Horoscope: ಒಳ್ಳೆಯ ಕೆಲಸಗಳನ್ನೇ ಮಾಡುವ ಹಂಬಲ ನಿಮ್ಮದಾಗಲಿದೆ
Team Udayavani, Oct 15, 2024, 7:36 AM IST
ಮೇಷ: ಅಂದಾಜಿನಲ್ಲಿ ಹೆಚ್ಚುಕಡಿಮೆಯಾಗಿ ತಾತ್ಕಾಲಿಕ ತೊಂದರೆ. ದೈವಾನುಗ್ರಹದಿಂದ ಅನಾರೋಗ್ಯ ನಿವಾರಣೆ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ.
ವೃಷಭ: ಒಳ್ಳೆಯ ಕೆಲಸಗಳನ್ನೇ ಮಾಡುವ ಹಂಬಲ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ರಸಗೊಬ್ಬರ ಮೊದಲಾದ ವಸ್ತುಗಳ ವ್ಯಾಪಾರಿಗಳಿಗೆ ಶುಭ ಸೂಚನೆ.
ಮಿಥುನ: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ. ಕ್ಷಣಿಕ ಅನಾರೋಗ್ಯಕ್ಕೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ.
ಕರ್ಕಾಟಕ: ವ್ಯವಹಾರದಲ್ಲಿ ತ್ವರಿತವಾಗಿ ಕಾರ್ಯ ಸಾಧಿಸುವ ಹಂಬಲ. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ಮಕ್ಕಳ ವ್ಯಾಸಂಗಕ್ಕೆ ಹೆಚ್ಚಿನ ಮಾರ್ಗದರ್ಶನ ಅವಶ್ಯ.
ಸಿಂಹ: ಕಾರ್ಯಸಾಧನೆಯಲ್ಲಿ ಅನೂಹ್ಯ ಮುನ್ನಡೆ. ಕಾರ್ಯಕ್ಷೇತ್ರದ ವಿಸ್ತರಣೆಗೆ ಒತ್ತಾಯ. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ.
ಕನ್ಯಾ: ಕುಲದೇವರ ದರ್ಶನದಿಂದ ದೀರ್ಘಕಾಲೀನ ಸಮಸ್ಯೆ ನಿವಾರಣೆ. ಸಣ್ಣ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ಹೊಸ ಬಗೆಯ ಚಿಕಿತ್ಸಾ ಪದ್ಧತಿ ಯಿಂದ ಪ್ರಯೋಜನ.
ತುಲಾ: ಸಾಂಸಾರಿಕ ಸುಖ ವೃದ್ಧಿ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆ ಸುಗಮ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ.
ವೃಶ್ಚಿಕ: ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ. ವಿದೇಶದಲ್ಲಿರುವ ಪುತ್ರನಿಗೆ ಪದೋನ್ನತಿ. ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ.
ಧನು: ಧಾರ್ಮಿಕ ಕ್ಷೇತ್ರದಲ್ಲಿ ಗೌರವ. ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಆದಾಯ. ದಾಯಾದಿ ಕಲಹ ಮಾತುಕತೆಯಲ್ಲಿ ಪರಿಹಾರ.
ಮಕರ: ಸಾಂಸಾರಿಕ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಅನುಭವ ಇರುವ ಕೆಲಸ ವೊಂದನ್ನು ವಹಿಸಿಕೊಳ್ಳಲು ಆಹ್ವಾನ. ವಾಹನ ದುರಸ್ತಿ ಕೆಲಸಗಾರರಿಗೆ, ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ. ತಾಯಿಯ ಆರೋಗ್ಯ ಸುಧಾರಣೆ.
ಕುಂಭ: ಏಳೂವರೆ ಶನಿಯ ಪ್ರಭಾವದಿಂದ ನೆಮ್ಮದಿ ದೂರ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಆಯ್ದ ವ್ಯಾಪಾರಿಗಳಿಗೆ ಬೇಡಿಕೆಗೆ ಸ್ಪಂದಿಸುವ ಸವಾಲು. ದೂರದಲ್ಲಿರುವ ಬಂಧುಗಳ ಆಗಮನ. ಆಪ್ತವರ್ಗದಲ್ಲಿ ಶುಭಕಾರ್ಯಕ್ಕೆ ನೆರವು. ದೇವಾಲಯಕ್ಕೆ ಭೇಟಿ.
ಮೀನ: ಉದ್ಯೋಗಸ್ಥರಿಗೆ ಹೊಸ ವಿಭಾಗದ ಹೊಣೆಗಾರಿಕೆ.ಸಾಮಾಜಿಕ ರಂಗದಿಂದ ಒತ್ತಡ. ಹಳೆಯ ಪಾಲುದಾರರ ಪುನರ್ಮಿಲನ. ಹೊಸ ವ್ಯವಹಾರ ಆರಂಭಿಸುವ ಕುರಿತು ಮಾತುಕತೆ. ಸಂಸಾರದಲ್ಲಿ ಪ್ರೀತಿ, ಅನುರಾಗ, ವಿಶ್ವಾಸ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.