![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 5, 2021, 7:51 AM IST
05-01-2021
ಮೇಷ: ಒಂದರ ಮೇಲೆ ಒಂದರಂತೆ ಅಡೆತಡೆಗಳು ಕಷ್ಟಗಳು ಎದುರಾಗುತ್ತಲೇ ಇರುತ್ತದೆ. ಅವನ್ನು ಹೇಗೆ ಎದುರಿಸುತ್ತೀರಿ ಎಂಬುದು ನಿಮಗೆ ಸವಾಲಾದೀತು. ಆದರೆ ಎದೆಗುಂದದೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿರಿ.
ವೃಷಭ: ದೈವಾನುಗ್ರಹವಿರುವ ನಿಮಗೆ ನಾಲ್ಕು ಕಡೆಗಳಿಂದಲೂ ಒಂದಲ್ಲಾ ಒಂದು ಚಿಂತೆ ಘಾಸಿಗೊಳಿಸೀತು. ಆದರೂ ನೀವು ಅದರಿಂದ ಪಾರಾಗಲು ದೈವದ ಮೊರೆ ಹೋಗುವುದು ಒಳಿತು. ಸಹನೆ ಆತ್ಮವಿಶ್ವಾಸವಿರಲಿ.
ಮಿಥುನ: ಮನವು ಸಂತೋಷ ಸಮಾರಂಭದಲ್ಲಿ ಪಾಲ್ಗೊಂಡು ಸಮಾಧಾನ ತಂದೀತು. ದೈಹಿಕವಾಗಿ ಆರೋಗ್ಯ ಉತ್ತಮ. ನಿಮ್ಮೆಣಿಸಿದ ಕಾರ್ಯಗಳೆಲ್ಲವೂ ನಿಧಾನವಾಗಿ ಆಗುತ್ತಲೇ ಹೋಗುತ್ತದೆ. ಚಿಂತೆಗೆ ಕಾರಣ ಮಾಡದಿರಿ.
ಕರ್ಕ: ಚಿತ್ತ ಚಾಂಚಲ್ಯದಿಂದ ಮನಸ್ಸು ದ್ವಿಗುಣವಾದೀತು. ಅದಕ್ಕಾಗಿ ಅತೀ ಚಿಂತೆ ಬೇಡ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸಿಗೆ ಸಮಾಧಾನವಾಗಲಿದೆ.
ಸಿಂಹ: ಕಗ್ಗತ್ತಲಾವರಿಸಿದ ಮನಸ್ಸು ರೋಸಿ ಹೋದೀತು. ಹೇಗೆ, ಎತ್ತ, ಏನು ಎಂಬುದು ನಿಮಗೇ ಅರಿವಿಲ್ಲದಂತಾದೀತು. ನೀವು ಕೈಗೊಳ್ಳುವ ಕಾರ್ಯದಲ್ಲಿ ಜಯ ಸಿಗಲಿದೆ. ಜನರ ಬೆಂಬಲವು, ಪ್ರಶಂಸೆಯೂ ನಿಮ್ಮೊಂದಿಗಿರುತ್ತದೆ.
ಕನ್ಯಾ: ಶುಭ ಮಂಗಲ ಕಾರ್ಯ ನಿಮಿತ್ತ ಪ್ರವಾಸವು ಕೂಡಿಬರಲಿದೆ. ಸಂಸಾರದಲ್ಲಿ ನೆಮ್ಮದಿ, ಸಂತೋಷ, ಸಮಾಧಾನ ಲಭಿಸಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯವು ಉತ್ತಮ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಸಂತಸ.
ತುಲಾ: ತಂದೆ, ಮಕ್ಕಳೊಳಗೆ ಆಸ್ತಿ ಬಗ್ಗೆ ಸ್ವಲ್ಪ ತಕರಾರು ಇದ್ದರೂ ಸಂಧಾನದಿಂದ ಸರಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಪ್ರಯತ್ನ ನಡೆದೀತು. ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿದೇಶಯಾನವಿದ್ದೀತು.
ವೃಶ್ಚಿಕ: ಮಕ್ಕಳ ವಿವಾಹವು ನಡೆದೀತು. ಅನೇಕ ರೀತಿಯಲ್ಲಿ ಖರ್ಚು ಕಂಡುಬರಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಮ್ಮೆಣಿಕೆಯಂತೆ ಲಾಭವಿದ್ದೀತು. ಜನರು ನಿಮ್ಮ ಪ್ರಶಂಸೆ, ಏಳಿಗೆ ಕಂಡು ಹೊಟ್ಟೆ ಉರಿಸಿಕೊಂಡಾರು.
ಧನು: ವ್ಯವಹಾರ ನಿಮಿತ್ತ ಪ್ರಯಾಣ ಕೂಡಿಬರಲಿದೆ.ಆದರೂ ಮೋಜಿಗಾಗಿ ಹೆಚ್ಚು ಖರ್ಚು ಮಾಡುವುದು ಬೇಡ. ಪತ್ನಿಯ ಉದ್ಯೋಗದ ನಿಮಿತ್ತ ನಿಮಗೆ ಚಿಂತೆ ಆವರಿಸಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಹಾಗಿದೆ.
ಮಕರ: ಉದ್ಯೋಗರಂಗದಲ್ಲಿ ನಿಮಗೆ ತುಂಬಾ ಕಿರಿಕಿರಿ ಕಂಡುಬಂದೀತು. ಮೇಲಾಧಿಕಾರಿಗಳಿಂದ ಒತ್ತಡವು ಕಂಡುಬರುವುದು. ಮನೆಯಲ್ಲಿ ಹಿರಿಯರಿಂದ ಕಿರಿಕಿರಿ ಕಂಡುಬಂದೀತು. ಮಕ್ಕಳಿಂದ ಸಮಾಧಾನವಿದೆ.
ಕುಂಭ: ಕಾರ್ಯನಿಮಿತ್ತ ಪ್ರವಾಸ ಕಂಡುಬರುವುದು. ಆದರೂ ಅದು ವ್ಯರ್ಥವಾಗಲಿದೆ. ಮಕ್ಕಳ ಮನೆಗೆ ಪ್ರಯಾಣ ಮಾಡುವ ಅವಕಾಶ ಬರಲಿದೆ. ಆತ್ಮವಿಶ್ವಾಸ, ಧೈರ್ಯ ಹಾಗೂ ನೇರ ನುಡಿ, ನಡೆಯಿಂದ ಮುನ್ನಡೆಯಿರಿ.
ಮೀನ: ಕಾರ್ಯರಂಗದಲ್ಲಿ ವಿಲಾಸೀ ಜೀವನಕ್ಕೆ ಮಾರು ಹೋಗಿ ನಿಮ್ಮ ಬಗ್ಗೆ ಜಾಗ್ರತೆ ಮಾಡುವುದು ಅತೀ ಅಗತ್ಯವಿದೆ. ಮನೆಯಲ್ಲಿ ಮಂಗಲಕಾರ್ಯದ ಪ್ರಯತ್ನ ನಡೆದರೂ ನೀವು ಒಪ್ಪುವುದು ಅತೀ ಅಗತ್ಯ
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.