Horoscope: ಅವಿವಾಹಿತ ಹುಡುಗರಿಗೆ ವಿವಾಹ ಯೋಗ ಒದಗಿ ಬರಲಿದೆ
Team Udayavani, Nov 4, 2024, 7:12 AM IST
ಮೇಷ: ನಿಧಾನ ಗತಿಯಲ್ಲಿ ಹೊಸ ಸಪ್ತಾಹ ಆರಂಭ. ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ. ಸ್ಥಗಿತವಾಗಿದ್ದ ಉತ್ಪಾದನಾ ಚಟುವಟಿಕೆಗಳಿಗೆ ಚಾಲನೆ.ಬಂಧುವರ್ಗದಲ್ಲಿ ವಿವಾಹದ ಸಿದ್ಧತೆ. ಮಕ್ಕಳ ಅಧ್ಯಯನಾಸಕ್ತಿ ಪೋಷಣೆಗೆ ಸಹಾಯ.
ವೃಷಭ: ಹಲವು ಬಗೆಯ ಸಂಪಾದನಾ ಮಾರ್ಗಗಳಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಸಹಕಾರ ವೃದ್ಧಿ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ.
ಮಿಥುನ: ಪ್ರತಿಭಾವಂತರಿಗೆ ಹೊಸ ಅವಕಾಶಗಳು ಮತ್ತು ಹೊಣೆಗಾರಿಕೆಗಳು.ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ ಪಿತ್ರಾರ್ಜಿತ ಆಸ್ತಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಓದು, ಬರವಣಿಗೆಯಲ್ಲಿ ಆಸಕ್ತಿ.
ಕರ್ಕಾಟಕ: ಮನಸ್ಸಿನ ನೈರ್ಮಲ್ಯಕ್ಕಾಗಿ ಧ್ಯಾನದಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಆಮಿಷಗಳ ಬಗೆಗೆ ಎಚ್ಚರ. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮಕ್ಕೆ ಶುಭಕಾಲ ಸನ್ನಿಹಿತ. ದೇವತಾರಾಧನೆ, ಸತ್ಸಂಗಗಳ ಕಡೆಗೆ ಸೆಳೆತ.
ಸಿಂಹ: ಸಪ್ತಾಹ ಆರಂಭವಾಗುತ್ತಿದ್ದಂತೆ ಕೆಲಸದ ಒತ್ತಡ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಕೈತುಂಬಾ ಕೆಲಸ.
ಕನ್ಯಾ: ಹೊಸ ಅನುಭವಗಳಿಂದ ಜೀವನಾಸಕ್ತಿ ವೃದ್ಧಿ. ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ಸ್ ವ್ಯಾಪಾರ ಬೆಳವಣಿಗೆ. ವೃತ್ತಿ ಪರಿಣತಿ ಹೆಚ್ಚಿಸಿಕೊಳ್ಳಲು ನುರಿತವರ ಮಾರ್ಗದರ್ಶನ.ಬಂಧುವರ್ಗದಲ್ಲಿ ವಿವಾಹ ಮಾತುಕತೆ. ಹಿರಿಯರು ಮಹಿಳೆಯರು, ಮಕ್ಕಳಿಗೆ ಸಂಭ್ರಮ.
ತುಲಾ: ನಿರಂತರ ಪ್ರಯತ್ನದಿಂದ ಚಿತ್ತಸ್ಥೈರ್ಯಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಾರರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಹಿರಿಯರೊಂದಿಗೆ ಹತ್ತಿರದ ದೇವಾಲಯಕ್ಕೆ ಸಂದರ್ಶನ.
ವೃಶ್ಚಿಕ: ಸಪ್ತಾಹದ ಆರಂಭದಲ್ಲೇ ನಿಶ್ಚಿಂತೆಯ ಮನಃಸ್ಥಿತಿ. ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತ ಶ್ರವಣದಲ್ಲಿ ಆಸಕ್ತಿ.
ಧನು: ನಿಮ್ಮ ಕ್ರಿಯಾಶೀಲತೆಗೆ ಸವಾಲಾಗುವಷ್ಟು ಕೆಲಸಗಳ ಹೊರೆ. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಯಥೋಚಿತ ಮಾರ್ಗದರ್ಶನ. ಮನೆಯಲ್ಲಿ ಇಷ್ಟದೇವತಾರ್ಚನೆ.
ಮಕರ: ಏಕಕಾಲದಲ್ಲಿ ಸಂಸಾರ, ಉದ್ಯೋಗ ಇವೆರಡರ ನಿರ್ವಹಣೆಯ ಸವಾಲು.ಅಧ್ಯಾಪಕ ವರ್ಗಕ್ಕೆ ಕೆಲಸದ ಒತ್ತಡ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ.
ಕುಂಭ: ಕಾರ್ಯರಂಗದ ಕರೆಗಳಿಗೆ ಸ್ಪಂದನ. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ.ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ಸೋದರ ಸಂಬಂಧಿಯ ಮನೆಯಲ್ಲಿ ದೇವತಾಕಾರ್ಯ
ಮೀನ: ವಾರದ ಮೊದಲ ದಿನ ಕೆಲಸಗಳ ಒತ್ತಡ. ಹೊಸ ಜನಸೇವಾ ಕಾರ್ಯಗಳಿಗೆ ಪೀಠಿಕೆ. ನಿರ್ಮಾಣ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ಸೋದರ ಸಂಬಂಧಿಯ ವ್ಯಾಪಾರ ವೃದ್ಧಿಗೆ ಮಾರ್ಗದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.