Horoscope: ಚಿಂತೆಯನ್ನು ಸಂಪೂರ್ಣ ದೂರವಿಟ್ಟು ಹೊಸ ಸಪ್ತಾಹಕ್ಕೆ ಪದಾರ್ಪಣ ಮಾಡಿ
Team Udayavani, Jan 8, 2024, 7:43 AM IST
ಮೇಷ: ಚಿಂತೆಯನ್ನು ಸಂಪೂರ್ಣ ದೂರವಿಟ್ಟು ಹೊಸ ಸಪ್ತಾಹಕ್ಕೆ ಪದಾರ್ಪಣ ಮಾಡಿ. ಸಹೋದ್ಯೋಗಿಗಳೊಡನೆ ಕೆಲಸದ ಆನಂದಾನುಭವ. ಉದ್ಯಮಿಗಳಿಗೆ ಸಪ್ತಾಹಾರಂಭದ ವಹಿವಾಟಿನಲ್ಲಿ ಸಾಮಾನ್ಯ ಲಾಭ. ಸಟ್ಟಾ ವ್ಯವಹಾರದಿಂದ ದೂರವಿರಿ.
ವೃಷಭ: ಕುಟುಂಬದ ಕ್ಷೇಮಕ್ಕಾಗಿ ಹಮ್ಮಿಕೊಂಡ ವಿವಿಧ ಯೋಜನೆಗಳ ಅವಲೋಕನ. ಉದ್ಯೋಗಸ್ಥರಿಂದ ಹೆಮ್ಮೆ ಪಡುವಂತಹ ಸಾಧನೆ. ಕೆಲವು ಉದ್ಯಮಗಳಿಗೆ ಅಪರಿಮಿತ ವೃದ್ಧಿಯ ಕಾಲ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ.
ಮಿಥುನ: ಕ್ಷುಲಕ ಕಾರಣಗಳಿಗೆ ಕೊರಗುವುದನ್ನು ಬಿಡಿ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಶಿಕ್ಷಿತ ಯುವಕರಿಗೆ ಕೃಷಿಯಲ್ಲಿ ಆಸಕ್ತಿ. ಉದ್ಯಮಿಗಳಿಗೆ ನೌಕರರ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ ಸಾಹಿತ್ಯ ಅಧ್ಯಯನ.
ಕರ್ಕಾಟಕ: ಫಲಾಪೇಕ್ಷೆಯಿಲ್ಲದೆ ಕೇವಲ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡುವ ಪ್ರವೃತ್ತಿ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳ ಶ್ಲಾಘನಾರ್ಹ ನಿರ್ವಹಣೆ. ಯಜಮಾನರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ಆರೋಗ್ಯ ಉತ್ತಮ.
ಸಿಂಹ: ಎಲ್ಲ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ ದೂರಕ್ಕೆ ವರ್ಗಾವಣೆಯ ಆತಂಕ. ಗೃಹೋತ್ಪನ್ನಗಳಿಗೆ ವಾಪಕ ಬೇಡಿಕೆ. ಇತ್ತೀಚೆಗೆ ಖರೀದಿಸಿದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು.
ಕನ್ಯಾ: ವಹಿಸಿಕೊಟ್ಟ ಕೆಲಸಗಳನ್ನು ಅವಧಿಗೆ ಮೊದಲೇ ಮುಗಿಸಿದ ಸಮಾಧಾನ. ಅಚ್ಚುಕಟ್ಟಾದ ಕಾರ್ಯಕ್ಕೆ ಮೇಲಿನವರಿಂದ ಪ್ರಶಂಸೆ. ಸಹಕಾರಿ ಕ್ಷೇತ್ರದ ವಿತ್ತ ಸಂಸ್ಥೆಗಳ ಜನಪ್ರಿಯತೆ ವೃದ್ಧಿ. ಮಗಳ ಮನೆಯಲ್ಲಿ ದೇವತಾ ಕಾರ್ಯ.
ತುಲಾ: ಆಯುರ್ವೇದ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಖಾತೆ ಬದ ಲಾವಣೆ.ನ್ಯಾಯಾಲಯದಲ್ಲಿರುವ ಆಸ್ತಿ ವ್ಯಾಜ್ಯ ತೀರ್ಮಾನ ವಿಳಂಬ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಆದಾಯ. ಅವಿವಾಹಿತರಿಗೆ ಜೋಡಿ ಲಭಿಸುವ ಸಾಧ್ಯತೆ.
ವೃಶ್ಚಿಕ: ಆನಂದ ಭಾವದೊಂದಿಗೆ ದಿನಾರಂಭ. ಉದ್ಯೋಗ, ವ್ಯವಹಾರಗಳಲ್ಲಿ ವಿಶೇಷ ಸಾಧನೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಗೌರವ. ಲೇವದೇವಿ ಹಾಗೂ ಸಟ್ಟಾ ವ್ಯವಹಾರದಿಂದ ಹಣಕಾಸು ನಷ್ಟ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.
ಧನು: ಅಪರೂಪದಲ್ಲಿ ಭೇಟಿಯಾದ ಬಂಧುವಿನಿಂದ ವಿಶೇಷ ಮಾಹಿತಿ ಲಭ್ಯ. ಉದ್ಯೋಗಸ್ಥಾನದಲ್ಲಿ ವಿಶಿಷ್ಟ ಮಾದರಿಯಲ್ಲಿ ಕಾರ್ಯನಿರ್ವಹಣೆಗೆ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಕೃಷಿ ಆದಾಯ ತೃಪ್ತಿಕರ.
ಮಕರ: ಕ್ಷಿಪ್ರಗತಿಯ ಕಾರ್ಯದಿಂದ ಶೀಘ್ರ ಫಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ. ವೃತ್ತಿಪರರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಿದ ತೃಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.
ಕುಂಭ: ಸಾಪ್ತಾಹಿಕ ವಿರಾಮದ ಬಳಿಕ ತುರುಸಿನ ಕಾರ್ಯಕ್ರಮಗಳು. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.ಉದ್ಯಮದ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ. ಪೂರಕ ವ್ಯವಸ್ಥೆಗಳಿಗಾಗಿ ಧನವ್ಯಯ. ಗೃಹೋತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ. ಸಂಸಾರದಲ್ಲಿ ಎಲ್ಲರ ನಡುವೆ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ
ಮೀನ: ವಿರಾಮದ ಬಳಿಕ ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ವಿಸ್ತೃತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ. ಸರಕಾರಿ ನೌಕರರ ಪೂರ್ಣ ಸಹಕಾರ. ಧಾರ್ಮಿಕ ರಂಗದಲ್ಲಿ ಜವಾಬ್ದಾರಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿಹೊಸ ಪ್ರಯೋಗಗಳು ಯಶಸ್ವಿ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಸಂಸಾರದಲ್ಲಿ ನೆಮ್ಮದಿಯ ಅನುಭವ. ಹಿರಿಯರಿಗೆ ಆನಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.