Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗಲಿವೆ


Team Udayavani, Sep 21, 2023, 7:21 AM IST

1-thursday

ಮೇಷ: ಬಗೆಬಗೆಯ ಚಟುವಟಿಕೆಗಳು ತುಂಬಿರುವ ದಿನ. ಉದ್ಯೋಗ ವಲಯದ ಜವಾಬ್ದಾರಿಗಳೂ ವೈವಿಧ್ಯ ಮಯ. ಮೇಲಧಿಕಾರಿಗಳ ಮೆಚ್ಚುಗೆ. ಮನೆಯಿಂದಲೇ ಕೆಲಸ ಮಾಡುವವರಿಗೆ ಹೊಸ ಅನುಭವಗಳಾಗಲಿವೆ. ಸಿವಿಲ್‌ ಎಂಜಿನಿಯರರು, ಮೇಸ್ತ್ರಿಗಳು ಮೊದಲಾದವರಿಗೆ ಮಧ್ಯಮ ಫ‌ಲ.

ವೃಷಭ:ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹವಾಮಾನದ ಏರುಪೇರಿನ ಪರಿಣಾಮವಾಗಿ ಕೆಲವು ಬಗೆಯ ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಹೊಸ ಬೆಳವಣಿಗೆಗಳು, ಸಮಸ್ಯೆಗಳು ಇರಲಾರವು.

ಮಿಥುನ: ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಅಯಾಚಿತವಾಗಿ ಬರಲಿವೆ. ಮೇಲಧಿಕಾರಿಗಳ ಮನವೊಲಿಸು ವುದರಲ್ಲಿ ಯಶಸ್ವಿಯಾಗುವಿರಿ. ವ್ಯವಹಾರಸ್ಥರಿಂದ ಇನ್ನೊಂದು ಹೊಸ ರಂಗಕ್ಕೆ ಪ್ರವೇಶ ಸಂಭವ.

ಕರ್ಕಾಟಕ: ಸಂಸಾರದಲ್ಲಿ ಹೊಸ ಬೆಳವಣಿಗೆಗಳ ನಿರೀಕ್ಷೆ. ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ತೃಪ್ತಿಕರ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಒಳ್ಳೆಯ ಸಹಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯವೃದ್ಧಿ.

ಸಿಂಹ: ಉದ್ಯೋಗಸ್ಥರ ಸಾಧನೆಗೆ ಸರ್ವತ್ರ ಮೆಚ್ಚುಗೆ. ಎಲ್ಲ ಬಗೆಯ ಸ್ವಂತ ವ್ಯವಹಾರಸ್ಥರು ಯಶಸ್ಸಿನೆಡೆಗೆ ದಾಪುಗಾಲು. ರಸ್ತೆ ಕಾಮಗಾರಿ ನಿರ್ವಾಹಕರಿಗೆ ಅಪವಾದ. ಸರಕಾರಿ ನೌಕರರಿಗೆ ಮೇಲಿನವರ ಕಿರುಕುಳ. ಕೃಷ್ಯುತ್ಪನ್ನ ಮಾರಾಟಗಾರರ ಆದಾಯ ವೃದ್ಧಿ.

ಕನ್ಯಾ: ಆರೋಗ್ಯ ಪಾಲನೆಯತ್ತ ಗಮನ ಇರಲಿ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಸಂಭವ. ಉದ್ಯೋಗಸ್ಥರ ಸ್ಥಾನ ಬದಲಾವಣೆಯ ಸಾಧ್ಯತೆ. ಎಲ್ಲ ಲೋಹಗಳ ವ್ಯಾಪಾರಸ್ಥರಿಗೂ ಆದಾಯ ವೃದ್ಧಿ. ಕೃಷಿ, ಹೈನುಗಾರಿಕೆ ಕ್ಷೇತ್ರಗಳಲ್ಲಿ ವ್ಯವಹರಿಸುವವರಿಗೆ ಆದಾಯ ಮಧ್ಯಮ.

ತುಲಾ: ಆರೋಗ್ಯದಲ್ಲಿ ಸುಧಾರಣೆ. ಹಿರಿಯರಿಂದ ಸಂಸಾರದ ಕ್ಷೇಮ ಚಿಂತನೆಗೆ ಫ‌ಲ ಲಭಿಸುವ ಸಾಧ್ಯತೆ. ಸಾಹಿತ್ಯ ಚಿಂತಕರಿಗೆ, ಅನ್ವೇಷಣಶೀಲರಿಗೆ ಅನುಕೂಲದ ವಾತಾವರಣ. ಅಧ್ಯಾತ್ಮ ಸಾಧಕರಿಗೆ ಉತ್ತೇಜನದ ಸನ್ನಿವೇಶಗಳು ಸೃಷ್ಟಿಯಾಗಲಿವೆ.

ವೃಶ್ಚಿಕ: ಸಮಾಜದಲ್ಲಿ, ಬಂಧುವರ್ಗದಲ್ಲಿ ಗೌರವ ಪ್ರಾಪ್ತಿ. ದೂರದ ನೆಂಟರಿಂದ ಯೋಗಕ್ಷೇಮ ವಿಚಾರಣೆ. ಅನಿರೀಕ್ಷಿತ ಧನಾಗಮ ಸಂಭವ.ಉದ್ಯೋಗಸ್ಥರ ಸಾಧನೆಗೆ ಸಹೋದ್ಯೋಗಿಗಳಿಂದ ಪ್ರಶಂಸೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಧನು: ಹಿರಿಯರಿಗೆ ಆರೋಗ್ಯದ ಸಮಸ್ಯೆ ಯಿದ್ದರೂ ಕ್ರಿಯಾಶೀಲರಾಗಿರಬೇಕಾದ ಅನಿವಾರ್ಯತೆ. ಉದ್ಯೋಗ ರಂಗದಲ್ಲಿ ಸ್ಥಿರ ವಾತಾವರಣ. ಹತ್ತಿರದವರಿಂದ ನಿರೀಕ್ಷಿತ ಸಹಾಯ ವಿಳಂಬ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ತೃಪ್ತಿಕರ.

ಮಕರ: ಭಗವಂತನ ಅನುಗ್ರಹದಿಂದ ಆಪತ್ತು ತೊಲಗಿ ನೆಮ್ಮದಿ. ಉದ್ಯೋಗ ಕ್ಷೇತ್ರದಲ್ಲಿ ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವ ತರಾತುರಿ. ಲೆಕ್ಕ ಪರಿಶೋಧಕರು, ಸಂಸ್ಥೆಗಳ ಉನ್ನತ ಸ್ಥಾನಾಪನ್ನರಿಗೆ ಸಮಯದೊಂದಿಗೆ ಹೋರಾಡುವ ಅನಿವಾರ್ಯತೆ.

ಕುಂಭ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಮೇಲಿಂದ ಮೇಲೆ ಬರುವ ಹೊಸ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ಸು. ಅಧ್ಯಾಪಕರು, ವಿದ್ಯಾರ್ಥಿ ಕ್ಷೇಮಪಾಲಕರು, ಶುಶ್ರೂಷಕಿಯರು ಮೊದಲಾದ ಸೇವಾಪರರ ಪಾಲಿಗೆ ಹೊಸ ಹೊಣೆಗಾರಿಕೆಗಳು.

ಮೀನ: ವ್ಯವಹಾರದಲ್ಲಿ ಪ್ರಗತಿ. ದೇವತಾರಾಧನೆಯಲ್ಲಿ ಅಧಿಕ ಆಸಕ್ತಿ. ತಾಯಿ ಅಥವಾ ತಾಯಿಗೆ ಸಮಾನರಾದವರ ಭೇಟಿಯಿಂದ ಆನಂದ. ದೇವತಾ ಸಾನ್ನಿಧ್ಯಕ್ಕೆ ಭೇಟಿ ಸಂಭವ. ಸಮಾಜ ಸಂಘಟನೆಯಲ್ಲಿ ಹೊಸ ಜವಾಬ್ದಾರಿಯ ನಿರೀಕ್ಷೆ. ದಾಂಪತ್ಯ ಜೀವನದಲ್ಲಿ ಸಮಾಧಾನ. ಬಂಧುವರ್ಗದ ಮಂಗಲಕಾರ್ಯಕ್ಕೆ ನೆರವು.ಮಕ್ಕಳ ಶಿಕ್ಷಣದಲ್ಲಿ ಪ್ರಗತಿ.

ಟಾಪ್ ನ್ಯೂಸ್

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.