಕರ.
ಮಕರ: ಅಪೇಕ್ಷಿತ ಕಾರ್ಯಗಳೆಲ್ಲವೂ ಸುಗಮ. ಸನ್ನಿಧಿಗೆ ಭೇಟಿಯಿತ್ತ ಬಳಿಕ ನಿಶ್ಚಿಂತೆ. ಉದ್ಯೋಗ ಕ್ಷೇತ್ರದ ಕಿರಿಕಿರಿಗಳು ತೊಲಗಿ ಮನಸ್ಸಿಗೆ ಶಾಂತಿ. ಆರ್ಥಿಕ ಸಂಸ್ಥೆಗಳ ನಿರ್ವಾಹಕರಿಗೆ ಹೊಸ ಜವಾಬ್ದಾರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ.
ಕುಂಭ: ಸತ್ಕಾರ್ಯಗಳಿಗೆ ಸಕ್ರಿಯವಾಗಿ ನೆರವಾಗುವ ಅವಕಾಶ. ಬದುಕಿನಲ್ಲಿ ಆಶಾಭಾವನೆಯಿಂದ ಮುನ್ನಡೆಯಿರಿ.ಹತ್ತಿರದ ಬಂಧು ವರ್ಗದಲ್ಲಿ ಶುಭಕಾರ್ಯ. ಪ್ರಕೃತಿ ಸೌಂದರ್ಯದ ತಾಣವೊಂದಕ್ಕೆ ಭೇಟಿ. ಆರೋಗ್ಯ ಉತ್ತಮ.
ಮೀನ: ಗುರು ದೇವತಾನುಗ್ರಹದಿಂದ ಕಾರ್ಯಗಳು ನಿರ್ವಿಘ್ನವಾಗಿ ಸಾಗಲಿವೆ. ಹೊಸ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿರಿ. ವಾಹನಾದಿ ವ್ಯವಹಾರಗಳನ್ನು ನಡೆಸುವವರಿಗೆ ಸಂಧಿಕಾಲ. ಮುದ್ರಣ ವ್ಯವಹಾರಸ್ಥರಿಗೆ ಶುಭ.ಮನೆಯಲ್ಲಿ ನಿಶ್ಚಿಂತೆಯ ವಾತಾವರಣ. ಒಟ್ಟಿನಲ್ಲಿ ಶುಭ ಫಲಗಳ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.