![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Sep 4, 2023, 7:22 AM IST
ಮೇಷ: ಕಾರ್ಯಗಳ ಆಯ್ಕೆಯ ವಿಷಯದಲ್ಲಿ ಸಣ್ಣ ಗೊಂದಲವಿದೆ. ಆಪ್ತರ ಸಲಹೆಯಿಂದ ಸಮಸ್ಯೆ ಪರಿಹಾರ. ಲಭ್ಯವಿರುವ ಅವಕಾಶಗಳ ಸದುಪಯೋಗದಿಂದ ಯಶಃಪ್ರಾಪ್ತಿ. ಹಿರಿಯರ ಆರೋಗ್ಯ ಉತ್ತಮ. ಉದ್ಯೋಗಸ್ಥರಿಗೆ ಶುಭ ಸನ್ನಿವೇಶ.
ವೃಷಭ:ಎಡಬಲಕ್ಕೆ ನೋಡದೆ ಮಂದಗತಿ ಯಲ್ಲಿ ಮುನ್ನಡೆಯಿರಿ. ವ್ಯವಹಾರ ಕ್ಷೇತ್ರದಲ್ಲಿ ಹೊಸಬರಿಂದ ಪೈಪೋಟಿ ಸಂಭವ. ಅಲ್ಪ ಕಾಲಿಕ ಹೂಡಿಕೆಗಳ ಯೋಚನೆಯನ್ನು ತ್ಯಜಿಸಿರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭವಾರ್ತೆ.
ಮಿಥುನ: ಭೂತಕಾಲವನ್ನು ಭೂತಕನ್ನಡಿಯಿಂದ ನೋಡುವುದನ್ನು ಬಿಟ್ಟುಬಿಡಿ. ಉತ್ತಮ ಅವಕಾಶಗಳು ಅರಸಿ ಬರಲಿವೆ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದರಿಂದ ಜನಾದರಣೆಗೆ ಪಾತ್ರರಾಗುವಿರಿ.
ಕರ್ಕಾಟಕ: ಉದ್ಯೋಗಸ್ಥರಿಗೆ ಅನುಕೂಲದ ವಾತಾವರಣ. ಆರೋಗ್ಯ ಕೊಂಚ ವ್ಯತ್ಯಾಸ. ದೇವತಾ ಪ್ರಾರ್ಥನೆಯಿಂದ ಸಮಸ್ಯೆ ನಿವಾರಣೆ. ನೂತನ ಗೃಹ ನಿರ್ಮಾಣ ಯೋಜನೆಗೆ ಚಾಲನೆ. ವಾಹನ ಖರೀದಿಗೆ ತಾತ್ಕಾಲಿಕ ಅಡಚಣೆ.
ಸಿಂಹ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿದೆ. ಅಧಿಕಾರಿ ವರ್ಗದವರ ಉತ್ತೇಜನ, ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸುಗಮ. ಧಾರ್ಮಿಕ ಕಾರ್ಯಗಳು, ದಾನ ಧರ್ಮಾದಿಗಳ ಕಡೆಗೆ ಒಲವು.
ಕನ್ಯಾ: ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭದಿನ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಕಾಡುತ್ತಿದ್ದ ಕಿರಿಕಿರಿಗಳು ದೂರ. ಮಹಾಪುರುಷರೊಬ್ಬರ ಭೇಟಿ ಸಂಭವ. ಅವಿವಾಹಿತ ಕನ್ಯೆಯರಿಗೆ ಸರಿಯಾದ ನೆಂಟಸ್ತಿಕೆ ಕೂಡಿಬರುವ ಸಾಧ್ಯತೆ.
ತುಲಾ: ಉತ್ತಮ ದೈವಾನುಗ್ರಹದಿಂದ ಕಷ್ಟಗಳು ದೂರ. ಸ್ವದೇಶಿ ಉದ್ಯಮಗಳಿಗೆ ಶುಭ ಗಳಿಗೆ. ಮತ್ಸೋದ್ಯಮಿಗಳಿಗೆ ಮಧ್ಯಮ ಫಲ. ಉಡುಪು ತಯಾರಕರಿಗೆ ವಿಶೇಷ ಆದಾಯ ಯೋಗ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ.ಹಿರಿಯರ ಆರೋಗ್ಯ ಸುಧಾರಣೆ.
ವೃಶ್ಚಿಕ: ಸಿಹಿ ನೆನಪುಗಳೇ ನಿಮ್ಮ ಮನಸ್ಸಿನ ಶಕ್ತಿವರ್ಧಕ ಸಾಧನಗಳು. ಕಿರಿಯರಿಂದ ಮಹತ್ಸಾಧನೆ. ದೂರದ ಬಂಧುವಿನ ಭೇಟಿಯಿಂದ ಮತ್ತೆ ಚಿಗುರಿದ ಜೀವನೋತ್ಸಾಹ. ಸತ್ಸಂಗ, ಪ್ರವಚನಗಳನ್ನು ಆಲಿಸುವುದರಲ್ಲಿ ಆಸಕ್ತಿ.
ಧನು:ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆಯಿಂದ ತೃಪ್ತಿ. ಜವಾಬ್ದಾರಿಯ ಸ್ಥಾನದಲ್ಲಿರುವವರಿಗೆ ಪಾರದರ್ಶಕತೆಯೇ ರಕ್ಷೆ. ವೈದ್ಯರ ಭೇಟಿಯಿಂದ ಮನಸ್ಸು ನಿರಾಳ. ಸಮೀಪದ ದೈವೀ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಸಮಾಧಾನ.
ಮಕರ: ಕಾಲು ಕೆದರಿ ಜಗಳಕ್ಕೆ ಬರುವವರಿಂದ ದೂರವಿರಿ. ಜಾಣತನ, ತಾಳ್ಮೆಯ ನಡೆಯಿಂದ ಯಶಸ್ಸು ಖಚಿತ. ದೇವತಾರಾಧನೆಯಿಂದ ಶೀಘ್ರಫಲ ಪ್ರಾಪ್ತಿ. ಹಿರಿಯರ ಆರೋಗ್ಯ ಉತ್ತಮ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ. ಉದ್ಯೋಗ ಅರಸುವವರಿಗೆ ಶುಭ ಯೋಗ.
ಕುಂಭ: ಸಮಾಜ ಸೇವೆ ,ಪರೋಪಕಾರಗಳಲ್ಲೇ ನೆಮ್ಮದಿ ಕಾಣುವಿರಾದರೂ ಮನೆಯವರ ಸಂತೃಪ್ತಿಯನ್ನು ಗಮನಿಸುವುದು ಅವಶ್ಯ. ಬಂಧು ವರ್ಗದಲ್ಲಿ ವಿವಾಹ. ಹಿರಿಯರ ಆರೋಗ್ಯದತ್ತ ಗಮನವಿರಲಿ. ರಾಜಿ ಸಂಧಾನದಲ್ಲಿ ಮುಖ್ಯ ಪಾತ್ರ ವಹಿಸುವ ಸಂಭವ.
ಮೀನ: ಶಿವ, ವಿಷ್ಣು, ಆಂಜನೇಯರ ಕೃಪೆಯಿಂದ ವ್ಯಾಕುಲ ದೂರ. ಉದ್ಯೋಗ ಕ್ಷೇತ್ರ ಕಿರಿಕಿರಿಯಿಂದ ಮುಕ್ತಿ. ವ್ಯವಹಾರ ಸ್ಥರಿಗೆ ಅಲ್ಪ ಲಾಭ. ಕಟ್ಟಡ ನಿರ್ಮಾಪಕರಿಗೆ ಒದಗಿ ಬಂದ ನೆರವು. ವಾಹನ,ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಸಮಾಧಾನಕರ. ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ವಾತಾವರಣ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.