ರಾಶಿ ಫಲ; ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮನ ಸಂಭವ
Team Udayavani, Sep 30, 2022, 7:23 AM IST
ಮೇಷ: ಹಿರಿಯರಿಂದ ಸುಖ ಸಂತೋಷ. ಸರಕಾರಿ ಕೆಲಸಗಳಲ್ಲಿ ಪ್ರಗತಿ. ಗಣ್ಯರ ಸಂಪರ್ಕ ಮಾನ್ಯತೆ. ಸ್ವಸಾಮರ್ಥ್ಯದಿಂದ ಧನ ಸಂಪಾದನೆ. ಸಹೋದ್ಯೋಗಿಗಳ ಸಹಕಾರ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ಧೈರ್ಯ ಶೌರ್ಯ ಪರಾಕ್ರಮದಿಂದ ಕೂಡಿದ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕಾರ್ಯವೈಖರಿ. ಸಂಪತ್ತು ವೃದ್ಧಿ. ದಾನ ಧರ್ಮದಲ್ಲಿ ಆಸಕ್ತಿ, ಶ್ರದ್ಧೆ. ಬಂಧುಮಿತ್ರರ ಸಹಕಾರ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.
ಮಿಥುನ: ಸಂಶೋಧನಾತ್ಮಕ ಪ್ರವೃತ್ತಿ. ಆರೋಗ್ಯ ಗಮನಿಸಿ. ವ್ಯವಹರಿಸುವಾಗ ಮಾತಿನಲ್ಲಿ ಕಠೊರತೆಗೆ ಆಸ್ಪದ ನೀಡದಿರಿ. ಹಣಕಾಸಿನ ಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅನಿರೀಕ್ಷಿತ ಧನಾಗಮನ ಸಂಭವ.
ಕರ್ಕ: ಸಾಂಸಾರಿಕ ಸುಖ ವೃದ್ಧಿ. ದಂಪತಿಗಳಲ್ಲಿ ಅನುರಾಗ ಹೆಚ್ಚಾದೀತು. ದೀರ್ಘ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.
ಸಿಂಹ: ಆರೋಗ್ಯ ತೃಪ್ತಿದಾಯಕ. ಸದಾ ವಿದ್ಯಾರ್ಜನೆಯಲ್ಲಿ ಆಸಕ್ತಿ. ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳಲ್ಲಿ ವಿಶೇಷ ಪ್ರೀತಿ ಸುಖ ಸಂತೋಷ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಸುಖಾದಿ ಲಭ್ಯ.
ಕನ್ಯಾ: ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯ ಮಾಡಿ. ಉದ್ಯೋಗ, ಸಂಪತ್ತು ವಿಚಾರದಲ್ಲಿ ಉತ್ತಮ ಪ್ರಗತಿದಾಯಕ ಬದಲಾವಣೆ ತೋರಿಬರುವುದು. ಸಂಶೋಧಕರಿಗೆ ಅನುಕೂಲಕರ ಪರಿಸ್ಥಿತಿ.
ತುಲಾ: ಆರೋಗ್ಯ ಸುದೃಢ. ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷಪ್ರದ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅಧ್ಯಯನ ಪ್ರವೃತ್ತಿಯವರಿಗೆ ಸದವಕಾಶ ಲಭ್ಯ. ಗುರುಹಿರಿಯರ ಮಾರ್ಗದರ್ಶನ ಲಭ್ಯ.
ವೃಶ್ಚಿಕ: ಉತ್ತಮ ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದೀರ್ಘ ಪ್ರಯಾಣಗಳಿಂದ ನಿರೀಕ್ಷಿತ ಕಾರ್ಯಗಳಲ್ಲಿ ಪ್ರಗತಿ.
ಧನು: ಮಾನಸಿಕ ಗೊಂದಲಗಳಿದ್ದರೂ ಶಾರೀರಿಕ ಸುಖ ಉತ್ತಮ. ಅನಿರೀಕ್ಷಿತ ಧನಾಗಮ. ಮಾತಿ ನಲ್ಲಿ ಎಚ್ಚರವಿರಲಿ. ಸಹೋದ್ಯೋಗಿಗಳ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ ಸಂಭವ. ನೂತನ ಮಿತ್ರರ ಸಮಾಗಮ.
ಮಕರ: ಆರೋಗ್ಯ ಉತ್ತಮ ಆದರೂ ಶಿಸ್ತಿನ ಕೊರತೆ ಆಗದಂತೆ ಗಮನಹರಿಸಿ. ವಾಕ್ ಚತುರತೆಯಿಂದ ಕೆಲಸಕಾರ್ಯಗಳಲ್ಲಿ ಜಯ. ಉತ್ತಮ ಧನಾರ್ಜನೆ. ಸಹೋದರ ಸಮಾನರು, ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸ್ಪಂದನ.
ಕುಂಭ: ಮಧ್ಯಮ ಆರೋಗ್ಯ. ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ದೂರ ಪ್ರಯಾಣ ಸಂಭವ. ಅಧಿಕ ಧನಾರ್ಜನೆ. ಮಿತ್ರರಿಂದಲೂ ಬಂಧುಗಳಿಂದಲೂ ಉತ್ತಮ ಸಹಕಾರ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಕೂಡಿದ ದಿನ.
ಮೀನ: ಆರೋಗ್ಯ ಉತ್ತಮ. ಧನಾರ್ಜನೆ ತೃಪ್ತಿದಾಯಕ. ಅನ್ಯರ ಸಹಾಯ ದೊರಕದು. ಸ್ವಂತ ಪರಿಶ್ರಮದ ಮೇಲೆ ಗಮನವಿರಲಿ. ವ್ಯವಹಾರ ಉದ್ಯೋಗದಲ್ಲಿ ಸಾವಧಾನದ ಪ್ರಗತಿ. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ ಅಗತ್ಯ. ವಿದ್ಯಾರ್ಥಿಗಳಿಗೆ, ಗುರುಹಿರಿಯರಿಗೆ ಸಂತೋಷದಿಂದ ಕೂಡಿದ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.