Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Team Udayavani, Nov 25, 2024, 7:15 AM IST
ಮೇಷ: ಸಪ್ತಾಹಾರಂಭದಲ್ಲೇ ಮಹತ್ವದ ಜವಾಬ್ದಾರಿಗಳು. ಅನೇಕ ಕಾರ್ಯಗಳ ನಿರ್ವ ಹಣೆ. ವ್ಯವಹಾರ ಕ್ಷೇತ್ರದಲ್ಲಿ ಲಾಭ, ಕೀರ್ತಿಗಾಗಿ ಮೇಲಾಟ. ಹಳೆಯ ಸಮಸ್ಯೆಗೆ ಸರಳ ಪರಿಹಾರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.
ವೃಷಭ: ಜಾಗರೂಕತೆಯಿಂದ ಹೆಜ್ಜೆಯಿಡಿರಿ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನೆರವಿನ ನಿರೀಕ್ಷೆ ಸಾರ್ಥಕ. ನೂತನ ವಾಹನ ಖರೀದಿಗೆ ಚಿಂತನೆ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ.
ಮಿಥುನ: ಎಂತಹ ಸನ್ನಿವೇಶವನ್ನೂ ಎದುರಿ ಸುವ ಮನೋಬಲ ನಿಮಗಿದೆ. ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ. ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ. ಹತ್ತಿರದ ದೇವಾಲಯಕ್ಕೆ ಭೇಟಿ.
ಕರ್ಕಾಟಕ: ಮುಂದೇನಾಗುವುದೆಂದು ಅತಿ ಯಾದ ಚಿಂತೆ ಬೇಡ. ಉದ್ಯೋಗಸ್ಥರಿಗೆ ಉತ್ತೇ ಜನದ ವಾತಾವರಣ. ಸ್ವಂತ ಉದ್ಯಮಗಳವರಿಗೆ ಹೊಸ ಬಗೆಯ ಪಂಥಾಹ್ವಾನಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಸದ್ಗ†ಂಥ ಪಾರಾಯಣ ಆಸಕ್ತಿ.
ಸಿಂಹ: ಶಿವೋಪಾಸನೆಯಿಂದ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗ ಕ್ಷೇತ್ರದಲ್ಲಿ ಸರ್ವರಿಂದ ಪ್ರಶಂಸೆ. ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ನೂತನ ಗೃಹ ನಿರ್ಮಾಣಕ್ಕೆ ಅನುಕೂಲ.
ಕನ್ಯಾ: ಎಲ್ಲ ವ್ಯವಹಾರಗಳೂ ನಿರೀಕ್ಷೆಯಂತೆ ನಡೆಯುತ್ತವೆ. ಉದ್ಯೋಗ ರಂಗದಲ್ಲಿ ಮುನ್ನಡೆ. ಸ್ವಂತ ವ್ಯವಹಾರಸ್ಥರಿಗೆ ಸಕಾ ಲಿಕ ನೆರವು. ಲೆಕ್ಕ ಪರಿಶೋಧಕರಿಗೆ ಸಮಯದ ಒತ್ತಡ. ಗೃಹಿಣಿ ಯರ ಮಹತ್ವಾಕಾಂಕ್ಷೆಗೆ ಪೂರಕ ವಾತಾವರಣ.
ತುಲಾ: ಪಂಚಮ ಶನಿಯ ಪ್ರಭಾವ ಇದ್ದರೂ ದೊಡ್ಡ ಅನಾರೋಗ್ಯ ಬರಲಾರದು. ದೇವತಾರ್ಚನೆ, ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ.
ವೃಶ್ಚಿಕ: ಪ್ರಿಯಕ್ಕಿಂತ ಹಿತವೇ ಮುಖ್ಯವೆಂದು ಮನಗಾಣುವ ಸನ್ನಿವೇಶ. ಉದ್ಯೋಗ ರಂಗ ದಲ್ಲಿ ಪ್ರತಿಭೆ ತೋರಿಸಲು ಅವಕಾಶ. ವ್ಯವಹಾರ ಕ್ಷೇತ್ರ ದಲ್ಲಿ ಪೈಪೋಟಿ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆನಂದ.
ಧನು: ಉದ್ದೇಶಿತ ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರ ಮತ್ತು ಗೃಹಿಣಿಯರ ಸ್ವಾವ ಲಂಬನೆ ಯತ್ನಕ್ಕೆ ಯಶಸ್ಸು. ಉದ್ಯೋಗ ಕ್ಷೇತ್ರ ದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ.
ಮಕರ: ಪರಿಸರದಲ್ಲಿ ಅನಿರೀಕ್ಷಿತ ಘಟನೆ ಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಲೆಕ್ಕಪರಿಶೋಧಕರು, ಮೊದಲಾದ ವೃತ್ತಿಪರರಿಗೆ ಸಮಯ ಮಿತಿಯ ಆತಂಕ. ಕಿರಿಯರ ವಿವಾಹ ನಿಶ್ಚಯ.
ಕುಂಭ: ಉದ್ಯೋಗ ರಂಗದಲ್ಲಿ ಗಮನಾರ್ಹ ಮುನ್ನಡೆ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ. ಬಂಧುವರ್ಗದಲ್ಲಿ ಶುಭಕಾರ್ಯ.
ಮೀನ: ಏಳೂವರೆ ಶನಿಯ ಪ್ರಭಾವವಿದ್ದರೂ ಶುಭಫಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರವಾದ ಆದಾಯ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ದೇವೀಕ್ಷೇತ್ರ ದರ್ಶನ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.