Daily Horoscope: ಹೊಸ ತಿರುವು ತೆಗೆದುಕೊಂಡ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನ
Team Udayavani, Sep 1, 2023, 7:24 AM IST
ಮೇಷ: ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಶ್ರೇಣಿ ಪರಿಷ್ಕರಣೆ ಸಂಭವ. ನಿಮ್ಮ ಕಾರ್ಯಕ್ಷಮತೆಗೆ ಸಹೋದ್ಯೋಗಿಗಳ ಮೆಚ್ಚುಗೆ.
ವೃಷಭ: ಅವಕಾಶ ತಪ್ಪಿ ಹೋಗುವುದೆಂದು ಅವಸರ ಪಡಬೇಡಿ. ಕೆಲಸದಲ್ಲಿ ಪರಿ ಪೂರ್ಣ ಸಾಧನೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗುವಿರಿ. ಮನೆಯಲ್ಲಿ ಉತ್ಸಾಹದ ವಾತಾವರಣ.ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ.
ಮಿಥುನ: ನಿರೀಕ್ಷಿತ ಸಹಾಯ ಕೊನೆಗೂ ಕೈಸೇರಿ ಸಂತೃಪ್ತಿಯ ಅನುಭವ. ಹೊಸ ತಿರುವು ತೆಗೆದುಕೊಂಡ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನ. ಹೂಡಿಕೆ ವ್ಯವಹಾರದಲ್ಲಿ ಸಮಾಧಾನಕರ ಪ್ರಗತಿ. ದೇವತಾ ಕಾರ್ಯಕ್ಕೆ ಧನ ವಿನಿಯೋಗ.
ಕರ್ಕಾಟಕ: ಪ್ರಯತ್ನಿಸಿರಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿಯನ್ನು ಕಾಣುವಿರಿ. ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರ ಸಮಸ್ಯೆ ಪರಿಹಾರ. ಬಂಧುವರ್ಗದ ಸಹಾಯ ಲಭ್ಯ. ಅಲ್ಪ$ಕಾಲದ ಹೂಡಿಕೆಯನ್ನು ಮಾಡಬೇಡಿ.
ಸಿಂಹ: ಕಾರ್ಯದಲ್ಲಿ ಇದುವರೆಗಿನ ಪ್ರಗತಿಯನ್ನು ಅವಲೋಕಿಸಿ ಮುಂದಡಿ ಯಿಡಿರಿ. ಹೊಸ ಪ್ರಸ್ತಾವಗಳನ್ನು ಪರೀಕ್ಷಿಸಿ ನಿರ್ಧಾರಕ್ಕೆ ಬನ್ನಿ. ಉದ್ಯೋಗಸ್ಥರಿಗೆ ಯಶಸ್ಸು, ಪ್ರಶಂಸೆ ಸಂಭವ. ದೂರದಿಂದ ಶುಭವಾರ್ತೆ ಬಂದು ಹರ್ಷ.
ಕನ್ಯಾ: ಜಾಣತನ ಮತ್ತು ಸಹನೆಯಿಂದ ಉದ್ಯೋಗ ಕ್ಷೇತ್ರ ಹಾಗೂ ಮನೆಯಲ್ಲಿ ವಾತಾವರಣ ತಿಳಿಯಾಗಿರುವಂತೆ ನೋಡಿಕೊಳ್ಳಿ. ಆಶ್ರಿತರ ಯೋಗಕ್ಷೇಮದ ಕಡೆಗೆ ಹೆಚ್ಚು ಗಮನ ಕೊಡಿ. ಹತ್ತಿರದ ದೇವತಾ ಸನ್ನಿಧಿಯನ್ನು ಸಂದರ್ಶಿಸುವ ಯೋಗ.
ತುಲಾ: ಜಪ, ಧ್ಯಾನಗಳಿಂದ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿರಿ. ಉದ್ಯೋಗಸ್ಥರಿಗೆ ದಿನದ ಕೊನೆಯಲ್ಲಿ ಶುಭವಾರ್ತೆ. ಅನ್ಯರ ಹಣಕಾಸು ವ್ಯವಹಾರ ನಿರ್ವಹಿಸುವವರು ಎಚ್ಚರವಾಗಿರಬೇಕು.
ವೃಶ್ಚಿಕ:ಸ್ಥಿರವಾದ ಆರೋಗ್ಯ. ದೇವತಾರ್ಚನೆ ಯತ್ತ ಹೆಚ್ಚಾದ ಒಲವು. ಉದ್ಯೋಗ ರಂಗದಲ್ಲಿ ತೃಪ್ತಿಕರ ಸಾಧನೆ. ವ್ಯವಹಾರಸ್ಥರಿಗೆ ಹೆಚ್ಚಿನ ಯಶಸ್ಸು. ಕಿರಿಯರ ವಿವಾಹ ಮಾತುಕತೆ ಮುಂದುವರಿಕೆ. ಹಿರಿಯರ ಚಿಕಿತ್ಸೆಗಾಗಿ ವೈದ್ಯರ ಭೇಟಿ ಸಂಭವ.
ಧನು: ಕಾರ್ಯನಿಷ್ಠೆ, ಸಹನೆಯಿಂದ ಮೇಲಧಿ ಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ವ್ಯವಹಾರಸ್ಥರಿಗೆ ಹೊಸ ಸವಾಲುಗಳ ಅನುಭವವಾಗುವ ಸಂಭವ. ಕೃಷ್ಯುತ್ಪನ್ನ ಮಾರಾಟಗಾರರಿಗೆ ಲಾಭ ಮಧ್ಯಮ. ಕೋಳಿ ಸಾಕಾಣಿಕೆ, ಮತ್ಸೋದ್ಯಮಿಗಳಿಗೆ ಅನುಕೂಲ.
ಮಕರ:ಯಶಸ್ವಿ ಕಾರ್ಯನಿರ್ವಹಣೆಯಿಂದ ಪರಿಸರದವರ ಮೆಚ್ಚುಗೆಗೆ ಪಾತ್ರರಾಗುವಿರಿ. ಮನೆಯಲ್ಲಿ ಮಂಗಲ ಕಾರ್ಯದ ಸಮಯ ಸನ್ನಿಹಿತ. ದೇವತಾ ಪ್ರಾರ್ಥನೆಯಿಂದ ಕಾರ್ಯಗಳು ಸುಗಮ. ಅರ್ಹರಿಗೆ ನೆರವಾಗುವ ಯೋಗದಿಂದ ಸಮಾಧಾನ.
ಕುಂಭ: ಸೇವಾ ಚಟುವಟಿಕೆಗಳನ್ನು ಹೆಚ್ಚಿಸುವ ಕುರಿತು ಚಿಂತಿಸುವಿರಿ. ಉದ್ಯೋಗರಂಗದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಹಾಗೂ ಗೌರವ ಪ್ರಾಪ್ತಿ. ಸಂಗಾತಿಯ ಆರೋಗ್ಯದತ್ತ ಗಮನವಿರಲಿ. ಸಹೋದರ, ಸಹೋದರಿಯರೊಡನೆ ಮಿಲನ ಸಂಭವ.
ಮೀನ: ಸ್ಥಿರವಾದ ಆರೋಗ್ಯದ ಅನುಭವ. ಮಾತೃಸಮಾನರ ಹಿತ ನುಡಿಯಿಂದ ಮನಸ್ಸಿಗೆ ನೆಮ್ಮದಿ. ಬಂಧು ಬಾಂಧವರ ಭೇಟಿ ಸಂಭವ. ಉದ್ಯೋಗ, ವ್ಯವಹಾರದಲ್ಲಿ ಸ್ಥಿರವಾದ ಯಶಸ್ಸಿನ ಅನುಭವ. ವಾಹನ, ಆಸ್ತಿ ಖರೀದಿ, ಮಾರಾಟ ವ್ಯವಹಾರಸ್ಥರಿಗೆ ಅನುಕೂಲ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.