ಸೋಮವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 22, 2022, 7:17 AM IST
ಮೇಷ : ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್ ಚತುರತೆ. ಗುರುಹಿರಿಯರಿಂದ ಸಂತೋಷ.
ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.
ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ ಮಕ್ಕಳ ನಿಮಿತ್ತ ಶ್ರಮ. ಸ್ವತ್ಛತೆಗೆ ಆದ್ಯತೆ ನೀಡಿ.
ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾಗಮನ. ಮನಃ ಸತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ. ಗುರು ಹಿರಿಯರ ಆಶೀರ್ವಾದದಿಂದ ಶ್ರೇಯಸ್ಸು.
ಸಿಂಹ : ಆರೋಗ್ಯ ಸುದಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯವೃದ್ಧಿಯಾಗುವುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ. ದಾಂಪತ್ಯ ಸುಖ ವೃದ್ಧಿ.
ಕನ್ಯಾ : ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ನೇತೃತ್ವ. ಗುರುಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ. ಜಲಚರ ವ್ಯವಹಾರದಿಂದ ಲಾಭ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ತುಲಾ: ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ನೂತನ ಮಿತ್ರರ ಸಮಾಗಮ. ಧರ್ಮ ಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮೇಲಧಿಕಾರಿಗಳಿಂದ ಗುರುಗಳಿಂದ ಪ್ರೋತ್ಸಾಹ ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ ವಿದ್ಯಾರ್ಥಿಗಳಿಗೆ ಉತ್ತಮ.
ವೃಶ್ಚಿಕ: ಅಧಿಕ ಶ್ರಮವಹಿಸಿ ಮಿತ್ರರ ಸಹಯೋಗದಿಂದ ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು. ವ್ಯವಹಾರದಲ್ಲಿ ಉತ್ತಮ ಅವಕಾಶ ಅಭಿವೃದ್ಧಿ. ಅತಿಥಿ ಮಹನೀಯರ ಸಂಪರ್ಕದಿಂದ ಸಂತೋಷ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸಮಯ.
ಧನು: ಗುರುಹಿರಿಯರಲ್ಲಿ ಮೇಲಧಿಕಾರಿಗಳಲ್ಲಿ ಸಹನೆ ಉದಾರಾತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಧನಾರ್ಜನೆಗೆ ಕೊರತೆ ಇರದು. ಅನಗತ್ಯ ವಾರ್ತೆಗಳಿಗೆ ಕಿವಿಗೊಡದಿರಿ. ದಂಪತಿಗಳು ಪಾಲುದಾರರು ಪರಸ್ಪರ ಪ್ರೋತ್ಸಾಹಿಸಿ ನಡೆದರೆ ಉತ್ತಮ ಶುಭ.
ಮಕರ: ವಿದ್ಯಾರ್ಥಿಗಳಿಗೆ ಶ್ರಮ ದಿಂದ ಕಾರ್ಯಲಾಭ. ಮಿತ್ರರಂತೆ ವರ್ತಿಸುವ ವ್ಯಕ್ತಿಗಳಿಂದಲೂ ಜಗಳ ಮಾಡುವ ಪ್ರವೃತ್ತಿಯವರಿಂದಲೂ ಇಂದು ನಿಮಗೆ ಸ್ವಲ್ಪ ಕಿರಿಕಿರಿ ತೋರಿದರೂ ಬಹಳ ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.
ಕುಂಭ: ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ನಿಷ್ಠುರ ಮಾಡದೇ, ಪ್ರೋತ್ಸಾಹಿಸಿ. ನಿರೀಕ್ಷಿತ ಶುಭಫಲ ಅನುಭವಿಸಿ. ದೂರ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಉನ್ನತ ಅಧಿಕಾರಿಗಳಿಂದ ಲಾಭ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ.
ಮೀನ: ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿ. ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ಕಾರ್ಮಿಕ ವರ್ಗದವರಿಗೆ ಪ್ರೋತ್ಸಾಹಿಸಿ. ನಿರೀಕ್ಷಿತ ಲಾಭ ಪಡೆಯಿರಿ. ಉದ್ಯೋಗದಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳು, ಆಳವಾದ ಅಧ್ಯಯನಶೀಲರಿಗೆ ಉತ್ತಮ ಶುಭ ಫಲ. ರಾಜಕೀಯ ಕ್ಷೇತ್ರದಲ್ಲಿ ಗುಟ್ಟಿನ ವ್ಯವಹಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.