Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
Team Udayavani, Nov 18, 2024, 7:15 AM IST
ಮೇಷ: ಶುಭಪ್ರದವಾಗಿರುವ ಸೋಮವಾರ. ಉದ್ಯೋಗದಲ್ಲಿ ಅಪೂರ್ವ ಸಾಧನೆಯ ತೃಪ್ತಿ. ಸ್ಥಳ ಬದಲಾವಣೆಯ ಯೋಚನೆ ಬೇಡ. ಉದ್ಯಮ ಕ್ಷೇತ್ರದಲ್ಲಿ ಸಮಸ್ಯೆಯಿದ್ದರೂ ಉತ್ಪಾದನೆಗೆ ಕೊರತೆಯಾಗದು.
ವೃಷಭ: ಚೆನ್ನಾಗಿ ಯೋಚಿಸಿ ಮುನ್ನಡೆಯಿರಿ. ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಮುಕ್ತಾಯಗೊಳಿಸಿ ಇನ್ನೊಂದಕ್ಕೆ ಕೈಹಾಕಿ. ವಿತ್ತಸಂಸ್ಥೆಯಿಂದ ಸಕಾಲಕ್ಕೆ ಸಹಾಯ ಲಭ್ಯ. ವ್ಯವಹಾರ ನಿಮಿತ್ತ ಸಣ್ಣ ಪ್ರವಾಸದ ಸಾಧ್ಯತೆ.
ಮಿಥುನ: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ. ಸಾಮಾಜಿಕರಿಂದ ಗೌರವ ಪ್ರಾಪ್ತಿ. ಉದ್ಯಮದ ಆರ್ಥಿಕ ಮುಗ್ಗಟ್ಟು ಪರಿಹಾರಕ್ಕೆ ವಿತ್ತಸಂಸ್ಥೆ ನೆರವು. ಮಹಿಳೆಯರ ಸ್ಯೋದ್ಯೋಗ ಯೋಜನೆ ಪ್ರಗತಿಯಲ್ಲಿ. ದೇವತಾ ಸನ್ನಿಧಿಗೆ ಸಂದರ್ಶನ.
ಕರ್ಕಾಟಕ: ಅನಪೇಕ್ಷಿತ ವಿದ್ಯಮಾನಗಳಿಂದ ಕಂಗೆಡದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಕನ್ಯಾನ್ವೇಷಣೆ ಪ್ರಯತ್ನಕ್ಕೆ ಯಶಸ್ಸು. ಹಿರಿಯರು, ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮ.
ಸಿಂಹ: ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪರವೂರಿನಲ್ಲಿರುವ ಬಂಧುಗಳ ಅನಿರೀಕ್ಷಿತ ಆಗಮನ. ಗೃಹೋತ್ಪನ್ನ ಖಾದ್ಯಪದಾರ್ಥಗಳ ಮಾರಾಟದಿಂದ ಲಾಭ.
ಕನ್ಯಾ: ಉದ್ಯೋಗದಲ್ಲಿ ಸ್ಥಿರವಾಗಿ ನಿಲ್ಲುವ ಪ್ರಯತ್ನ. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಿವಾಹಾಸಕ್ತರಿಗೆ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ.
ತುಲಾ: ಯಾರಿಗೂ ಅಂಜದೆ ಮುಂದುವರಿಯಿರಿ. ಉದ್ಯೋಗದಲ್ಲಿ ಯಶಸ್ಸು, ಕೀರ್ತಿ ನಿರೀಕ್ಷೆ. ನೌಕರ ವರ್ಗದ ಉತ್ತಮ ಸಹಕಾರ. ವ್ಯಾಪಾರಿ ವರ್ಗಕ್ಕೆ ಶುಭದಿನ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ.
ವೃಶ್ಚಿಕ: ಉದ್ಯೋಗದಲ್ಲಿ ಉನ್ನತಿ. ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ದೇವಾಲಯಕ್ಕೆ ಭೇಟಿ.ಹಿರಿಯರು, ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಲಾಭ.
ಧನು: ಹಿತಶತ್ರುಗಳ ಬಾಧೆಯಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ.ಯಂತ್ರಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ಮಕರ: ಸಮಸ್ಯೆಗಳಿಗೆ ತಾತ್ಕಾಲಿಕ ವಿರಾಮ. ಉದ್ಯೋಗ ಕ್ಷೇತ್ರದ ಒತ್ತಡ ಕ್ರಮವಾಗಿ ನಿವಾರಣೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.
ಕುಂಭ: ಎಂದಿನಂತೆ ಸೇವಾ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ. ಮನೆಯಲ್ಲಿ ದೇವತಾ ಕಾರ್ಯ. ವಿವಾಹಾಸಕ್ತರಿಗೆ ಯೋಗ್ಯ ಸಂಬಂಧ ಒದಗುವ ನಿರೀಕ್ಷೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಪ್ರಗತಿ.
ಮೀನ: ಸ್ಥಗಿತಗೊಂಡಿದ್ದ ಕಾರ್ಯಗಳ ಮುಂದುವರಿಕೆ. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಅಧಿಕಾರಿಗಳು ಮತ್ತಷ್ಟು ನೌಕರರಿಂದ ಉತ್ತಮ ಸ್ಪಂದನ. ಸೇವಾರೂಪದ ವೃತ್ತಿಯಲ್ಲಿ ಮುನ್ನಡೆ. ಮಾತೃವರ್ಗದ ಸದಾಶಯದಿಂದ ಕಾರ್ಯಗಳಲ್ಲಿ ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.