Daily Horoscope: ಅಪಾರ್ಥಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿ, ಉದ್ಯೋಗಾವಕಾಶ
Team Udayavani, Sep 12, 2024, 7:29 AM IST
ಮೇಷ: ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸುವುದನ್ನು ಕಲಿಯಿರಿ. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ಒಂದು ಬಗೆಯ ಕಳವಳ ಸಣ್ಣ ಉದ್ಯಮಿಗಳ ಸಮಸ್ಯೆಗಳು ಪರಿಹಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು.
ವೃಷಭ: ದಿನಕಳೆದಂತೆ ವ್ಯತ್ಯಾಸವಾಗುವ ಪರಿಸ್ಥಿತಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.
ಮಿಥುನ: ಇಚ್ಛಾಶಕ್ತಿ ಬೆಳವಣಿಗೆಯಿಂದ ಅನುಕೂಲ ಪರಿಸ್ಥಿತಿ ಅಪೇಕ್ಷೆ ಪಟ್ಟವರಿಗೆ ಮಾರ್ಗದರ್ಶನ. ಸರಕಾರಿ ನೌಕರರಿಗೆ ಕೊಂಚ ಆತಂಕ. ಅಪಾರ್ಥಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.
ಕರ್ಕಾಟಕ: ಪ್ರಾಮಾಣಿಕತೆ, ದಕ್ಷತೆಗಳೇ ಯಶಸ್ಸಿನ ಸಾಧನಗಳು. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ. ನಿಸ್ವಾರ್ಥಿ ಜನಸೇವಕರ ಹೆಸರು ಕೆಡಿಸಲು ಹತಾಶ ಪ್ರಯತ್ನ.
ಸಿಂಹ: ಮೃಗರಾಜನ ಗುಣಗಳನ್ನು ಆಗಾಗ ಪ್ರದರ್ಶಿಸುವಿರಿ. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ಇಲ್ಲದ ಪದೋನ್ನತಿ. ಉದ್ಯಮಕ್ಕೆ ಹೊಸರೂಪದೊಂದಿಗೆ ಕಾಯಕಲ್ಪ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನೆ.
ಕನ್ಯಾ: ಸ್ಥೈರ್ಯ ಕಾಯ್ದುಕೊಂಡರೆ ಸರ್ವತ್ರ ಯಶಸ್ಸು. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ ವಿಸ್ತರಣೆ. ಹಳೆಯ ವಿದ್ಯಾಲಯ ಅಭಿವೃದ್ಧಿಯ ನೇತೃತ್ವ. ನವ ವಿವಾಹಿತರಿಗೆ ಸಂತಾನ ಭಾಗ್ಯ.
ತುಲಾ: ಹಿತಶತ್ರುಗಳ ಕಾಟದ ನಡುವೆ ಕಾರ್ಯ ಸಾಧನೆ ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ವಧೂವರಾನ್ವೇಷಣೆಯಲ್ಲಿ ಪ್ರಗತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ದೈವಬಲ, ಧನಬಲದ ಜತೆಗೆ ಮನೋಬಲವೂ ವೃದ್ಧಿ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದ ಕ್ಷೇಮಕ್ಕಾಗಿ ದೇವತಾರಾಧನೆ.
ಧನು: ಆತ್ಮವಿಶ್ವಾಸದೊಂದಿಗೆ ದೈವವಿಶ್ವಾಸವನ್ನೂ ಬೆಳೆಸಿಕೊಳ್ಳುವ ಪ್ರಯತ್ನ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ಸವಲತ್ತುಗಳು ಲಭ್ಯ. ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ.
ಮಕರ: ಕಷ್ಟ,ಸುಖ,ಇವೆರಡರ ಅನುಭವವೂ ಆತ್ಮವಿಕಾಸದ ಸಾಧನ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ಹಿತಶತ್ರುಗಳ ಮಸಲತ್ತಿಗೆ ಸೋಲು. ಕರಕುಶಲ ಸಾಮಗ್ರಿ ಉದ್ಯಮಿಗಳಿಗೆ ಅನುಕೂಲದ ವಾತಾವರಣ.
ಕುಂಭ: ನಿರಂತರ ಶ್ರಮ, ದೈವಾನುಗ್ರಹದಿಂದ ಅನುಕೂಲ. ಕೆಲಸ, ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಕಲೋಪಾಸನೆಯಲ್ಲಿ ಆಸಕ್ತರಿಗೆ ಹರ್ಷ.
ಮೀನ: ವಾತಾವರಣ ಮಧ್ಯಮವಾಗಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಒಡನಾಡಿಗಳಿಂದ ಅನುಕೂಲ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಗೃಹೋಪಯೋಗಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.