Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ
Team Udayavani, Sep 28, 2023, 7:27 AM IST
ಮೇಷ: ಸಂಸಾರದಲ್ಲಿ ಎಲ್ಲರ ದೈಹಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಬೇರೆಬೇರೆ ಕ್ಷೇತ್ರಗಳಿಂದ ಹೊಸ ಉದ್ಯಮ ಆರಂಭಿಸಲು ಆಹ್ವಾನ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ಪರಿಸ್ಥಿತಿ. ವೈದ್ಯರು, ವಾಯುಯಾನ ಎಂಜಿನಿಯರರು, ಔಷಧ ವಿಜ್ಞಾನಿಗಳು ಮೊದಲಾದವರಿಗೆ ಕೀರ್ತಿ.
ವೃಷಭ: ಈಗಾಗಲೇ ರೂಪಿಸಿರುವ ಯೋಜನೆ ಗಳನ್ನು ಕಾರ್ಯಗತಗೊಳಿಸಲು ಪ್ರಯತ್ನ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ವಿಶೇಷ ವ್ಯಕ್ತಿಯೊಬ್ಬರ ಸಂದರ್ಶನ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ಪರಿಸ್ಥಿತಿ. ಸ್ವಂತ ವ್ಯವಹಾರ ನಡೆಸುವವರಿಗೆ ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಆಹ್ವಾನ.
ಮಿಥುನ: ಮುಖಸ್ತುತಿಗೆ ಮನಸೋತು ಮಾತು ಕೊಡದಿರಿ. ಮನೋಬಲ ವೃದ್ಧಿಗೆ ಉಪಾಸನೆಯಲ್ಲಿ ಆಸಕ್ತಿ. ಉದ್ಯೋಗಸ್ಥರ ಸಾಧನೆಗೆ ಸಮಾಜದಲ್ಲಿ ಮನ್ನಣೆ. ಸ್ವಂತ ವ್ಯವಹಾರಸ್ಥರ ಉತ್ಪನ್ನಗಳಿಗೆ ಬೇಡಿಕೆ. ಈಶಾನ್ಯ ದಿಕ್ಕಿನಿಂದ ಶುಭ ಸಮಾಚಾರ. ದೂರದ ಬಂಧುವಿನಿಂದ ಉಪಯುಕ್ತ ಸಲಹೆ.
ಕರ್ಕಾಟಕ: ಹವಾಮಾನದ ವೈಪರೀತ್ಯದಿಂದ ದೇಹ, ಮನಸ್ಸಿನ ಮೇಲೆ ಅಲ್ಪ ಪರಿಣಾಮ.ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳ ನಿರ್ವಹಣೆ ಅನಿವಾರ್ಯ. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾರದರ್ಶಕತೆ ಪಾಲನೆಯನ್ನು ಮರೆಯದಿರಿ. ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಬಹುಮುಖ ಸಾಧನೆ. ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ. ಸಾಹಿತ್ಯ ಸಾಧಕರಿಗೆ ಗೌರವ. ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರ ಸ್ಥಾನದಲ್ಲಿರುವವರಿಗೆ ಹೊಸ ಹೊಣೆಗಾರಿಕೆ. ಕೌಟುಂಬಿಕ ಜೀವನದಲ್ಲಿ ಆನಂದ ಧಾಮ, ಸತ್ಸಂಗಗಳಲ್ಲಿ ಆಸಕ್ತಿ.
ಕನ್ಯಾ: ಕಾರ್ಯ ಆರಂಭಿಸುವಾಗ ಇರುವ ಹುರುಪನ್ನು ಕೊನೆಯ ವರೆಗೂ ಕಾಯ್ದುಕೊಂಡರೆ ವಿಜಯ ನಿಮ್ಮದೇ! ಉದ್ಯೋಗಸ್ಥರಿಗೆ ಸತ್ವಪರೀಕ್ಷೆ. ಸಹೋ ದ್ಯೋಗಿಗಳ ಸಹಕಾರ ಎಂದಿನಂತೆ ಲಭ್ಯ. ಸ್ವಯಂ ಉದ್ಯಮ ನಡೆಸುವವರಿಗೆ ಉತ್ಪಾದನೆ ವೃದ್ಧಿಯ ಅನಿವಾರ್ಯತೆ.
ತುಲಾ: ಅಂತರ್ವಾಣಿಯನ್ನು ಆಲಿಸಿ ದಿಟ್ಟತನದ ಹೆಜ್ಜೆಯಿಡಿ. ಸಮಾಜದಲ್ಲಿ ಗೌರವ ಪ್ರಾಪ್ತಿ. ಇಷ್ಟ ದೈವಾನುಗ್ರಹದಿಂದ ಕಷ್ಟಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ಮೇಲಿನವರಿಂದ ಆದರದ ಮಾತುಗಳು. ವ್ಯವಹಾರ ಕ್ಷೇತ್ರ ದಲ್ಲಿ ಪೈಪೋಟಿ ನಿವಾರಣೆ.
ವೃಶ್ಚಿಕ: ಕೆಡುಕು ಬಗೆದವರು ಪಶ್ಚಾತ್ತಾಪ ಪಡುವ ಸಮಯ.ಉದ್ಯೋಗ ಕ್ಷೇತ್ರದಲ್ಲಿ ಪರಸ್ಪರ ಸೌಹಾರ್ದ, ಸಹಕಾರದ ವಾತಾವರಣ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಸಂಗೀತ ಶ್ರವಣದಲ್ಲಿ ಆಸಕ್ತಿ. ದೀರ್ಘಕಾಲದ ದೈಹಿಕ ಸಮಸ್ಯೆಗೆ ಪರಿಹಾರ.
ಧನು: ಆರೋಗ್ಯ ತೃಪ್ತಿಕರ. ಸಂಸಾರದ ಕೆಲಸ ಗಳಿಗಾಗಿ ಮಿತಿಮೀರಿದ ಓಡಾಟ. ಹಿತ ಶತ್ರು ಗಳಿಂದ ವಿಘ್ನ. ದೇವತಾರ್ಚನೆಯಿಂದ ಶೀಘ್ರ ಫಲ ಪ್ರಾಪ್ತಿ. ದೂರದ ಬಂಧುಗಳಿಂದ ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೃಷಿ, ಹೈನುಗಾರಿಕೆ, ಜೇನುಸಾಕಣೆ, ನಿರತರಿಗೆ ಲಾಭ. ಮಕರ: ಕ್ಷುದ್ರಬಾಧೆಗಳನ್ಮು ಎದುರಿಸುವುದರಲ್ಲೇ ಅಮೂಲ್ಯ ಕಾಲಹರಣ. ದೈವ ಕೃಪೆ ಪ್ರಾಪ್ತಿಗಾಗಿ ಜಪತಪಗಳಲ್ಲಿ ಕಾಲ ಕಳೆಯುವ ಮನಸ್ಸು. ಉದ್ಯೋಗ ಕ್ಷೇತ್ರದಲ್ಲಿ ಸಮಯದ ಮಿತಿಯೊಳಗೆ ಕೆಲಸ ಮುಗಿಸಲು ಒತ್ತಡ. ಮಕ್ಕಳ ಭವಿಷ್ಯ ಚಿಂತನೆ.
ಕುಂಭ: ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಸಾಮಾಜಿಕ ಕ್ಷೇತ್ರದಿಂದ ಕಾರ್ಯಗಳ ಕರೆ. ಉದ್ಯೋಗ ಕ್ಷೇತ್ರದಲ್ಲಿ ಉಲ್ಲೇಖಾರ್ಹ ಸಾಧನೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ.
ಮೀನ: ಶನಿ ಮಹಾತ್ಮನ ಅನುಗ್ರಹದಿಂದ ಕಾರ್ಯಗಳು ಮಂದಗತಿ ಯಲ್ಲಿ ಸಾಗಿದರೂ ಆದಾಯಕ್ಕೆ ಕೊರತೆ ಇಲ್ಲ. ಸಾಮಾಜಿಕ ರಂಗದಲ್ಲಿ ಗೌರವದ ಸ್ಥಾನ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಉದ್ಯೋಗಸ್ಥರಿಗೆ ಸಣ್ಣ ಮಟ್ಟಿನ ಪದೋನ್ನತಿ ಸಂಭವ. ಸರಕಾರಿ ನೌಕರರಿಗೆ ದೂರದ ಊರಿಗೆ ವರ್ಗಾವಣೆಯ ಸಾಧ್ಯತೆ. ಅವಿವಾಹಿತರಿಗೆ ಸಮರ್ಪಕ ನೆಂಟಸ್ತಿಕೆ ಒದಗುವ ನಿರೀಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.