Daily Horoscope: ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರಿ
Team Udayavani, Sep 17, 2023, 7:26 AM IST
ಮೇಷ: ಏಕಕಾಲದಲ್ಲಿ ಅನೇಕ ಬಗೆಯ ಕಾರ್ಯಗಳ ಒತ್ತಡ. ಉದ್ಯೋಗಸ್ಥರ ಮುನ್ನಡೆಗೆ ಯಾವುದೇ ಅಡ್ಡಿಯಿಲ್ಲ. ಸ್ವಂತ ವ್ಯವಹಾರಸ್ಥರಿಗೆ ಗ್ರಾಹಕರ ಅಪೇಕ್ಷೆಗಳ ಈಡೇರಿಕೆಯ ಸಮಸ್ಯೆ. ಆಪ್ತರಿಂದ ಅಪೇಕ್ಷಿತ ನೆರವು ವಿಳಂಬ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ.
ವೃಷಭ: ಉದ್ಯೋಗಸ್ಥರಿಗೆ ನೆಮ್ಮದಿಯ ದಿನ. ವ್ಯವಹಾರ ಕ್ಷೇತ್ರದಲ್ಲಿ ಕೊಂಚ ಕಿರಿಕಿರಿ ಯಾದರೂ ಆದಾಯಕ್ಕೆ ಕೊರತೆಯಾಗದು. ಹೊಸ ಗ್ರಾಹಕರು ಸಂಪರ್ಕಕ್ಕೆ ಬರುವ ನಿರೀಕ್ಷೆಯಿದೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ.
ಮಿಥುನ: ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರಿ. ಗುರುಕೃಪೆ ಹಾಗೂ ದೈವಾನುಗ್ರಹ ಉತ್ತಮ. ಉದ್ಯೋಗದಲ್ಲಿ ಆದಾಯ ಸ್ಥಿರ. ವ್ಯವಹಾರದಲ್ಲಿ ಪುಟ್ಟ ಏರುಪೇರುಗಳಾಗಬಹುದಾದರೂ ಆತಂಕಗೊಳ್ಳಬೇಕಾದ ಪ್ರಮೇಯವಿಲ್ಲ.
ಕರ್ಕಾಟಕ: ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಉದ್ಯೋಗಸ್ಥರಿಗೆ ನೆಮ್ಮದಿಯ ದಿನ. ವ್ಯವಹಾರಸ್ಥರ ಪ್ರಗತಿ ನಿಧಾನವಾದರೂ ಸ್ಥಿರವಾದ ಆದಾಯಕ್ಕೆ ಕೊರತೆಯಾಗದು. ವಿವಾಹ ಮಾತುಕತೆ ಮುನ್ನಡೆ. ಸರಕಾರಿ ನೌಕರರ ಉದ್ಯೋಗ ಸ್ಥಿತಿಯಲ್ಲಿ ಏರುಪೇರು.
ಸಿಂಹ: ಹಿರಿಯರು ತಮ್ಮ ಆರೋಗ್ಯದ ಕಡೆಗೆ ತಾವೇ ಗಮನ ಹರಿಸುವುದು ಅಗತ್ಯ. ನಿತ್ಯದ ಜಂಜಾಟಗಳಿಗೆ ಸ್ವಲ್ಪ ವಿರಾಮ ಸಿಕ್ಕಿದಂತೆ ಅನಿಸಿದರೂ ಕ್ರಿಯೆಯಲ್ಲಿರುವುದು ಅನಿವಾರ್ಯ. ದೂರದ ಆಪ್ತರಿಗೆ ಸಹಾಯ ಮಾಡುವ ಅವಕಾಶ.
ಕನ್ಯಾ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿ. ಸ್ವಯಂ ಉದ್ಯೋಗಿಗಳಿಗೆ ಮಂದಗತಿಯ ಪ್ರಗತಿ. ರಾಜಕೀಯ ರಂಗಕ್ಕೆ ಪ್ರವೇಶಿಸಲು ಆಸಕ್ತಿ. ಆರ್ಥಿಕ ಮುಗ್ಗಟ್ಟಿಗೆ ತಾತ್ಕಾಲಿಕ ಪರಿಹಾರ. ತಪ್ಪು ಸಲಹೆ ನೀಡುವವರ ಬಗ್ಗೆ ಎಚ್ಚರ. ದೀರ್ಘ ಕಾಲದಿಂದ ಅಸ್ವಸ್ಥರಾಗಿರುವವರ ಚೇತರಿಕೆ.
ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಸ್ವಾವಲಂಬನೆ ಸಾಧಿಸುವ ಗುರಿ ಗಟ್ಟಿಯಾಗಿದ್ದರೆ ಯಶಸ್ಸು ಖಂಡಿತ. ಅನಿರೀಕ್ಷಿತ ಧನಪ್ರಾಪ್ತಿಯ ಯೋಗವಿದೆ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ಕಟ್ಟಡ ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ಆರೋಗ್ಯ ಸುಧಾರಣೆ. ಹೊಸ ಕಾರ್ಯಕ್ಷೇತ್ರದ ಅನ್ವೇಷಣೆಯಲ್ಲಿ ಯಶಸ್ಸು. ದೂರದ ಬಂಧುಗಳ ಅನಿರೀಕ್ಷಿತ ಆಗಮನ. ನೂತನ ವಸ್ತ್ರ, ಆಭರಣ ಖರೀದಿಯ ಸಂಭ್ರಮ. ಬಂಧು ವರ್ಗದಲ್ಲಿ ಶುಭಕಾರ್ಯದ ತಯಾರಿ. ಮನೆಮಂದಿಯ ಕ್ಷೇಮಚಿಂತನೆ.
ಧನು: ಕಾಲೆಳೆಯಲು ಕಾಯುತ್ತಿರುವ ಶಕ್ತಿಗಳ ಬಗ್ಗೆ ಎಚ್ಚರ. ಜಾಣ್ಮೆ, ತಾಳ್ಮೆಗಳಿಂದ ವ್ಯವಹರಿಸಿದರೆ ಯಶಸ್ಸು ಖಂಡಿತ. ಹೊಸ ಪಾಲುದಾರಿಕೆ ವ್ಯವಹಾರಗಳಲ್ಲಿ ಆಸಕ್ತಿ ತೋರದಿರಿ. ಸಂಗೀತ ಶ್ರವಣದ ಮೂಲಕ ಶಾಂತಿಯನ್ನು ಅನುಭವಿಸಿರಿ.
ಮಕರ:ಅಪೇಕ್ಷಿತ ಕಾರ್ಯ ನಿಧಾನವಾದರೂ ಯಶಸ್ಸು ಖಂಡಿತ. ಉದ್ಯೋಗ ಕ್ಷೇತ್ರ ದಲ್ಲಿ ಕಾರ್ಯದ ಒತ್ತಡ. ಸಹೋದ್ಯೋಗಿಗಳಿಂದ ಸಹ ಕಾರ.ನಿಗದಿತ ಸಮಯದಲ್ಲಿ ನಿರೀಕ್ಷಿತ ಗುರಿ ಮುಟ್ಟುವ ತರಾತುರಿ. ಭರವಸೆಯ ಸಹಾಯ ಬರುವುದರಲ್ಲಿ ವಿಳಂಬ.
ಕುಂಭ: ಸದಾ ಚಟುವಟಿಕೆಯಲ್ಲಿರುವವರನ್ನು ಕೈಬೀಸಿ ಕರೆಯುವ ಅವಕಾಶಗಳ ಸರಮಾಲೆ. ನಿಯಮ ಪಾಲನೆಯ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಿ. ನೀವು ಆರಾಧಿಸುವ ದೇವರ ಕೃಪೆಯಿಂದ ದೀರ್ಘಕಾಲದ ಸಮಸ್ಯೆಯೊಂದರಿಂದ ಮುಕ್ತಿ.
ಮೀನ: ಬೆಟ್ಟದಂತೆ ಭಾಸವಾಗುವ ಸಮಸ್ಯೆಗಳು ಆಶ್ಚರ್ಯವಾಗುವಂತೆ ಮಾಯವಾಗುತ್ತವೆ. ಅಚಲ ನಿಷ್ಠೆಯ ಧ್ಯಾನದಿಂದ ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ತಾತ್ಕಾಲಿಕ ವಿರಾಮ. ಸ್ವಂತ ವ್ಯವಹಾರ ನಡೆಸುತ್ತಿರುವವರಿಗೆ ಮುಂದಿನ ಕಾರ್ಯದ ಪೂರ್ವಸಿದ್ಧತೆಗಳ ಚಿಂತೆ. ಸಂಸಾರದಲ್ಲಿ ನೆಮ್ಮದಿ ಹಿರಿಯರ ಆರೋಗ್ಯ ಸ್ಥಿರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.