Daily Horosocpe: ವ್ಯಾಪಾರಿಗಳಿಗೆ ಅದೃಷ್ಟ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
Team Udayavani, Dec 2, 2024, 7:32 AM IST
ಮೇಷ: ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳ ಮೊದಲನೆಯ ಸಪ್ತಾಹ! ಉದ್ಯೋಗಿಗಳಿಗೆ, ಉದ್ಯಮಿಗಳಿಗೆ ನೆಮ್ಮದಿ. ವಸ್ತ್ರ, ಸಿದ್ಧ ಉಡುಪು, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅದೃಷ್ಟ. ಮಹಿಳಾ ಉದ್ಯಮಿಗಳಿಗೆ ಯಶಸ್ಸು.
ವೃಷಭ: ಹಳೆಯ ಕ್ಷೇತ್ರದ ಹೊಸ ವಿಭಾಗಕ್ಕೆ ಪ್ರವೇಶ. ಸಿದ್ಧ ಉಡುಪುಗಳು ಹಾಗೂ ಶೋಕಿ ವಸ್ತುಗಳಿಗೆ ಅಧಿಕ ಬೇಡಿಕೆ. ಶಿಕ್ಷಿತ ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ.
ಮಿಥುನ: ನಿಧಾನ, ಕ್ರಮಬದ್ಧ ನಡೆಯಿಂದ ಯಶಸ್ಸು. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಅಪಾತ್ರರಿಗೆ ಸಲಹೆ ನೀಡಿ ಅವಮಾನ. ಕೆಲವು ವರ್ಗದ ವ್ಯಾಪಾರಿಗಳಿಗೆ ಹೇರಳ ಲಾಭ. ಗಣ್ಯ ವ್ಯಕ್ತಿಯ ಗೆಳೆತನದಿಂದ ಅನುಕೂಲ.
ಕರ್ಕಾಟಕ: ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ವಿಳಂಬ. ಸರಕಾರಿ ಸೌಲಭ್ಯಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಚಾರಿತ್ರ್ಯವಂತರ ಹೆಸರು ಕೆಡಿಸಲು ಸಂಚು.
ಸಿಂಹ: ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಕುಟುಂಬಸ್ಥರ ಮನೆಯಲ್ಲಿ ಶುಭಕಾರ್ಯ. ಹಿರಿಯರು, ಗೃಹಿಣಿಯರು, ಮಕ್ಕಳು ಎಲ್ಲರಿಗೂ ಉತ್ತಮ ಆರೋಗ್ಯ. ವ್ಯವಹಾರ ನಿಮಿತ್ತ ಪ್ರಯಾಣ ಮುಂದೂಡಿಕೆ.
ಕನ್ಯಾ: ಹೊಸ ವ್ಯವಹಾರದಲ್ಲಿ ಲಾಭದ ಅನು ಭವ. ಹಿರಿಯರ ಆಸ್ತಿಯಲ್ಲಿ ಕೃಷಿಯ ಕಡೆಗೆ ಗಮನ. ಪಾಲುದಾರಿಕೆಯಲ್ಲಿ ಪಾರದರ್ಶಕತೆಯಿಂದ ಅಭಿವೃದ್ಧಿ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಕುಟುಂಬದ ಹಿರಿಯ ಹಿತೈಷಿ ಆಗಮನ.
ತುಲಾ: ಹಿತಶತ್ರುಗಳ ಕಾಟದಿಂದ ಮುಕ್ತಿ. ಪೈಪೋಟಿ ಎದುರಿಸಲು ಉದ್ಯಮಿಗಳ ಸಿದ್ಧತೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಭರವಸೆಯ ಸೂಚನೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಸಾರ್ವಜನಿಕ ವ್ಯಕ್ತಿಗಳಿಗೆ ಮುಖಭಂಗ.
ವೃಶ್ಚಿಕ: ಸರ್ವವಿಧದಲ್ಲೂ ಉತ್ತಮವಾಗಿರುವ ಪರಿಸ್ಥಿತಿ. ಉದ್ಯೋಗಸ್ಥರ ಸ್ಥಾನ ಗೌರವ ಅಬಾಧಿತ. ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ. ದುಶ್ಚಟಗಳನ್ನು ದೂರವಿಡಲು ಯುವಕರಿಗೆ ಸಹಾಯ.
ಧನು: ಉದ್ಯೋಗ ಘಟಕದ ಕಾರ್ಯ ಸುಧಾರಣೆಯ ಹೊಣೆಗಾರಿಕೆ. ಉದ್ಯಮದ ವೈವಿಧ್ಯೀಕರಣ ಕ್ರಮ ಮುನ್ನಡೆ. ಅಶಕ್ತರಿಗೆ ಸರಕಾರಿ ನೆರವು ಸಿಗದಂತೆ ಅಡ್ಡಗಾಲು. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ. ವ್ಯವಹಾರದ ಕುರಿತು ಆತ್ಮೀಯರೊಡನೆ ಸಮಾಲೋಚನೆ.
ಮಕರ: ಸಾಮರ್ಥ್ಯ ಪರೀಕ್ಷೆಯಲ್ಲಿ ವಿಜಯ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ವ್ಯಾಪಾರಿ ವರ್ಗಕ್ಕೆ ಸಾಮಾನ್ಯ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಶಿಕ್ಷಕ ವೃಂದಕ್ಕೆ ಹೆಚ್ಚುವರಿ ಕೆಲಸದ ಒತ್ತಡ.
ಕುಂಭ: ಕೆಲಸ, ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಅಧಿಕ ಕೆಲಸದ ಚಿಂತೆ. ಅಲ್ಪಾವಧಿ ಹೂಡಿಕೆಗಳಲ್ಲಿ ನಷ್ಟವಾಗುವ ಭೀತಿ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ.
ಮೀನ: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಮೆಚ್ಚುಗೆ. ಪುನರಾರಂಭಗೊಂಡ ಉದ್ಯಮ ಮುನ್ನಡೆ. ಇಲಾಖೆಗಳ ಸಹಕಾರವಿದ್ದರೂ ಕಾರ್ಯ ವಿಳಂಬ. ಹೊಸ ವ್ಯವಹಾರ ಆರಂಭಿಸಿದ ಬಂಧುವಿಗೆ ಮಾರ್ಗದರ್ಶನ. ಹಿರಿಯ ಅಧಿಕಾರಿಯ ಪರಿಚಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.