ಇಂದಿನ ಗ್ರಹಬಲ: ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೆ ಪಟ್ಟಾರು!
Team Udayavani, Mar 20, 2021, 7:42 AM IST
20-03-2021
ಮೇಷ: ಹಂತಹಂತವಾಗಿ ಗೊಂದಲಗಳು ತಿಳಿಯಾಗಲಿವೆ. ಕೆಲವೊಮ್ಮೆ ಅದೃಷ್ಟದ ಆಸರೆಯು ಗೋಚರಕ್ಕೆ ಬರುತ್ತವೆ. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳುವುದು.
ವೃಷಭ: ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಹಿರಿಯರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು. ಆರ್ಥಿಕ ಪರಿಸ್ಥಿತಿಯು ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಇರುವುದು.
ಮಿಥುನ: ದೂರ ಸಂಚಾರ ಹಾಗೂ ಚಾಲನೆಯಲ್ಲಿ ನಿಮ್ಮ ಗಮನವು ಸರಿಯಾಗಿರಲಿ. ವಿಲಾಸೀ ಸಾಮಾಗ್ರಿಗಳ ಖರೀದಿ, ಚಿನ್ನ, ಬೆಳ್ಳಿ ಸಾಮಗ್ರಿಗಳ ಖರೀದಿಗೆ ಖರ್ಚು ಬರಲಿದೆ. ಆದರೆ ಸಂತೋಷ ಸಮಾಧಾನವಿರುತ್ತದೆ.
ಕರ್ಕ: ಶಾಸ್ತ್ರ ಪ್ರವೃತ್ತಿ ಹಾಗೂ ಶೈಕ್ಷಣಿಕ ವರ್ಗದವರಿಗೆ ಹೆಚ್ಚಿನ ಧನ ಸಂಗ್ರಹವಾಗಲಿದೆ. ಮನೆಯಲ್ಲಿ ಗೃಹಿಣಿಗೆ ಬಿಡುವೇ ದೊರಕದು. ಮಕ್ಕಳ ಅಭಿವೃದ್ಧಿಯಿಂದ ಸಂತಸವಾಗಲಿದೆ. ಸಹನೆ, ತಾಳ್ಮೆಯ ಅಗತ್ಯವಿದೆ.
ಸಿಂಹ: ಸರಕಾರೀ ಕೆಲಸ ಕಾರ್ಯಗಳಲ್ಲಿ ಮತ್ತು ಕಡತ ವಿಲೇವಾರಿಯಲ್ಲಿ ಒತ್ತಡ ಕಂಡುಬಂದೀತು. ದೂರಸಂಚಾರ ಸಂತಸ ಹಾಗೂ ಕೆಲಸದಲ್ಲಿ ಜಯ ತರಲಿದೆ. ಮನಸ್ಸು ನಿಗ್ರಹಿಸುವ ಅಗತ್ಯವಿದೆ. ಯೋಗ ಮಾಡಿರಿ.
ಕನ್ಯಾ: ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೆ ಪಟ್ಟಾರು. ರಾಜಕೀಯ ವೃತ್ತಿಯವರಿಗೆ ಸಮಾಧಾನ ಸಿಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪರದೇಶದ ಪ್ರಯಾಣ ಕೂಡಿಬಂದೀತು. ಪ್ರಯತ್ನಕ್ಕೆ ತಕ್ಕ ಪ್ರತಿಫಲವಿದೆ.
ತುಲಾ: ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ನೆಮ್ಮದಿ ಯನ್ನು ಕಾಪಾಡಿಕೊಳ್ಳಿರಿ. ಪತ್ನಿಯ ಸಮಾಧಾನಕ್ಕಾಗಿ ಖರ್ಚು ಮಾಡಬೇಕಾಗಿ ಬರಬಹುದು. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಪ್ರಗತಿ ತೋರಿ ಬರಲಿದೆ. ಶುಭವಿರುತ್ತದೆ.
ವೃಶ್ಚಿಕ: ಪ್ರವಾಸದಿಂದ ಸಂತಸವಾಗಲಿದೆ. ಪ್ರಯತ್ನ ಬಲದಲ್ಲಿ, ವಿಶೇಷ ರೂಪದಲ್ಲಿ ಯಶಸ್ಸು ನಿಶ್ಚಿತವಾಗಲಿದೆ. ಆಗಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಸಂತೃಪ್ತಿ ಜೀವನ ನಿಮ್ಮದು. ಭೂವ್ಯವಹಾರದಲ್ಲಿ ಲಾಭವಿದೆ.
ಧನು: ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದು ಹೆಸರು ಗಳಿಸಬಹುದು. ಶೇರು ವ್ಯವಹಾರದಲ್ಲಿ ಹಣ ತೊಡಗಿಸದಿರಿ. ಮಂಗಲ ಕಾರ್ಯದ ಸಂಭ್ರಮವು ತೋರಿ ಬರಲಿದೆ. ಸಾಮಾಜಿಕವಾಗಿ ಮನ್ನಣೆ, ಪುರಸ್ಕಾರ ಲಭಿಸಲಿದೆ.
ಮಕರ: ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫಲಿತಾಂಶ ಹಾಗೂ ಅವಕಾಶಗಳು ಒದಗಿಬರಲಿದೆ. ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ, ಸೂಕ್ತಸಲಹೆಗಳು ಉಪಯುಕ್ತವೆನಿಸಲಿದೆ. ಬೇಸಾಯಗಾರರಿಗೆ ಲಾಭಾಂಶ ಕಡಿಮೆ.
ಕುಂಭ: ಮಾನಸಿಕವಾಗಿ ನೆಮ್ಮದಿ ಕಡಿಮೆಯಾಗಲಿದೆ. ವೃತ್ತಿರಂಗದಲ್ಲಿ ನಿಮ್ಮ ದಬ್ಟಾಳಿಕೆಯನ್ನು ಕಡಿಮೆ ಮಾಡಿರಿ. ಪ್ರತಿಯೊಬ್ಬರೊಡನೆ ಪ್ರೀತಿ, ಸ್ನೇಹ ಸೌಹಾರ್ದದಿಂದ ಬೆರೆಯಿರಿ. ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯಿರಿ.
ಮೀನ: ಅವಿವಾಹಿತರಿಗೆ ವೈವಾಹಿಕ ಭಾಗ್ಯಕ್ಕೆ ಹೊಸ ಸಂಬಂಧಗಳು ಒದಗಿ ಬರಲಿವೆ. ನಿರುದ್ಯೋಗಿಗಳ ಅಲೆದಾಟವು ಮುಕ್ತಾಯವಾಗಲಿದೆ. ಧನಾಗಮನವು ಉತ್ತಮವಿದ್ದರೂ ಸ್ವಪ್ರತಿಷ್ಠೆಗಾಗಿ ಧನವ್ಯಯವು ಕಂಡುಬಂದೀತು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.