![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 18, 2023, 7:29 AM IST
ಮೇಷ: ವಿರಾಮದಂತೆ ಅನಿಸಿದರೂ ಹಲವು ಬಗೆಯ ಚಟುವಟಿಕೆಗಳ ದಿನ. ವ್ಯವಹಾರ ಕ್ಷೇತ್ರದ ಒತ್ತಡಗಳಿಂದ ಹೊರಬರಲಾರದ ಪರಿಸ್ಥಿತಿ. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನೋಲ್ಲಾಸ.
ವೃಷಭ: ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸಕ್ರಿಯ ರಾಗಿರುವವರಿಗೆ ಒಂದು ಕಡೆಯಿಂದ ಲಾಭ. ಕುಟುಂಬದ ಸದಸ್ಯರ ಆರೋಗ್ಯ ಪರಿಸ್ಥಿತಿ ಸಮಾಧಾನಕರ. ವ್ಯವಹಾರ ಕ್ಷೇತ್ರ ವಿಸ್ತರಣೆಯಲ್ಲಿ ತೀವ್ರ ಆಸಕ್ತಿ. ಮನೆಯಲ್ಲಿ ಹಬ್ಬದ ವಾತಾವರಣದ ನಡುವೆ ವಿವಾಹ ಮಾತುಕತೆ.
ಮಿಥುನ: ಸಾಕಷ್ಟು ಪೂರ್ವಸಿದ್ಧತೆಯಿಲ್ಲದೆ ಕಾರ್ಯರಂಗಕ್ಕೆ ಧುಮುಕದಿರಿ. ದೇವ ಕಾರ್ಯದಲ್ಲಿ ಮನಸ್ಸು ತಲ್ಲೀನ. ಉದ್ಯೋಗಸ್ಥರಿಗೆ ಬಾಕಿಯುಳಿದಿರುವ ಕಾರ್ಯಗಳನ್ನು ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ಹೊಸ ಸವಾಲುಗಳು ಎದುರು.
ಕರ್ಕಾಟಕ: ಹಿರಿಯರ, ಮಕ್ಕಳ ಆರೋಗ್ಯದ ಮೇಲೆ ವಾತಾವರಣದ ವೈಪರೀತ್ಯದ ಪರಿಣಾಮ. ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ.ಉದ್ಯೋಗ ಸ್ಥರಿಗೆ ತಾತ್ಕಾಲಿಕ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಗೆ ಪ್ರಾಧಾನ್ಯವಿರಲಿ.
ಸಿಂಹ: ಮನೆಯಲ್ಲಿ ಹಬ್ಬದ ವಾತಾವರಣದ ನಡುವೆಯೂ ವ್ಯವಹಾರ ಸುಧಾರಣೆ ಮತ್ತು ಕಾರ್ಯರಂಗ ವಿಸ್ತರಣೆಯ ಚಿಂತೆ. ನೂತನ ಗೃಹ ನಿರ್ಮಾಣದ ಯೋಜನೆ. ಕಟ್ಟಡ ನಿರ್ಮಾಪಕರಿಗೆ ಕೆಲಸದ ಒತ್ತಡ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ.
ಕನ್ಯಾ: ಅಪಾತ್ರ ದಾನ ಮಾಡದಿರಿ.ದೇಹಾರೋಗ್ಯ ಉತ್ತಮ. ದೈವಾನುಗ್ರಹ ಪ್ರಾಪ್ತಿಗೆ ವಿಶೇಷ ಪ್ರಯತ್ನದಲ್ಲಿ ನಿರತರಾಗುವಿರಿ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಸುದ್ದಿ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ.
ತುಲಾ: ಡೋಲಾಯಮಾನವಾಗಿರುವ ಮನಸ್ಸನ್ನು ಸ್ಥಿರ ಮಾಡಿಕೊಂಡರೆ ಮುಂದಿನ ಮಾರ್ಗ ಗೋಚರ. ದೇಹಾರೋಗ್ಯ ಸಮಾಧಾನಕರ. ಪಶ್ಚಿಮ ದಿಕ್ಕಿನಲ್ಲಿರುವ ಬಂಧುವಿನಿಂದ ಭರವಸೆ ತುಂಬುವ ಮಾತುಗಳ ಮೂಲಕ ಮಾರ್ಗದರ್ಶನ. ಮಕ್ಕಳ ಭವಿಷ್ಯ ಭದ್ರವೆಂಬ ಭರವಸೆ ಇರಲಿ.
ವೃಶ್ಚಿಕ: ವೈಭವದ ತುತ್ತತುದಿಗೆ ಏರದಿದ್ದರೂ ಸುಖಜೀವನಕ್ಕೆ ಕೊರತೆಯಿಲ್ಲ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಕೊಂಚ ಏರುಪೇರು. ವೈದ್ಯರ ಮೂಲಕ ಸುಲಭ ಪರಿಹಾರ.
ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನ ರಾಗುವಿರಿ. ಮಕ್ಕಳ ಮದುವೆಯ ಮಾತುಕತೆ. ದೂರದ ನೆಂಟರ ಆಗಮನ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ ನೂತನ ವಾಹನ ಖರೀದಿಯ ವಿಷಯದಲ್ಲಿ ಸಮಾಲೋಚನೆ.
ಮಕರ: ತಾಳ್ಮೆ, ಜಾಣ್ಮೆಗಳೇ ನಿಮ್ಮಯಶಸ್ಸಿನ ಪ್ರಮುಖ ಸಾಧನಗಳು ಎಂಬುದನ್ನು ಯಾ ವಾಗಲೂ ನೆಮಪಿನಲ್ಲಿಟ್ಟುಕೊಳ್ಳಿ. ಕಾರ್ಯಕೌಶಲಕ್ಕೆ ಮೇಲಧಿಕಾರಿಗಳ ಹರ್ಷ ಹಾಗೂ ಮೆಚ್ಚುಗೆ ಪ್ರಕಟ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಥ ಸಿದ್ಧಿ.
ಕುಂಭ: ಧಾರ್ಮಿಕ ಚಿಂತನೆ ಯೊಂದಿಗೆ ಜನಸೇವೆಯಲ್ಲಿ ಆಸಕ್ತಿ. ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಪಾತ್ರ. ಸಮಾಜದಲ್ಲಿ ಗೌರವ ಪ್ರಾಪ್ತಿ.ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ.
ಮೀನ: ಶುಭಫಲಗಳ ದಿನ. ಕರ್ಮಕಾರಕನಾದ ಶನಿಯು ಸತ್ಕರ್ಮಗಳಿಗೆ ಪ್ರೇರಣೆ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ. ವಾಹನಾದಿ ವ್ಯವಹಾರಗಳನ್ನು ನಡೆಸುವವರಿಗೆ ಲಾಭ ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಶಿವ, ವಿಷ್ಣು, ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ..
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.