Daily Horoscope: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ, ನಿರೀಕ್ಷಿತ ಆರ್ಥಿಕ ನೆರವು
Team Udayavani, Sep 6, 2023, 7:28 AM IST
ಮೇಷ: ವ್ಯವಹಾರದ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸದಿಂದ ತಾತ್ಕಾಲಿಕ ತೊಂದರೆ. ಗುರುವಿನ ಅನುಗ್ರಹದಿಂದ ಅನಾರೋಗ್ಯ ಉಪಶಮನ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ.
ವೃಷಭ: ಸತ್ಕಾರ್ಯಗಳಿಗೆ ಪ್ರೇರಣೆ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆ ಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ. ವ್ಯವಹಾರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ. ಹಳೆಯ ಗೆಳೆಯರೊಂದಿಗೆ ಅಕಸ್ಮಾತ್ ಮಿಲನ. ನಿರೀಕ್ಷಿತ ಲಾಭ ಕೈಸೇರಿ ಹರ್ಷ.
ಮಿಥುನ: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ. ಉದ್ಯೋಗಸ್ಥರು ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ಕ್ಷಣಿಕ ಅನಾರೋಗ್ಯಕ್ಕೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ.
ಕರ್ಕಾಟಕ: ವ್ಯವಹಾರ ರಂಗದಲ್ಲಿ ದಾಪುಗಾಲಿ ನಿಂದ ಸಾಗಲು ಯತ್ನಿಸುವಿರಿ. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆಯಲ್ಲಿ ಮುನ್ನಡೆ.
ಸಿಂಹ: ಉದ್ದೇಶಿತ ಕಾರ್ಯಸಾಧನೆಯ ಪ್ರಯತ್ನದಲ್ಲಿ ಅನೂಹ್ಯ ಮುನ್ನಡೆ. ಕಾರ್ಯ ರಂಗದ ವಿಸ್ತರಣೆಗೆ ಆಹ್ವಾನ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳಾಗಿರುವವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಯಶಸ್ಸು ಖಚಿತ.
ಕನ್ಯಾ: ಸ್ಥಿರವಾಗಿ ನೆಲೆಗೊಳ್ಳಲು ಮಾಡುತ್ತಿರುವ ಪ್ರಯತ್ನದಲ್ಲಿ ಯಶಸ್ಸು. ಕುಲದೇವರ ದರ್ಶನ ದಿಂದ ದೀರ್ಘಕಾಲೀನ ಸಮಸ್ಯೆ ನಿವಾರಣೆ. ಸಣ್ಣ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಸಂಸಾರ ಸಮಸ್ಯೆ ನಿವಾರಣೆಗೆ ಮಾರ್ಗದರ್ಶನ.
ತುಲಾ: ಸಾಂಸಾರಿಕ ಸುಖ ವೃದ್ಧಿ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆಯ ಎಡರು ತೊಡರುಗಳ ನಿವಾರಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ.
ವೃಶ್ಚಿಕ: ಸತ್ಕರ್ಮಗಳ ಫಲ ಲಭಿಸುವ ಸಮಯ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು. ಪಶ್ಚಿಮ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಮಕ್ಕಳಿಗೆ ಸೌಖ್ಯವೃದ್ಧಿ.
ಧನು: ಸಮಾಧಾನದ ವರ್ತನೆಯಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ವಿವಾಹ ಮಾತುಕತೆ ಯಶಸ್ವಿ. ಮಕ್ಕಳ ವಿದ್ಯಾಭ್ಯಾಸ ಮುನ್ನಡೆ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ.
ಮಕರ: ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ಉದ್ಯೋಗ, ವ್ಯವಹಾರ ಗಳಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ.
ಕುಂಭ: ಸೇವಾ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ವಾತಾವರಣ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ.
ಮೀನ: ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ.ಹಳೆಯ ವಿವಾದ ಪರಿಹಾರ.ಕೃಷ್ಯುತ್ಪನ್ನಗಳಿಂದ ಲಾಭ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ. ದಂಪತಿಗಳ ನಡುವೆ ಅನುರಾಗ, ಹೊಂದಾಣಿಕೆ ವೃದ್ಧಿ. ಮಕ್ಕಳ ಪುರೋಭಿವೃದ್ಧಿ ಚಿಂತನೆ. ಔಷಧ ವ್ಯಾಪಾರಿಗಳಿಗೆ ಶುಭ ಯೋಗ. ಕಟ್ಟೆ ನಿರ್ಮಾಪಕರಿಗೆ ಅಲ್ಪ ಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.