Horoscope Today: ಈ ರಾಶಿಯವರಿಗೆ ಅಕಸ್ಮಾತ್ ಧನಾಗಮ ಯೋಗ ಇರಲಿದೆ
Team Udayavani, Apr 15, 2024, 7:27 AM IST
ಮೇಷ: ಹೊಸ ಸಪ್ತಾಹದ ಆರಂಭದಲ್ಲಿ ಪುಟಿದೇಳುವ ಕಾರ್ಯೋತ್ಸಾಹ. ಉದ್ಯೋಗ
ಸ್ಥಾನದಲ್ಲಿ ಹೊಸ ವ್ಯವಸ್ಥೆ. ಸ್ವಂತ ಉದ್ಯಮ ಕ್ಷಿಪ್ರ ಗತಿಯಲ್ಲಿ ಮುನ್ನಡೆ. ಮಹಿಳೆಯರ ಗೃಹೋದ್ಯಮದ ಜನಪ್ರಿಯತೆ ಹೆಚ್ಚಳ.
ವೃಷಭ: ಭರವಸೆಗಳು ತುಂಬಿರುವ ಹೊಸ ಸಪ್ತಾಹ ಆರಂಭ. ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಯುವಜನರನ್ನು ಸೆಳೆಯಲು ಪ್ರಯತ್ನ. ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ದೊರಕಿಸಲು ಸಹಾಯ.
ಮಿಥುನ: ಸಾಹಸಕ್ಕೆ ಸಜ್ಜಾಗಿ ಹೊಸ ಸಪ್ತಾಹಕ್ಕೆ ಪ್ರವೇಶ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.
ಕರ್ಕಾಟಕ: ಬದುಕಿನಲ್ಲಿ ಉತ್ಕರ್ಷ ಹೊಂದುವ ಆಕಾಂಕ್ಷೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಕುಟುಂಬದ ಹಿರಿಯ ವ್ಯಕ್ತಿ ಆಗಮನ.
ಸಿಂಹ: ವಿರಾಮದ ಮರುದಿನ ಪುಷ್ಟೀಕೃತ ಕಾರ್ಯಶಕ್ತಿಯೊಂದಿಗೆ ಕಾರ್ಯರಂಗ ಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಉದ್ಯಮದ ಪ್ರಗತಿ. ಹೊಸ ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ.
ಕನ್ಯಾ: ಕೈಗೊಂಡಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ತಂದೆಯ ಕಡೆಯ ಹಿರಿಯರ ಸಹಕಾರ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.
ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳಿಗೆ ಸೋಲು ಸನ್ನಿಹಿತ.ಗುರು ಸ್ಥಾನದಲ್ಲಿರುವ ಹಿರಿಯರ ಆಗಮನ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ.
ವೃಶ್ಚಿಕ: ಪ್ರತಿಕೂಲ ವಾತಾವರಣದಲ್ಲಿ ದೇಹ, ಮನಸ್ಸುಗಳ ಸ್ವಾಸ್ಥ್ಯ ಕಾಯ್ದುಕೊಂಡ ಸಮಾ
ಧಾನ. ಉದ್ಯಮಿಗಳಿಗೆ ಕಡಿಮೆಯಾಗಿರುವ ಪೈಪೋಟಿ. ಸರಕಾರಿ ನೌಕರರಿಗೆ ಕೆಲಸದ ಭಾರದ ಆತಂಕ. ಸಹಕಾರಿ ಸಂಸ್ಥೆಗಳ ತಾತ್ಕಾಲಿಕ ಸಮಸ್ಯೆ ನಿವಾರಣೆ.
ಧನು: ಪಟ್ಟುಬಿಡದ ಪ್ರಯತ್ನದಿಂದ ಅಂತಿಮವಾಗಿ ಕಾರ್ಯಸಾಧನೆ. ಸಹೋ ದ್ಯೋಗಿಗಳಿಗೆ ಹರ್ಷ. ಬಾಲ್ಯದ ಒಡನಾಡಿಯ ಸಣ್ಣ ಉದ್ಯಮ ಘಟಕ ಪ್ರಗತಿಯಲ್ಲಿ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ.
ಮಕರ: ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಪ್ರಯತ್ನ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.
ಕುಂಭ: ನೆಪಮಾತ್ರದ ರಜಾದಿನ ಮುಗಿದ ಬಳಿಕ ರಂಗಪ್ರವೇಶ. ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.
ಮೀನ: ಸಪ್ತಾಹ ಆರಂಭದ ದಿನ ಹಲವು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳನ್ನು ಗಮನಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ.ಕಾರ್ಯ ನಿರ್ವಹಣೆಗೆ ಸಾರ್ವಜನಿಕರ ಪ್ರಶಂಸೆ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ. ಮನೆಯಲ್ಲಿ ನೆಮ್ಮದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.