Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Team Udayavani, Sep 14, 2024, 7:19 AM IST
ಮೇಷ: ಕೆಲವರಿಗೆ ನಿಯೋಜಿತ ಕೆಲಸಗಳು ಮುಗಿದು ನೆಮ್ಮದಿ. ಉದ್ಯಮದಲ್ಲಿ ಪೈಪೋಟಿ ದೂರವಾಗುವ ಸಾಧ್ಯತೆ. ನಾಳೆಯ ದಿನಚರಿಯ ಚಿಂತನೆ. ಗೃಹಿಣಿ ಯವರ ಆರೋಗ್ಯದ ಕಡೆಗೆ ಗಮನ ಇರಲಿ. ಮನೆಗೆ ದೂರದ ಅತಿಥಿಗಳ ಆಗಮನ.
ವೃಷಭ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಬಿಡುವು ಇರಲಾರದು. ದೂರದಲ್ಲಿರುವ ನೆಂಟರ ಆಗಮನ ಬೌದ್ಧಿಕ ಕೆಲಸ ಮಾಡುವವರು ಆರೋಗ್ಯದ ಬಗೆಗೆ ಎಚ್ಚರ. ದೇವತಾ ಸಾನ್ನಿಧ್ಯಕ್ಕೆ ಭೇಟಿ.
ಮಿಥುನ: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರು ಗಳಿಂದ ತೊಂದರೆ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಅನುರಾಗ ವೃದ್ಧಿ.
ಕರ್ಕಾಟಕ: ಸಹಚರರ ನಡುವೆ ಗೌರವದ ಸ್ಥಾನಮಾನ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫಲ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾ ದೇವಿ ವ್ಯವಹಾರದಲ್ಲಿ ನಷ್ಟ.
ಸಿಂಹ: ಅರ್ಹತೆಗೆ ಸರಿಯಾದ ಪದೋನ್ನತಿ. ಹಿತೈಷಿಗಳ ಸಲಹೆ ಪಾಲನೆಯಿಂದ ಅನುಕೂಲ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ ಖರೀದಿಗೆ ಸಿದ್ಧತೆ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ.
ಕನ್ಯಾ: ಕಳೆದು ಹೋಗಿದ್ದ ಶಾಂತಿ, ಸಮಾಧಾನ ಮತ್ತೆ ಪ್ರಾಪ್ತಿ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ.
ತುಲಾ: ಇಲ್ಲದ ಸಮಸ್ಯೆಗಳ ಕುರಿತು ಚಿಂತೆ ಬೇಡ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲ ಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ.ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.
ವೃಶ್ಚಿಕ: ಕಲ್ಪಿತ ಆಪತ್ತುಗಳ ಕಾಟದಿಂದ ಮುಕ್ತಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.
ಧನು: ಸದಾ ಲಭ್ಯವಿರುವ ಆಪ್ತರ ಸಹಾಯ ಹಸ್ತ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ.
ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಭೂವ್ಯವಹಾರಸ್ಥರಿಗೆ ಮಧ್ಯಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ತಾಯಿಯ ಕಡೆಯ ನೆಂಟರಿಂದ ಶುಭ.
ಕುಂಭ: ಸತ್ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಅವಕಾಶ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಹಳೆಯ ಸಹಪಾಠಿಯ ಆಗಮನ.
ಮೀನ: ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಯ ಕಡೆಯ ಹಿರಿಯ ಬಂಧು ಆಗಮನ. ವ್ಯವಹಾರ ಸಂಬಂಧ ರಾಜಕಾರಣಿಯ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜ.26-30: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.