Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Team Udayavani, Aug 6, 2024, 8:05 AM IST
ಮೇಷ: ಕಾರ್ಯದಲ್ಲಿ ವೈವಿಧ್ಯವಿದ್ದರೆ ಬುದ್ಧಿ ಚುರುಕಾಗಿರುತ್ತದೆ. ಉದ್ಯೋಗದಲ್ಲಿ ಬದಲಾಗುತ್ತಿರುವ ಹೊಣೆಗಾರಿಕೆಗಳು. ಸರಕಾರಿ ಉದ್ಯೋಗಸ್ಥರಿಗೆ ಹಿತವಾಗದ ಅನುಭವಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು ಎದುರಾಗುತ್ತವೆ.
ವೃಷಭ: ಒಂದೇ ಯೋಜನೆಯ ಮೇಲೆ ಶಕ್ತಿಯನ್ನು ಕೇಂದ್ರೀಕರಿಸುವುದರಿಂದ ಅನುಕೂಲ. ಉದ್ಯೋಗಸ್ಥರೆದುರು ವಿಶಿಷ್ಟ ಅವಕಾಶಗಳ ಅನಾವರಣ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಹೇರಳ ಲಾಭ.
ಮಿಥುನ: ದೀರ್ಘಕಾಲದಿಂದ ನಿಷ್ಕ್ರಿಯವಾಗಿದ್ದ ಯೋಜನೆಗಳನ್ನು ಚುರುಕುಗೊಳಿಸುವ ಪ್ರಕ್ರಿಯೆ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಹಿತಶತ್ರುಗಳ ಪ್ರಭಾವದಿಂದ ಅನವಶ್ಯ ವೈಮನಸ್ಯದ ಸಾಧ್ಯತೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.
ಕರ್ಕಾಟಕ: ಸರಳ ಹಾಗೂ ನೇರ ಮಾರ್ಗದ ನಡೆಯಿಂದ ಕಾರ್ಯಸಾಧನೆ ಸುಲಭ. ಉದ್ಯೋಗಸ್ಥರಿಗೆ ವೇತನ ಏರಿಕೆ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ಮಧ್ಯವರ್ತಿಗಳ ಅಡ್ಡಗಾಲು. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.
ಸಿಂಹ: ನಿರಂತರ ಕ್ರಿಯಾಶೀಲತೆಗೆ ಇಂಬು ಕೊಡುವ ಸನ್ನಿವೇಶ ಸೃಷ್ಟಿ. ಏಕಕಾಲದಲ್ಲಿ ಅನೇಕ ಬಗೆಯ ವ್ಯವಹಾರಗಳಿಗೆ ಗಮನ ಹರಿಸುವ ಅನಿವಾರ್ಯತೆ. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ಇಲ್ಲದ ಪದೋನ್ನತಿ. ಕುಟುಂಬದಲ್ಲಿ ಎಲ್ಲರಿಗೂ ನೆಮ್ಮದಿ.
ಕನ್ಯಾ: ಕಾರ್ಯ ನಿರ್ವಹಣೆಗೆ ಅನುಕೂಲಕರವಾದ ಪರಿಣತಿ ಪ್ರಾಪ್ತಿ. ಕಾರ್ಯಕ್ಷೇತ್ರದಲ್ಲಿ ಹಿತಕರ ವಾತಾವರಣ. ಸಂಸ್ಥೆಯ ಪ್ರಮುಖರಿಂದ ಹಿರಿಯ ನೌಕರರಿಗೆ ಪುರಸ್ಕಾರ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ.
ತುಲಾ: ಶಾರೀರಿಕ ಬಾಧೆಯಿಂದ ಚೇತರಿಕೆ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ ಮುಂದುವರಿಕೆ. ಎದುರಾಳಿಗಳ ಪೈಪೋಟಿಯ ಕಾರಣದಿಂದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.
ವೃಶ್ಚಿಕ: ದೊಡ್ಡ ಹಾನಿಯಾಗುವ ಭೀತಿ ಸದ್ಯಕ್ಕಿಲ್ಲ. ಉದ್ಯೋಗಸ್ಥರ ಸ್ಥಾನ ಗೌರವ ಅಬಾಧಿತ. ಸರಕಾರಿ ಅಧಿಕಾರಿಗಳಿಗೆ ಆತಂಕದ ಸನ್ನಿವೇಶ. ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ ವಿಫಲ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ವೃದ್ಧಿ.
ಧನು: ನಿರಂತರ ಕ್ರಿಯಾಶೀಲತೆಯೊಂದಿಗೆ ಸಾಹಸಪ್ರವೃತ್ತಿಯೂ ಇರುವುದರಿಂದ ಅಭಿವೃದ್ಧಿಗೆ ತೊಂದರೆಯಾಗದು. ಪಟ್ಟು ಬಿಡದ ಪ್ರಯತ್ನದಿಂದ ಘಟಕದ ಕಾರ್ಯ ನಿರ್ವಹಣೆ ಸುಧಾರಣೆ.ಉದ್ಯಮದ ವೈವಿಧ್ಯೀಕರಣ ಯೋಜನೆಯಲ್ಲಿ ಮುನ್ನಡೆ.
ಮಕರ: ಶನಿಯ ಅನುಗ್ರಹ ಪ್ರಾಪ್ತಿಯ ಸಮಯ ಸನ್ನಿಹಿತ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು. ಹಿತಶತ್ರುಗಳ ಪೀಡೆ ನಿವಾರಣೆ. ಯಂತ್ರೋಪಕರಣ ಉದ್ಯಮಿಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ.
ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಮುಂದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಅನುಕೂಲಕರ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ.ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ಅಲ್ಪ ಲಾಭ.
ಮೀನ: ಬಹಳ ಪ್ರೋತ್ಸಾಹದ ವಾತಾವರಣ ಅಲ್ಲವಾದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಯಶಸ್ವಿ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯ ಸ್ಥಾನ ಲಭ್ಯ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.