Daily Horoscope: ಉದ್ಯಮದಲ್ಲಿ ಪ್ರಗತಿ ತೃಪ್ತಿಕರ,ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ ಸಾಧ್ಯತೆ
Team Udayavani, Sep 5, 2024, 7:27 AM IST
ಮೇಷ: ಅಪರಾಹ್ನ ತಿರುಗಾಟದ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ: ತಕ್ಕಮಟ್ಟಿಗೆ ನೆಮ್ಮದಿಯ ದಿನ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ.
ಮಿಥುನ: ಮೋಸದ ಬಲೆಯಲ್ಲಿ ಕೆಡವುವವರ ಬಗ್ಗೆ ಎಚ್ಚರ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಎಲ್ಲ ಮನೆಮಂದಿಗೂ ಉಲ್ಲಾಸದ ಮನೋಭಾವ.
ಸಿಂಹ: ಉದ್ಯೋಗಸ್ಥರಿಗೆ ಉತ್ತೇಜನದ ಕ್ರಮಗಳು. ಹೊಸ ಪರಿಚಯಸ್ಥರ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿ. ನೂತನ ನಿವೇಶನ ಖರೀದಿಗೆ ಚಿಂತನೆ.
ಕನ್ಯಾ: ಮನೆಯಲ್ಲಿ ಶಾಂತಿ,ಸಮಾಧಾನದ ಕ್ಷಣಗಳು. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಆಶಾದಾಯಕ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ.
ತುಲಾ: ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಸ್ಥಾನಮಾನ. ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.
ವೃಶ್ಚಿಕ: ನ್ಯಾಯಾಲಯದಲ್ಲಿ ಜಯ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.
ಧನು: ಆವಶ್ಯಕತೆಗೆ ತಕ್ಕಂತೆ ಒದಗಿ ಬರುವ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ.ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.
ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.
ಕುಂಭ: ಲಾಭದಾಯಕ ಯೋಜನೆ ಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.
ಮೀನ: ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಅಪರಿಚಿತ ವ್ಯಕ್ತಿಗಳಿಂದ ಅನಿರೀಕ್ಷಿತ ಸಹಾಯ. ವ್ಯವಹಾರ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.